ಹೆಮ್ಮಾಡಿ :ನಕರಾತ್ಮಕ ಯೋಚನೆಗಳು ಅಪಾಯಕಾರಿ – ಈಶ್ವರ ಮಲ್ಪೆ

0
94

Click Here

ಹೆಮ್ಮಾಡಿ ಜನತಾ ಪದವಿ ಪೂರ್ವ ಕಾಲೇಜಿನಲ್ಲಿ ಜನತಾ ಆವಿಷ್ಕಾರ್ 2k24 ಬ್ಯುಸಿನೆಸ್ ಡೇ ಉದ್ಘಾಟನೆ

 

ಕುಂದಾಪುರ ಮಿರರ್ ಸುದ್ದಿ…


ಕುಂದಾಪುರ :ವಿದ್ಯಾರ್ಥಿಗಳು ಕಲಿಕೆಗೆಯೇ ಹೆಚ್ಚಿನ ಒತ್ತು ನೀಡಬೇಕು. ನಮ್ಮಲ್ಲಿ ನಕರಾತ್ಮಕ ಯೋಚನೆಗಳು ಬರಬಾರದು. ಮೊಬೈಲು ಬಳಕೆ ಕಡಿಮೆ ಮಾಡಬೇಕು. ಇವತ್ತು ಬಹುತೇಕ ಅವಘಡಗಳಿಗೆ ಮೊಬೈಲ್ ಬಳಕೆಯೇ ನೆಪವಾಗುತ್ತಿದೆ. ಆತ್ಮಹತ್ಯೆಯಂತಹ ನಕರಾತ್ಮಕ ಯೋಚನೆಗಳು ಮನಸ್ಸಿನಲ್ಲಿ ಮೂಡಬಾರದು ಎಂದು ಪ್ರಸಿದ್ಧ ಮುಳುಗುತಜ್ಞ ಈಶ್ವರ ಮಲ್ಪೆ ಹೇಳಿದರು.

ನ.12ರಂದು ಹೆಮ್ಮಾಡಿ ಜನತಾ ಪದವಿ ಪೂರ್ವ ಕಾಲೇಜಿನಲ್ಲಿ ಜನತಾ ಆವಿಷ್ಕಾರ್ 2k24 ಬ್ಯುಸಿನೆಸ್ ಡೇ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳಲ್ಲಿ ವ್ಯವಹಾರದ ಕೌಶಲ್ಯವನ್ನು ಉಂಟು ಮಾಡುವುದು ಇವತ್ತಿನ ಕಾಲಘಟ್ಟದಲ್ಲಿ ತುಂಬಾ ಅಗತ್ಯವಿದೆ. ವ್ಯವಹಾರ ಹೇಗೆ ಮಾಡಬೇಕು ಎಂದು ತಿಳಿದುಕೊಳ್ಳಲು ಅನುಕೂಲ. ಮುಂದೆ ದೊಡ್ಡ ದೊಡ್ಡ ಸಾಧನೆ ಮಾಡಲು ಇದು ಪ್ರೇರಕವಾಗುತ್ತದೆ. ಶಿಕ್ಷಣದೊಂದಿಗೆ ಇಂಥಹ ಜೀವನವಶ್ಯಕ ಕಾರ್ಯಕ್ರಮಗಳನ್ನು ಮಾಡುವುದು ಅರ್ಥಪೂರ್ಣ ಎಂದು ಹೇಳಿದರು.

Click Here

ಇನ್ನೊರ್ವ ಮುಖ್ಯ ಅತಿಥಿ ಸಮಾಜಸೇವಕ ರವಿ ಕಟಪಾಡಿ ಮಾತನಾಡಿ, ಬದುಕು ನಾವು ಭಾವಿಸಿದಂತೆ ಇರುವುದಿಲ್ಲ. ನನ್ನ ಸೇವಾಪ್ರವೃತ್ತಿಗೆ ನಾವು ಯಾರಿಗಾದರೂ ಉಪಕಾರ ಮಾಡಬೇಕೇ ಹೊರತು ಉಪದ್ರ ಕೊಡಬಾರದು. ಎನಿಲ್ಲದಿದ್ದರೆ ಯಾರೂ ಇಲ್ಲ. ನಾವು ಕಷ್ಟಪಡಬೇಕು. ಕಷ್ಟಪಟ್ಟು ಮೇಲೆ ಬಂದರೆ ಸಂಬAಧಿಕರು ಎಲ್ಲರೂ ಹತ್ತಿರ ಬರುತ್ತಾರೆ. ಹಾಗಾಗಿ ನಾವು ಸಾಧಿಸಿ ಎನೆಂಬುದನ್ನು ಸಾಧಿಸಿ ತೋರಿಸಿಬೇಕು. ಅಂಥಹ ಸಾಧನೆಗಳಿಗೆ ಇಂಥಹ ವೇದಿಕೆಗಳು ಪೂರಕವಾಗುತ್ತವೆ ಎಂದರು.

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಬಾಬು ಶೆಟ್ಟಿ ಮಾತನಾಡಿ ಖಾಸಗಿ ಕಾಲೇಜುಗಳಲ್ಲಿ ಕಲಾ ವಿಭಾಗಕ್ಕೆ ಅವಕಾಶ ಕಡಿಮೆ. ಜನತಾ ಸಂಸ್ಥೆಯಲ್ಲಿ ಮುಂದಿನ ದಿನಗಳಲ್ಲಿ ಕಲಾ ವಿಭಾಗವೂ ಆರಂಭವಾಗಲಿ ಎಂದರು.

