ಚಿತ್ತೂರು: ಗೋಲ್ಡನ್ ಟ್ರೈಯಾಂಗಲ್ ಬಸ್ ನಿಲ್ದಾಣ ಅನಾವರಣ

0
349

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ದಿ.ಎಮ್.ರಘುರಾಮ ಶೆಟ್ಟಿ ಚಿತ್ತೂರು ಇವರ ಸ್ಮರಣಾರ್ಥ ಚಿತ್ತೂರಿನಲ್ಲಿ ನಿರ್ಮಿಸಲಾದ ಗೋಲ್ಡನ್ ಟ್ರೈಯಾಂಗಲ್ ಬಸ್ ನಿಲ್ದಾಣ ಸಾರ್ವಜನಿಕ ಅನಾವರಣ ಕಾರ್ಯಕ್ರಮ ಫೆ.3 ಶುಕ್ರವಾರ ಸಂಜೆ ನಡೆಯಿತು.

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ.ರಾಘವೇಂದ್ರ ಬಸ್ ಪ್ರಯಾಣಿಕರ ತಂಗುದಾಣವನ್ನು ಉದ್ಘಾಟಿಸಿ ದಿ. ಎಂ.ರಘುರಾಮ ಶೆಟ್ಟಿಯವರ ಪುತ್ಥಳಿ ಅನಾವರಣಗೊಳಿಸಿ, ಎಂ.ರಘುರಾಮ ಶೆಟ್ಟರು ಅಂದಿನ ದಿನಗಳಲ್ಲಿ ನೀಡಿದ ಸೇವೆ, ಪಂಚಾಯತಿದಾರರಾಗಿ ಕೋರ್ಟ್‍ಗೆ ಹೋಗಬೇಕಾದ ವ್ಯಾಜ್ಯಗಳನ್ನು ಪರಿಹರಿಸಿ ಗ್ರಾಮಾಂತರ ಪ್ರದೇಶದಲ್ಲಿ ಸಾಮರಸ್ಯದ ಜೀವನಕ್ಕೆ ಕಾರಣರಾಗಿದ್ದರು ಎನ್ನುವುದನ್ನು ಮನಗಾಣಬಹುದು. ಅವರ ಸ್ಮರಣಾರ್ಥ ಚಿತ್ತೂರಿನಲ್ಲಿ ಸುಸಜ್ಜಿತವಾದ ಬಸ್ ನಿಲ್ದಾಣ ನಿರ್ಮಾಣ ಮಾಡಿ ಸಾರ್ವಜನಿಕರಿಗೆ ಅರ್ಪಣೆ ಮಾಡುತ್ತಿರುವುದು ಶ್ಲಾಘನೀಯವಾದ ಕಾರ್ಯ ಎಂದರು.
ಬಹು ಮಹತ್ವಕಾಂಕ್ಷೆಯ ಕೊಲ್ಲೂರು-ಕೊಡಚಾದ್ರಿ ಕೇಬಲ್ ಕಾರು ಯೋಜನೆಗೆ ಅಧಿಕೃತವಾಗಿ ಮಂಜೂರಾತಿ ದೊರಕಿದೆ. 6 ಕಿ.ಮೀ ದೂರದ ಈ ರೋಪ್ ವೇ ಕರ್ನಾಟಕದಲ್ಲಿಯೇ ಪ್ರಥಮದ್ದಾಗಿದ್ದು ಸುಮಾರು 360 ಕೋಟಿ ರೂ ವೆಚ್ಚದಲ್ಲಿ ಸಿದ್ಧವಾಗಲಿದೆ. ರಾಜ್ಯದಾದ್ಯಂತ ಜನ ಈ ಮಾರ್ಗವಾಗಿ ಬರುವುದರಿಂದ ಈ ಭಾಗದ ಅಭಿವೃದ್ದಿಗೂ ಕಾರಣವಾಗಲಿದೆ. ವಿಭಿನ್ನ ಶೈಲಿಯ ಈ ಬಸ್ ನಿಲ್ದಾಣ ಪ್ರವಾಸಿಗರ ಗಮನ ಸಳೆಯಲಿದೆ ಎಂದರು.

Click Here

Click Here

ಮಾಜಿ ಸಭಾಪತಿ ಕೆ.ಪ್ರತಾಪಚಂದ್ರ ಶೆಟ್ಟಿ ಗಡಿಯಾರವನ್ನು ಉದ್ಘಾಟಿಸಿ ಮಾತನಾಡಿ ಮೂಲಭೂತ ಸೌಲಭ್ಯಗಳ ಕೊರತೆ ಇದ್ದ ಆ ಸಂದರ್ಭದಲ್ಲಿ ಬೇರೆ ಬೇರೆ ವ್ಯವಸ್ಥೆಗಳ ಮೂಲಕ ಜನಸೇವೆ ಮಾಡಿ ಗ್ರಾಮೀಣ ಪ್ರದೇಶದ ಅವಶ್ಯಕತೆಗಳನ್ನು ಎಂ.ರಘುರಾಮ ಶೆಟ್ಟರು ಪೂರೈಸಿದ್ದರು. ಅವರನ್ನು ಸ್ಮರಿಸಿಕೊಳ್ಳುವ ಕಾರ್ಯ ಶ್ಲಾಘನೀಯ ಎಂದರು.

ಅಧ್ಯಕ್ಷತೆಯನ್ನು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ವಹಿಸಿದ್ದರು.

ಕುಂದಾಪುರ ಕ್ಷೇತ್ರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಮಾರಣಕಟ್ಟೆ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಸಿ.ಸದಾಶಿವ ಶೆಟ್ಟಿ, ಬೈಂದೂರು ಕ್ಷೇತ್ರದ ಮಾಜಿ ಶಾಸಕ ಬಿ.ಅಪ್ಪಣ್ಣ ಹೆಗ್ಡೆ, ಚಿತ್ತೂರು ಗ್ರಾ.ಪಂ. ಅಧ್ಯಕ್ಷೆ ಜಯಂತಿ ಉಪಸ್ಥಿತರಿದ್ದರು.

ಡಾ.ಅತುಲ್ ಕುಮಾರ್ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಭಾಸ್ಕರ ಶೆಟ್ಟಿ ದಿ.ಎಂ.ರಘುರಾಮ ಶೆಟ್ಟಿಯವರ ಬಗ್ಗೆ ಮಾತನಾಡಿದ. ಉಪನ್ಯಾಸಕ ಅಕ್ಷಯ ಹೆಗ್ಡೆ ಮೊಳಹಳ್ಳಿ ಕಾರ್ಯಕ್ರಮ ನಿರ್ವಹಿಸಿದರು.

ಈ ಸಂದರ್ಭದಲ್ಲಿ ದಿ.ರಘುರಾಮ ಶೆಟ್ಟಿಯವರ ಕುಟುಂಬದ ಶ್ರೀಮತಿ ರಘುರಾಮ ಶೆಟ್ಟಿ, ವಿ.ಸದಾನಂದ ಶೆಟ್ಟಿ, ಡಾ.ಬಿ.ನಾರಾಯಣ ಶೆಟ್ಟಿ, ಡಾ.ಕಿರಣ್ ಶೆಟ್ಟಿ ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here