ಕುಂದಾಪುರ ಮಿರರ್ ಸುದ್ದಿ…
ಚಿತ್ತೂರು :ಜೆಸಿಐ ಚಿತ್ತೂರು-ಮಾರಣಕಟ್ಟೆ ವತಿಯಿಂದ ಸೆಲ್ಯೂಟ್ ದಿ ಸೈಲೆಂಟ್ ವರ್ಕರ್ ಕಾರ್ಯಕ್ರಮದಡಿ ಟ್ರಾಫಿಕ್ ಪೊಲೀಸ್ ಗೋಪಾಲ ಖಾರ್ವಿ ಇವರನ್ನು ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗುರುಪ್ರಸಾದ್ ದೇವಾಡಿಗ ಮಾರಣಕಟ್ಟೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಜೆಸಿಐನ ಅಕ್ಷತಾ ಗಿರೀಶ್ ಐತಾಳ್, ಜೆಸಿಐ ಸ್ಥಾಪಕ ಅಧ್ಯಕ್ಷರಾದ ಉದಯ ಜಿ ಪೂಜಾರಿ, ತಲ್ಲೂರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಾಗರತ್ನ ಜಿ ಉಪಸ್ಥಿತರಿದ್ದರು. ಪೂರ್ವಾಧ್ಯಕ್ಷರಾದ ಗೋವರ್ಧನ ಜೋಗಿ ನಿರೂಪಿಸಿ, ಯಶೋಧರ ಆಚಾರ್ಯ ವಂದಿಸಿದರು. ಸುಬ್ರಹ್ಮಣ್ಯ ಉಡುಪ, ರಾಜೇಶ್ ಶೆಟ್ಟಿ ಸಹಕರಿಸಿದರು.