ಕುಂದಾಪುರ : ಬೈಲೂರು ಸರಕಾರಿ ಶಾಲೆ ಬಣ್ಣದ ಗರಿ ಶತ ಸಂಭ್ರಮ – 2023

0
314

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಬೈಲೂರು ಸರಕಾರಿ ಶಾಲೆ ಅಭಿವೃದ್ದಿಯಲ್ಲಿ ಮಾದರಿ ಶಾಲೆಯಾಗಿದೆ. ಸರಕಾರಿ ಶಾಲೆ ಬೆಳವಣಿಗೆ ಹಾಗೂ ಉಳಿವಿಗೆ ಊರವರ ಸಹಕಾರ ಅಗತ್ಯವಿದೆ” ಎಂದು ಬೈಂದೂರು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಹೇಳಿದರು.

ಅವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೈಲೂರು ಮತ್ತು ಹಳೆ ವಿದ್ಯಾಥಿ ಸಂಘ ಬೈಲೂರು ಇವರ ಸಹಯೋಗದೊಂದಿಗೆ ನಡೆದ ಬಣ್ಣದ ಗರಿ ಶತ ಸಂಭ್ರಮ‌ 2023ರ ಹಿರಿಮೆ ಸಭಾ ಸಂಭ್ರಮದ ಅಧ್ಯಕ್ಷತೆಯನ್ನು ವಹಿಸಿ ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.

Click Here

ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಜಯಪ್ರಕಾಶ್‌ ಹೆಗ್ಡೆಯವರು ಶಾಲಾ ಶತಮಾನೋತ್ಸವ ಸ್ಮರಣ ಸಂಚಿಕೆ “ಬಣ್ಣದ ಗರಿ”ಯನ್ನು ಅನಾವರಣ ಮಾಡಿದರು. ಮಾಜಿ ಸಭಾಪತಿ ಪ್ರತಾಪ್‌ಚಂದ್ರ ಶೆಟ್ಟಿ, ಮಂಗಳೂರು ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ರ ಕುಮಾರ್‌ ಕೊಡ್ಗಿ, ಜಿ.ಪಂ.ಮಾಜಿ ಉಪಾಧ್ಯಕ್ಷೆ ಮಮತಾ ಆರ್.ಶೆಟ್ಟಿ, ಶಂಕರನಾರಾಯಣ ಗ್ರಾಪಂ ಅಧ್ಯಕ್ಷೆ ಲತಾ ಡಿ.ಎಸ್‌, ಉಪಾಧ್ಯಕ್ಷ ರವಿ ಕುಲಾಲ್‌, ಸದಸ್ಯರಾದ ಉಮೇಶ್‌ ಶೆಟ್ಟಿ ಕಲ್ಗೆದ್ದೆ, ದಿನಕರ್‌ ಶೆಟ್ಟಿ ಅಂಪಾರು ಅಧ್ಯಕ್ಷರು ಉಡುಪಿ ರಾಜ್ಯ ಸರಕಾರಿ ನೌಕರರ ಸಂಘ, ಸಂತೋಷ್ ಕುಮಾರ್‌ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷರು, ಉದ್ಯಮಿಗಳಾದ ಶ್ರೀನಿವಾಸ್‌ ಶೆಟ್ಟಿ, ಶಶಿಧರ್‌ ಶೆಟ್ಟಿ, ಸಚ್ಚಿದಾನಂದ ವೈದ್ಯ ಅಧ್ಯಕ್ಷರು ಶಂಕರನಾರಾಯಣ ವ್ಯವಸಾಯ ಸೇವಾ ಸಹಕಾರಿ ಸಂಘ ನಿ. ಶಂಕರನಾರಾಯಣ, ಶಿವರಾಮ ಶೆಟ್ಟಿ ಖಾಜಾಂಚಿ ಶತಮಾನೋತ್ಸವ ಸಮಿತಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಶಾಲೆಗೆ ವಿವಿಧ ಕೊಡುಗೆ ನೀಡಿದ ದಾನಿಗಳನ್ನು ಗೌರವಿಸಲಾಯಿತು.

ಜಯಕರ್‌ ಶೆಟ್ಟಿ ಮೂಡುಬೈಲೂರು ಅಧ್ಯಕ್ಷರು ಶಾಲಾ ಶತಮಾನೋತ್ಸವ ಸಮಿತಿ ಸ್ವಾಗತಿಸಿದರು, ಸಹ ಶಿಕ್ಷಕ ಸಂತೋಷ ಪ್ರಸ್ತಾವನೆಗೈದರು. ಮುಖ್ಯ ಶಿಕ್ಷಕಿ ಗಿರಿಜಾ ಡಿ ಶಾಲಾ ವರದಿ ವಾಚಿಸಿದರು. ಶಿಕ್ಷಕರಾದ ನಾರಾಯಣ್‌ ಕೊಠಾರಿ ಕಾರ್ಯಕ್ರಮ ನಿರೂಪಿಸಿದರು, ಶಿಕ್ಷಕ ಆನಂದ್‌ ಕುಲಾಲ್‌ ವಂದಿಸಿದರು.

ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ನಲುಮೆ, ಸುಬ್ರಹ್ಮಣ್ಯ ಐತಾಳ ಬೈಲೂರು ಮತ್ತು ಕಿಶೋರ ಕುಮಾರ ಆರೂರು ಸಂಚಾಲಕರು ಯಕ್ಷಸಿರಿ ಶಂಕರನಾರಾಯಣ ಇವರ ನಿರ್ದೇಶನದಲ್ಲಿ
ತಕಧಿಮಿ ತಕೀಟ ಯಕ್ಷ ಸಂಭ್ರಮದಲ್ಲಿ ಪುಣ್ಯ ಕೋಟಿ ನೃತ್ಯ ರೂಪಕ ಮತ್ತು ಕುಶ ಲವ ಕಾಳಗ ನಡೆಯಿತು.

 

LEAVE A REPLY

Please enter your comment!
Please enter your name here