ಶಿಕ್ಷ ಪ್ರಭ ಅಕಾಡೆಮಿ ಕುಂದಾಪುರ: ಸಿ ಎ ಫೌಂಡೇಶನ್ ಪರೀಕ್ಷೆ ಫಲಿತಾಂಶ ಅತ್ಯಧಿಕ ಸಾಧನೆ.

0
372

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಸಿಎ/ಸಿಎಸ್ ಪ್ರೊಫೆಶನಲ್ ಕೋರ್ಸುಗಳ ಹೆಸರಾಂತ ತರಬೇತಿ ಸಂಸ್ಥೆ ಕುಂದಾಪುರ ಕುಂದೇಶ್ವರ ದೇವಸ್ಥಾನ ರಸ್ತೆಯ ಸಿರಿ ಬಿಲ್ಡಿಂಗ್‍ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷ ಪ್ರಭ ಅಕಾಡೆಮಿ ಆಫ್ ಕಾಮರ್ಸ್ ಎಜ್ಯುಕೇಶನ್(ಸ್ಪೇಸ್)ನ ವಿದ್ಯಾರ್ಥಿಗಳು ಇನ್ಸ್ಟಿಟ್ಯೂಟ್ ಆಫ್ ಚಾರ್ಟ್‍ರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯ ಡಿಸೆಂಬರ್2022ರಲ್ಲಿ ನೆಡೆಸಿದ ಸಿ ಎ ಫೌಂಡೇಶನ್ ಪರೀಕ್ಷೆಯಲ್ಲಿ ಅನೇಕ ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದುದರ ಮೂಲಕ ಶ್ರೇಷ್ಠ ಸಾಧನೆಗೈದಿದ್ದಾರೆ.

Click Here

Click Here

ಸಂಸ್ಥೆಯ ವಿದ್ಯಾರ್ಥಿಗಳು ಪ್ರಥಮ ಹಂತದಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದುದರ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದಿದ್ದಾರೆ. ಸಂಸ್ಥೆಯ ವಿದ್ಯಾರ್ಥಿನಿಯಾದ ಶ್ರದ್ಧಾ ಬಿ ಸಾಲಿಯಾನ್(324) ಅಂಕ ಗಳಿಸುವುದರೊಂದಿಗೆ ಸಂಸ್ಥೆಗೆ ಪ್ರಥಮ ಸ್ಥಾನಿಯಾಗಿದ್ದಾರೆ, ರಕ್ಷಿತಾ(303) ಮತ್ತು ದೀಕ್ಷಯ್ ಡಿ ಶೆಟ್ಟಿ(284) ಅಂಕಗಳೊಂದಿಗೆ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ ಹಾಗೂ ಸಂಸ್ಥೆಯ ವಿದ್ಯಾರ್ಥಿಗಳಾದ ಪಂಚಮಿ ಕಿಣಿ(272), ಪ್ರೀತನ್ ಶೆಟ್ಟಿ(247), ಸುಶ್ಮಿತಾ ಉದಯ್ ಪೂಜಾರಿ(243), ವರ್ಮಿತಾ(242), ಅನುಷಾ ಎಮ್.(240), ಹೆಚ್. ಭೂಮಿಕಾ ಶೆಟ್ಟಿ(240), ಕೀರ್ತನ್ ಬಿ (237), ಭೂಮಿಕಾ ಬಿ ಕೆ(234), ಅಂಕಿತಾ ಮೊಗವೀರ(229), ವೈಷ್ಣವಿ ಪಿ ಶೆಟ್ಟಿ(228), ಹೃಷಿಕೇಶ್ ಭಟ್(227), ಗುರುರಾಜ್(226), ಅರ್ಜುನ್ ಶಾನ್‍ಭೋಗ್(223), ದೀಕ್ಷಾ ಎ ಶೆಟ್ಟಿ(223), ಆಯೆಷಾ ನುಜಾóತ್(222), ಪ್ರಜ್ವಲ್ ಪಿ ಶೆಟ್ಟಿ(221), ಮೊಹಮ್ಮದ್ ನುವೈಫ್(221), ಮೊಹಮ್ಮದ್ ಅದ್ನಾನ್(218), ಅಲಿಮತ್ ಶಾದಿಯ(216), ಪ್ರಿಯಾಂಕ (216), ಕಾವ್ಯ ಡಿ(215), ರಚಿತಾ (215), ಸೀಮಾ(215), ವೈಷ್ಣವಿ ಪೆಜತಾಯ(210), ಆಶ್ರಿತಾ ಕಾರ್ವಿ(210), ಕೀರ್ತನ್(210), ಸುಶಾನ್(209), ಸುಚಿ ಸಿ ಶೆಟ್ಟಿ(208), ಪನ್ನಗ(207), ಹಿಂದುಜಾ(205), ಮಿತೇಶ್ ಉದಯ್ ಶೆಟ್ಟಿ(203), ಪ್ರಿಯಾಂಕ ಪಿ(203), ಗಣೇಶ್(200), ರುಹಿನಾ(200), ಎಸ್ ಕೆ ಶೃತಿಕಾ(200), ಸುಜನಾರಾಣಿ ಜೆ (200) ಅಂಕಗಳೊಂದಿಗೆ ಸಿ ಎ ಫೌಂಡೇಶನ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಸಿಎ ಇಂಟರ್ಮೀಡಿಯೇಟ್ ಪರೀಕ್ಷೆಗೆ ಅರ್ಹತೆಯನ್ನು ಪಡೆದುಕೊಂಡಿದ್ದಾರೆ.

