ಕುಂದಾಪುರ ಮಿರರ್ ಸುದ್ದಿ…
ಕೋಟ: ಕೋಟ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇವಳ ಜಾತ್ರೋತ್ಸವದಲ್ಲಿ ಸಂಪೂರ್ಣ ಪ್ಲಾಸ್ಟಿಕ್ ಮುಕ್ತ ಗೊಳಿಸುವ ಅಭಿಯಾನಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಎರಡನೇ ದಿನವಾದ ಬುಧವಾರ 2019ರಂತಯೇ ಪ್ಲಾಸ್ಟಿಕ್ ಮುಕ್ತ ಜಾತ್ರೆ ಜನಬೆಂಬಲ ದೊರೆತ್ತಿದ್ದು , ಗೀತಾನಂದ ಫೌಂಡೇಶನ್ ಕೊಡಮಾಡಿದ ಸುಮಾರು 1500ಕ್ಕೂ ಅಧಿಕ ಬಟ್ಟೆ ಕೈಚೀಲಕ್ಕೆ ಭಕ್ತಾಧಿಗಳು ಫಿದಾ ಹೇಳಿದ್ದಾರೆ.
2019ರಲ್ಲಿ ಮೊಟ್ಟ ಮೊದಲಬಾರಿ ಪ್ಲಾಸ್ಟಿಕ್ ಮುಕ್ತ ಜಾತ್ರೆಯಾಗಿಸಿದ್ದು ಸುಮಾರು ,80ಶೇಕಡಾ ಪ್ಲಾಸ್ಟಿಕ್ ಮುಕ್ತಗೊಳಿಸಿ ಯಶಸ್ವಿಯಾಗಿತ್ತು.ಇದಾಗಿ ಕೊರೋನಾ ಕಾಲಘಟ್ಟ ಹೊರತುಪಡಿಸಿ ಇದೀಗ ಮತ್ತೆ ಜನಸಾಮಾನ್ಯರಲ್ಲಿ ಪ್ಲಾಸ್ಟಿಕ್‍ನ ಬಗ್ಗೆ ಅರಿವು ಮೂಡಿಸು ಪ್ರಕ್ರಿಯೆ ಮಾಡಲಾಗಿದೆ.
ಪ್ಲಾಸ್ಟಿಕ್ ಮುಕ್ತ ಕೇಂದ್ರಕ್ಕೆ ಗಣ್ಯರ ಭೇಟಿ
ಕೋಟ ಜಾತ್ರೆಯನ್ನು ಪ್ಲಾಸ್ಟಿಕ್ ಮುಕ್ತಗೊಳಿಸುವ ಅಭಿಯಾನಕ್ಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಂಗಳವಾರ ಚಾಲನೆ ನೀಡಿದ್ದು ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ಸಂಪೂರ್ಣ ಸಹಕಾರ ನೀಡಿದ್ದಾರೆ. ಕೋಟದ ಪಂಚವರ್ಣ ಯುವಕ ಮಂಡಲ ಹಾಗೂ ಅದರ ಮಹಿಳಾ ಘಟಕ , ಕೋಟ ಗ್ರಾಮಪಂಚಾಯತ್ , ಗೀತಾನಂದ ಫೌಂಡೇಶನ್, ಕೋಟ ಗ್ರಾ.ಪಂ ಅದರ ಘನ ಹಾಗೂ ದ್ರವ ತ್ಯಾಜ್ಯ ಘಟಕದ ಮುಖ್ಯಸ್ಥೆ ಲೋಲಾಕ್ಷಿ ಕೊತ್ವಾಲ್,ಕೋಟ ಲಕ್ಷ್ಮೀ ಸೋಮಬಂಗೇರ ಸ.ಪ್ರ ಕಾಲೇಜಿನ ಎನ್ ಎಸ್ ಎಸ್ ಘಟಕದ ವಿದ್ಯಾರ್ಥಿಗಳು, ನಿಸ್ವಾರ್ಥ ಸೇವಾ ಟ್ರಸ್ಟ್ ಕೋಟ, ,ಮಣೂರು ಫ್ರೆಂಡ್ಸ್ ,ವಿಪ್ರಮಹಿಳಾ ಬಳಗ ಸಾಲಿಗ್ರಾಮ,ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ಇದರ ಪದಾಧಿಕಾರಿಗಳು ಜನಸಾಮಾನ್ಯರಿಗೆ ಪ್ಲಾಸ್ಟಿಕ್ ಕುರಿತಂತೆ ಮಾಹಿತಿ ನೀಡಿ ಪ್ಲಾಸ್ಟಿಕ್ ಮುಕ್ತ ಜಾತ್ರೆಗೆ ಯಶಸ್ವಿಯಾಗಿಸಲು ಪಣತೊಟ್ಟರು. ವಿವಿಧ ಸ್ಥಳೀಯಾಡಳಿತ ಜನಪ್ರತಿನಿಧಿಗಳು, ಅಧಿಕಾರಿಗಳು , ಗಣ್ಯ ವ್ಯಕ್ತಿಗಳು ಕೇಂದ್ರಕ್ಕೆ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿದ್ದಾರೆ.ಪಂಚವರ್ಣ ಸಂಸ್ಥೆಯಿಂದ ಪ್ರೋಜೆಕ್ಟರ್ ಪರದೆಯ ಮೂಲಕ ಜನಸಾಮಾನ್ಯರಿಗೆ ಜಾಗೃತಿ ಮೂಡಿಸಿತ್ತು.