ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಕರಾವಳಿ ಜನ ಪ್ರತಿಭಾನ್ವಿತರು ಎನ್ನುವುದನ್ನು ಕರಾವಳಿಗರು ತೋರಿಸುತ್ತಲೇ ಬಂದಿದ್ದಾರೆ. ಇದಕ್ಕೆ ಇನ್ನೊಂದು ಉದಾಹರಣೆ ಹಂಗಳೂರಿನ ಅನೂಪ್ ಡಿ’ಕೋಸ್ತಾ



ಇಂದು ಗುವಾಹಟಿಯಲ್ಲಿ ನಡೆಯುತ್ತಿರುವ 71ನೇ ರಾಷ್ಟ್ರ ಮಟ್ಟದ ಹಿರಿಯರ ವಾಲಿಬಾಲ್ ಪಂದ್ಯಾಟಕ್ಕೆ ಕರ್ನಾಟಕದ 12 ಜನರ ತಂಡ ಆಯ್ಕೆಯಾಗಿದ್ದು, ಕುಂದಾಪುರದ ಅನೂಪ್ ಡಿಕೋಸ್ಟಾ ತಂಡದ ನಾಯಕತ್ವ ವಹಿಸಿಕೊಳ್ಳಲಿದ್ದಾರೆ.
ಅಸ್ಸಾಂನ ಗುವಾಹಟಿಯಲ್ಲಿ ಈಗಾಗಲೇ ಪಂದ್ಯಾಟಕ್ಕೆ ಚಾಲನೆ ದೊರಕಿದ್ದು, ಉದ್ಘಾಟನಾ ಕಾರ್ಯಕ್ರಮ ಮುಗಿದಿದೆ. ನೂರಾರು ರಾಷ್ಟ್ರೀಯ ಮಟ್ಟದ ವಾಲಿಬಾಲ್ ಪಂದ್ಯಾಟಗಳಲ್ಲಿ ಪ್ರಶಸ್ತಿ ಬಾಚಿಕೊಂಡಿರುವ ಅನೂಪ್ ಡಿಕೋಸ್ಟಾ ಅಂತರ್ರಾಷ್ಟ್ರೀಯ ಮಟ್ಟದಲ್ಲಿಯೂ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಇದೀಗ ಹಿರಿಯ ರಾಷ್ಟ್ರೀಯ ವಾಲಿಬಾಲ್ ತಂಡದ ನೇತೃತ್ವವಹಿಸಿರುವುದು ಕರಾವಳಿಗರಿಗೆ ಹೆಮ್ಮೆ ತಂದಿದೆ.
ಕಾರ್ತಿಕ್ ಎಸ್.ಎ., ಮಧು ಭರತ್, ಮನೋಜ್ ಕೆ.ಎಲ್., ಪವನ್ ಕೆ., ಸೂರಜ್ ಜಿ. ನಾಯ್ಕ್, ನವೀದ್ ಖಾನ್, ಕುಮಾರ್ ಗೌಡ, ಓಂಕಾರ್ ಎ ಪವಾರ್, ಅಮನ್ ಎಸ್. ಕುಸುಗಲ್, ಚಂದನ್ ಹಾಗೂ ರೋಹನ್ ಅಂಟೋನಿ ತಂಡದಲ್ಲಿದ್ದಾರೆ. ಭುಜೇಂದ್ರ ತಂಡದ ಮ್ಯಾನೇಜರ್ ಆಗಿದ್ದಾರೆ. ಅಮೀರ್ ಆಲಿ ಖಾನ್ ಚೀಫ್ ಕೋಚ್ ಆಗಿದ್ದಾರೆ.
ಕಳೆದ 10 ವರ್ಷಗಳಿಂದ ಹೈದ್ರಾಬಾದಿನಲ್ಲಿ ಇನ್-ಕಂ-ಟ್ಯಾಕ್ಸ್ ಇನ್ಸ್ಪೆಕ್ಟರ್ ಆಗಿರುವ ಅನೂಪ್ ಮೂಲತಃ ಕುಂದಾಪುರದ ಹಂಗಳೂರಿನ ಅಂಟೋನಿ ಡಿಕೋಸ್ಟಾ ಹಾಗೂ ಗೀತಾ ದಂಪತಿಗಳ ಪುತ್ರ. ಕರ್ನಾಟಕದ ವಾಲಿಬಾಲ್ ತಂಡ ಗೆದ್ದು ಬರಲಿ ಎಂದು ಹಾರೈಸೋಣ