ವಿದ್ಯಾರ್ಥಿಸೃಷ್ಟಿ ಇನ್ಫೋಟೆಕ್‌ನ ಹರ್ಷವರ್ಧನ್ ಶೆಟ್ಟಿ, ಪ್ರಗತಿ ವಿವಿಧೋದ್ದೇಶ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಕುಂದಾಪುರ ಸಿಟಿ ಜೇಸಿಐ ಅಧ್ಯಕ್ಷ ರಾಘವೇಂದ್ರ ಕುಲಾಲ್, ಗೋವ ಉದ್ಯಮಿ ಸುರೇಶ ಪೂಜಾರಿ, ರಾಜಾರಾಮ ಗುರೂಜಿ ಯಡಮೊಗೆ, ಜನತಾ ಸಂಸ್ಥೆಯ ಮಾರ್ಗದರ್ಶಕರಾದ ಚಿತ್ರ ಕಾರಂತ, ಜನತಾ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮಂಜು ಕಾಳಾವರ, ಜನತಾ ಇಂಗ್ಲಿಷ್ ಮಿಡಿಯಂ ಸ್ಕೂಲ್‌ನ ಮುಖ್ಯ ಶಿಕ್ಷಕಿ ದೀಪಿಕಾ ಆಚಾರ್ಯ, ಸಂಸ್ಥೆಯ ಉಪ ಪ್ರಾಂಶುಪಾಲ ರಮೇಶ ಪೂಜಾರಿ ಉಪಸ್ಥಿತರಿದ್ದರು,

ಜನತಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು, ಅಧ್ಯಕ್ಷರೂ ಆಗಿರುವ ಗಣೇಶ ಮೊಗವೀರ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅರ್ಥಶಾಸ್ತç ವಿಭಾಗದ ಮುಖ್ಯಸ್ಥ ಪ್ರಶಾಂತ್ ವಂದಿಸಿದರು. ಉಪನ್ಯಾಸಕ ಉದಯ ನಾಯ್ಕ್ ಕಾರ್ಯಕ್ರಮ ನಿರ್ವಹಿಸಿದರು.

ವಿದ್ಯಾರ್ಥಿಗಳಿಗೆ ಶಿಕ್ಷಣದೊಂದಿಗೆ ಮಾನವೀಯ ಮೌಲ್ಯಗಳನ್ನು ಕೊಡುವ ಪ್ರಯತ್ನವನ್ನು ಮಾಡುತ್ತಿದ್ದೇವೆ. ಇವತ್ತಿನ ಒತ್ತಡದ ದಿನಗಳನ್ನು ಎದುರಾಗುವ ಸವಾಲುಗಳನ್ನು ಎದುರಿಸಲು ಆತ್ಮವಿಶ್ವಾಸ, ಧೈರ್ಯ ಅಗತ್ಯವಾಗುತ್ತದೆ. ಮುಂದಿನ ದಾರಿಗಳ ಬಗ್ಗೆ ಸ್ಪಷ್ಟತೆ ಮೂಡುತ್ತದೆ. ಆ ಹಿನ್ನೆಯಲ್ಲಿ ಈ ವ್ಯವಹಾರ ಮೇಳವನ್ನು ಆಯೋಜಿಸಲಾಗಿದೆ-ಗಣೇಶ ಮೊಗವೀರ, ಪ್ರಾಂಶುಪಾಲರು.

ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಸುಮಾರು ೫೦ ಮಳಿಗೆಗಳನ್ನು ತೆರೆದಿದ್ದರು. ವೈವಿಧ್ಯಮಯವಾದ ಮಳಿಗೆಗಳು ವಿದ್ಯಾರ್ಥಿಗಳ ವ್ಯವಹಾರ ಕೌಶಲ್ಯವನ್ನು ವೃದ್ಧಿಸುವಲ್ಲಿ ಸಹಕಾರಿಯಾಯಿತು. ತಿಂಡಿ ತಿನಿಸು ಸ್ಟಾಲ್‌ಗಳು, ಸಸ್ಯಹಾರಿ, ಮಾಂಸಹಾರಿ ಹೋಟೆಲ್, ಐಸ್ ಕ್ರೀಮ್, ತಂಪು ಪಾನೀಯ, ಎಳನೀರು, ಪೋಟಾಟೋ ಟ್ರಿಸ್ಟರ್, ಸಿಹಿ ತಿಂಡಿ ಸ್ಟಾಲ್, ಚರ್ಮುರಿ, ಉಪ್ಕರಿ, ಚಾಟ್ಸ್, ಹಾರರ್ ಜೂಮ್, ಗೇಮ್ಸ್, ನರ್ಸರಿ, ದಿನಬಳಕೆ ವಸ್ತುಗಳು, ಕರಿದ ತಿನಿಸುಗಳು, ಗೋಲಿ ಸೋಡ, ಜ್ಯೂಸ್, ಬಟ್ಟೆ, ಮೆಹಂದಿ, ಸ್ಟೇಷನರಿ ವಸ್ತುಗಳ ಮಳಿಗೆ ಇತ್ಯಾದಿ ಮಳಿಗೆಗಳು ಇದ್ದವು. ಹೊರಾಂಗಣದಲ್ಲಿ ೫೦ ವಿದ್ಯಾರ್ಥಿಗಳು ಕನ್ನಡ ನಾಡು ನುಡಿಯನ್ನು ಬಿಂಬಿಸುವ ನೃತ್ಯವನ್ನು ಪ್ರದರ್ಶಿಸಿದರು.

LEAVE A REPLY

Please enter your comment!
Please enter your name here