ಕುಂದಾಪುರ ಮಿರರ್ ಸುದ್ದಿ…
ಕೋಟ: ಲಯನ್ಸ್ ಜಿಲ್ಲಾ ಕ್ಲಬ್ ಗವರ್ನರ್ ಡಾ. ಎಮ್ ಕೆ ಭಟ್ ಲಯನ್ ಜಿಲ್ಲಾ ಪ್ರಥಮ ಮಹಿಳೆ, ಪತ್ನಿ ಸವಿತಾ ಎಮ್ ಕೆ ಭಟ್ ರವರೊಂದಿಗೆ ಲಯನ್ಸ್ ಕ್ಲಬ್ ಬನ್ನಾಡಿ ವಡ್ಡರ್ಸೆಗೆ ಅಧೀಕೃತ ಭೇಟಿ ನೀಡಿದರು.
ಬನ್ನಾಡಿ ಸುಬ್ಬಣ್ಣ ಹೆಗ್ಡೆ ಸಭಾ ಭವನದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಲಯನ್ ಜಿಲ್ಲಾ ಪ್ರಥಮ ಮಹಿಳೆ ಸವಿತಾ ಎಮ್ ಕೆ ಭಟ್ ರವರನ್ನು ರಾಧಿಕಾ ರಾಜಾರಾಮ್ ಶೆಟ್ಟಿ, ವಸಂತಿ ಸುಗುಣಾಕರ್ ಶೆಟ್ಟಿ ,ಪಾರ್ವತಿ ಸುರೇಂದ್ರ ಶೆಟ್ಟಿ ಸಾಂಪ್ರದಾಯಿಕವಾಗಿ ಸ್ವಾಗತಿಸಿದರು.
ಲಯನ್ಸ್ ಕ್ಲಬ್ ಬನ್ನಾಡಿ ವಡ್ಡರ್ಸೆಯ ಅಧ್ಯಕ್ಷ ರಾಜಾರಾಮ್ ಶೆಟ್ಟಿ ಕಲ್ಕಟ್ಟೆ ,ಕೋಶಾಧಿಕಾರಿ ವಡ್ಡರ್ಸೆ ಬಾಲಕೃಷ್ಣ ಶೆಟ್ಟಿ ,ಕ್ಲಬ್ ನ ಕಾರ್ಯದರ್ಶಿ ಅಜಿತ್ ಶೆಟ್ಟಿ ಕೊತ್ತಾಡಿ, ಈ ವರ್ಷ ಕ್ಲಬ್ ಮಾಡಿದ ಸೇವಾ ಚಟುವಟಿಕೆಗಳ ವರದಿಯನ್ನು ವಾಚಿಸಿದರು.
ಲಯನ್ಸ್ ಕ್ಲಬ್ ಬನ್ನಾಡಿ ವಡ್ಡರ್ಸೆ ನಿಕಟ ಪೂರ್ವ ಅಧ್ಯಕ್ಷ ಕೊತ್ತಾಡಿ ಉದಯ್ ಕುಮಾರ್ ಶೆಟ್ಟಿ, ಲಯನ್ ಫ್ಲಾಗ್ ಸೆಲ್ಯುಟೇಷನ್ ಹಾಗೂ ಫಸ್ಟ್ ವೈಸ್ ಪ್ರೆಸಿಡೆಂಟ್ ಸುರೇಂದ್ರ ಶೆಟ್ಟಿ ಕೊಮೆ ಅಚ್ಲಾಡಿ ಲಯನ್ ಕೋಡ್ ಆಫ್ ಕಂಡಕ್ಟ್ ವಾಚಿಸಿದರು.
ಸಭಾ ಕಾರ್ಯಕ್ರಮದ ಸೇವಾ ಚಟುವಟಿಕೆಯ ಅಂಗವಾಗಿ ಅಚ್ಲಾಡಿಯಲ್ಲಿ ಲಯನ್ಸ್ ಕ್ಲಬ್ ವತಿಯಿಂದ ನೂತನವಾಗಿ ಮರು ನಿರ್ಮಾಣಗೊಳಿಸಿದ ಬಸ್ ತಂಗುದಾಣದ ಉದ್ಘಾಟನೆಯನ್ನು ಮಾಡಲಾಯಿತು.
ಲಯನ್ ಸಪ್ನಾ ಸುರೇಶ್ ನೀಡಿದ ಒಂದು ವಾಟರ್ ಫಿಲ್ಟರ್‍ನ್ನು ಮಧುವನ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆಗೆ ಹಸ್ತಾಂತರಿಸಲಾಯಿತು.
ಅತ್ಯುತ್ತಮ ಸಮಾಜ ಸೇವೆಯನ್ನು ಮಾಡುತ್ತಿರುವ ಸ್ಥಳಿಯ ನಿವಾಸಿ ಬನ್ನಾಡಿ ವಾಸು ಪೂಜಾರಿಯವರನ್ನು ಸನ್ಮಾನಿಸಲಾಯಿತು, ಆರೋಗ್ಯ ಸಮಸ್ಯೆಯಿಂದಿರುವ ಅಚ್ಲಾಡಿಯ ಕೃಷ್ಣ ಮರಕಾಲರವರಿಗೆ ಆರ್ಥಿಕ ಸಹಾಯ ನೀಡಲಾಯಿತು.
ಲಯನ್ಸ್ ಮಾಜಿ ಕಾರ್ಯದರ್ಶಿ ಬನ್ನಾಡಿ ಶರತ್ ಶೆಟ್ಟಿ ಗೌರವಿಸಲ್ಪಟ್ಟ ಬನ್ನಾಡಿ ವಾಸು ಪೂಜಾರಿಇವರ ಪರಿಚಯ ಪತ್ರ ವಾಚಿಸಿದರು.
ದ್ವಿತೀಯ ಉಪ ಜಿಲ್ಲಾ ಗವರ್ನರ್ ಮಹಮ್ಮದ್ ಹನೀಫ್, ರೀಜನ್ ಚಯರ್ ಪರ್ಸನ್ ಲಯನ್ ಕೋಟೇಶ್ವರ ಭೋಜರಾಜ್ ಶೆಟ್ಟಿ, ಝೋನ್ ಚಯರ್ ಪರ್ಸನ್ ,ಇಂಜಿನಿಯರ್ ಪ್ರವೀಣ್ ಕುಮಾರ್ ಶೆಟ್ಟಿ, ಎಕ್ಸ್ಟೆನ್ಷನ್ ಚಯರ್ ಮ್ಯಾನ್ ದಿನಕರ ಶೆಟ್ಟಿ ಎಮ್, ಉಪಸ್ಥಿತರಿದ್ದರು.