ಕುಂದಾಪುರ ಮಿರರ್ ಸುದ್ದಿ…
ಅಂಕದಕಟ್ಟೆ: ನಮಗೆ ಉಚಿತವಾಗಿ ಸಿಕ್ಕಿದ್ದು ನಮ್ಮ ದೇಹ ಮಾತ್ರ. ಆದರೆ ನಮ್ಮ ದೇಹದ ಆರೋಗ್ಯ ನಮ್ಮ ಜವಾಬ್ಧಾರಿಯಾದಾಗ ನಾವು ನೆಮ್ಮದಿಯಿಂದಿರಬಹುದು ಎಂದು ಉಡುಪಿ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ನಾಗಭೂಷಣ್ ಉಡುಪ ಹೇಳಿದರು.
ಅವರು ಎಲ್.ಜಿ.ಫೌಂಡೇಶನ್ ಹಂಗಳೂರು ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೋಟೇಶ್ವರ ಪಂಚಾಯತ್, ಪ್ರಸಾದ್ ನೇತ್ರಾಲಯ, ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್, ಡಾ.ಪಿ.ದಯಾನಂದ ಪೈ ಮತ್ತು ಡಾ. ಸತೀಶ್ ಪೈ ಚಾರಿಟೇಬಲ್ ಟ್ರಸ್ಟ್ ಉಡುಪಿ,ಅಕ್ಷಯ ಕಿರಣ ದೇವಾಡಿಗ ದೇವಾಡಿಗ ಸಂಘ ಕೋಟೇಶ್ವರ ವತಿಯಿಂದ ದಿ. ಸುರೇಶ್ ಡಿ ಪಡುಕೋಣೆ ಸ್ಮರಣಾರ್ಥ ಅಂಕದಕಟ್ಟೆ ಸರ್ಕಾರೀ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಇದೇ ಸಂದರ್ಭ ಸಮಾಜ ಸೇವಕರಾದ ನಿತ್ಯಾನಂದ ಒಳಕಾಡು ಹಾಗೂ ವಿಷುಕುಮಾರ್ ಶೆಟ್ಟಿ ಉಡುಪಿ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು. ಹಿರಿಯ ವೈದ್ಯರಾದ ಡಾ. ನಾಗಭೂಷಣ ಉಡುಪ, ಡಾ. ನಾಗೇಶ್ ಹಾಗೂ ಡಾ. ಮಧುಕರ್ ಇವರನ್ನು ಸನ್ಮಾನಿಸಲಾಯಿತು.
ನಾಗರಾಜ ಡಿ ಪಡುಕೋಣೆ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಅಶೋಕ್ ದೇವಾಡಿಗ ಮುಂಬೈ, ಡಾ. ನಾಗೇಶ್, ಮಧುಕರ ದೇವಾಡಿಗ, ಕೃಷ್ಣ ಗೊಲ್ಲ, ಅಕ್ಷಯ್ ದೇವಾಡಿಗ, ಚಂದ್ರಶೇಖರ ದೇವಾಡಿಗ, ಅರ್ಚನಾ ಶೆಟ್ಟಿ, ಡಾ. ಪೂರ್ಣಿಮಾ, ಬಚ್ಚ ದೇವಾಡಿಗ, ರಾಘು ಪಡುಕೋಣೆ, ಮೊದಲಾದವರು ಉಪಸ್ಥಿತರಿದ್ದರು.
ನಾಗರಾಜ ರಾಯಪ್ಪನಮಠ ಸ್ವಾಗತಿಸಿದರು. ಶ್ರೀಮತಿ ಪ್ರಾರ್ಥಿಸಿದರು. ಶಂಕರ ಅಂಕದಕಟ್ಟೆ ಪ್ರಸ್ತಾವಿಸಿದರು. ಪುರುಷೋತ್ತಮ ದಾಸ್ ವಂದಿಸಿದರು. ಶಿಕ್ಷಕ ರಾಮ ದೇವಾಡಿಗ ನಿರೂಪಿಸಿದರು. ನೂರಾರು ಜನ ಫಲಾನುಭವಿಗಳು ನೇತ್ರ ತಪಾಸಣೆಯ ಪ್ರಯೋಜನ ಪಡೆದುಕೊಂಡರು.