ಶಿಕ್ಷ ಪ್ರಭಾ ಅಕಾಡೆಮಿಯು ಈಗಾಗಲೇ ಸಿ.ಎ/ಸಿ.ಎಸ್ ನಂತಹ ಪ್ರೋಫೇಶನ್ ಪರೀಕ್ಷೆಗಳಿಗೆ ಗುಣಮಟ್ಟದ ತರಬೇತಿಯನ್ನು ನೀಡುತ್ತಾ ಬಂದಿದ್ದು ಸಂಸ್ಥೆಯ ಅನೇಕ ವಿದ್ಯಾರ್ಥಿಗಳು ರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದಿರುತ್ತಾರೆ. ಸಂಸ್ಥೆಯ ವಿದ್ಯಾರ್ಥಿಗಳಿಗೆ ಅನುಭವಿ ಬೋಧಕ ಸಿಬ್ಬಂಧಿಗಳಿಂದ ತರಬೇತಿಯ ಜೊತೆಗೆ ನಿರಂತರ ಪೂರಕ ಪರೀಕ್ಷೆಗಳನ್ನು ನಡೆಸಿ ವಿದ್ಯಾರ್ಥಿಗಳನ್ನು ಸಿಎ ಫೌಂಡೇಶನ್ ಪರೀಕ್ಷೆಗೆ ಸನ್ನದ್ದುಗೊಳಿಸಲಾಗಿತ್ತು ರಾಜ್ಯದ ನಾನಾ ಭಾಗಗಳಿಂದ ಅನುಭವಿ ಚಾರ್ಟೆಡ್ ಅಕೌಂಟೆಂಟ್ಸ್ ಮತ್ತು ಕಂಪನಿ ಸೆಕ್ರೆಟರಿ ಅವರೊಂದಿಗೆ ಆಯಾ ವಿಷಯ ತಜ್ಞರಿಂದ ತರಗತಿಗಳನ್ನು ನಡೆಸಲಾಗುತ್ತದೆ. ವಿದ್ಯಾರ್ಥಿಗಳ ಸಾಧನೆಯನ್ನು ಅಭಿನಂದಿಸುತ್ತಾ ಭೋಧಕ ಸಿಬ್ಬಂದಿಗಳ ಶ್ರಮ, ಸಂಸ್ಥೆ ಅನುಸರಿಸುತ್ತಿರುವ ಆಧುನಿಕ ಶಿಕ್ಷಣ ಪದ್ಧತಿಯ ಜೊತೆಗೆ ವಿದ್ಯಾರ್ಥಿಗಳ ನಿರಂತರ ಕಠಿಣ ಪರಿಶ್ರಮದಿಂದ ಮಾತ್ರ ಇಂತಹ ಫಲಿತಾಂಶ ಬರಲು ಸಾಧ್ಯ ಎಂದು ಸಂಸ್ಥೆಯ ಮುಖ್ಯಸ್ಥರಾದ ಪ್ರತಾಪ್‍ಚಂದ್ರ ಶೆಟ್ಟಿ ಮತ್ತು ಭರತ್ ಶೆಟ್ಟಿ ತಿಳಿಸಿದ್ದಾರೆ.

“ 324 ಅಂಕದ ನಿರೀಕ್ಷೆಯಲ್ಲಿ ಇರಲಿಲ್ಲ, ಶಿಕ್ಷಪ್ರಭ ಅಕಾಡೆಮಿಯ ಅನುಭವಿ ಭೋದಕರ ತರಬೇತಿ ಮತ್ತು ಪ್ರೇರಣೆ ತಂದೆ ತಾಯಿಯ ಪ್ರೋತ್ಸಾಹದಿಂದ ಈ ಸಾಧನೆ ಸಾಧ್ಯವಾಯಿತು. ನುರಿತ ಉಪನ್ಯಾಸಕರ ಭೋದನೆ, ನಿರಂತರ ಪೂರಕ ಪರೀಕ್ಷೆ ನೆಡೆಸಿ ಬೆನ್ನೆಲುಬಾಗಿ ನಿಂತ ಶಿಕ್ಷಪ್ರಭ ಅಕಾಡೆಮಿಗೆ ಧನ್ಯವಾದಗಳು.- ”ಶ್ರದ್ಧಾ ಬಿ ಸಾಲಿಯಾನ್(324)

Click Here

LEAVE A REPLY

Please enter your comment!
Please enter your name here