ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ : ಶಿಸ್ತನ್ನು ಮೈಗೂಡಿಸಿಕೊಳ್ಳಲು ಕ್ರೀಡೆ ಸಹಕಾರಿ, ದೈಹಿಕ ಆರೋಗ್ಯವನ್ನು ಕ್ರೀಡೆಯ ಮೂಲಕ ಕಾಪಾಡಿಕೊಳ್ಳಲು ಸಾಧ್ಯ. ದೈಹಿಕ ಚಟುವಟಿಕೆಯಿಂದ ಕೂಡಿದ್ದಾಗ ಮಾತ್ರ ಮಾನಸಿಕವಾಗಿಯೂ ಆರೋಗ್ಯಕರವಾಗಿರಬಹುದು ಎಂದು ಸರಕಾರಿ ಪದವಿ ಪೂರ್ವ ಕಾಲೇಜು, ಕುಂದಾಪುರದ ದೈಹಿಕ ಶಿಕ್ಷಣ ನಿರ್ದೇಶಕ ಪ್ರಕಾಶ್ಚಂದ್ರ ಶೆಟ್ಟಿ ಹೇಳಿದರು.
ಇವರು ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕ ಕ್ರೀಡಾಕೂಟದ ಸಮಾರೋಪ ಸಮಾರಂಭದ ಮುಖ್ಯ ಅತಿಥಿ ನೆಲೆಯಲ್ಲಿ ಮಾತನಾಡಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿ ಕುಸುಮಾಕರ್ ಶೆಟ್ಟಿ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪಪ್ರಾಂಶುಪಾಲರಾದ ಚೇತನ್ ಶೆಟ್ಟಿ ಕೋವಾಡಿ, ದೈಹಿಕ ಶಿಕ್ಷಣ ನಿರ್ದೇಶಕ ರಂಜಿತ್ ಟಿ.ಎನ್. ಉಪಸ್ಥಿತರಿದ್ದರು.
ವಾಣಿಜ್ಯ ಉಪನ್ಯಾಸಕಿ ಅರ್ಪಣಾ ಶೆಟ್ಟಿ ಸ್ವಾಗತಿಸಿ, ರಾಜ್ಯಶಾಸ್ತ್ರ ಉಪನ್ಯಾಸಕ ಪ್ರವೀಣ್ ಮೋಗವೀರ ಗಂಗೊಳ್ಳಿ ಬಹುಮಾನಿತರ ಪಟ್ಟಿ ವಾಚಿಸಿ, ವಾಣಿಜ್ಯ ಉಪನ್ಯಾಸಕಿ ದೀಪಾ ಪೂಜಾರಿ ವಂದಿಸಿ, ನಿರೂಪಿಸಿದರು.
ದ್ವಿತೀಯ ಬಿ.ಕಾಂ. ‘ಸಿ’ ವಿಭಾಗದ ಮಣಿಕಂಠ, ದ್ವಿತೀಯ ಬಿ.ಎಸ್ಸಿ. ಅಪೇಕ್ಷಾ ವೈಯಕ್ತಿಕ ಚಾಂಪಿಯನ್‍ಗಳಾದರೆ, ತೃತೀಯ ಬಿ.ಕಾಂ. ‘ಎ’, ದ್ವಿತೀಯ ಬಿ.ಕಾಂ. ‘ಸಿ’, ತೃತೀಯ ಬಿ.ಕಾಂ. ‘ಸಿ’ ತರಗತಿವಾರು ಚಾಂಪಿಯನ್‍ಗಳಾಗಿ ಹೊರಹೊಮ್ಮಿದರು. ಪೂರ್ವಾಹ್ನ ನಡೆದ ಪಥಸಂಚಲನದಲ್ಲಿ ತೃತೀಯ ಬಿ.ಕಾಂ. ‘ಎ’ ಪ್ರಥಮ, ಬಿ.ಕಾಂ. ಪ್ರೊಫೆಶನಲ್ ದ್ವಿತೀಯ, ತೃತೀಯ ಬಿ.ಸಿ.ಎ. ಮತ್ತು ತೃತೀಯ ಬಿ.ಕಾಂ. ‘ಸಿ’ ತೃತೀಯ ಬಹುಮಾನ ಪಡೆದರು.