ಕುಂದಾಪುರ :ಶಿಕ್ಷಕರ ಕೊರತೆಯಿಂದ ಶಿಕ್ಷಣದ ಗುಣಮಟ್ಟ ಕುಸಿತ – ಡಾ.ನಿರಂಜನಾರಾದ್ಯ

0
460

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ : ಸರಕಾರಿ ಶಾಲೆಗಳ ಗುಣಮಟ್ಟ ಕಡಿಮೆಯಾಗಲು ಬಹುಮುಖ್ಯ ಕಾರಣ ಶಿಕ್ಷಕರ ಕೊರತೆ. ಇದಕ್ಕೆ ಸರಕಾರವೇ ನೇರ ಹೊಣೆ. ಶಿಕ್ಷಕರ ಭರ್ತಿಗೆ ಸರಕಾರ ತ್ವರಿತಗತಿಯಲ್ಲಿ ಕ್ರಮಕೈಗೊಳ್ಳಬೇಕಾದ ಅಗತ್ಯವಿದೆ. ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕುಗಳ ಕಾಯ್ದೆಯನ್ನು ಕಳೆದ ಅನೇಕ ವರ್ಷಗಳಿಂದ ಸಂಪೂರ್ಣ ನಿರ್ಲಕ್ಷಿಸಲಾಗುತ್ತಿದೆ ಎಂದು ಶಿಕ್ಷಣ ತಜ್ಞ, ಎಸ್‌ಡಿಎಂಸಿ ಸಮನ್ವಯ ವೇದಿಕೆಯ ಮಹಾ ಪೋಷಕ ಡಾ| ನಿರಂಜನಾರಾಧ್ಯ ವಿ.ಪಿ. ಹೇಳಿದರು.

ಅವರು ಸೋಮವಾರ ಇಲ್ಲಿನ ರೋಟರಿ ಭವನದಲ್ಲಿ ನಡೆದ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಉಡುಪಿ, ತಾಲೂಕು ಸಮಿತಿ ಬೈಂದೂರು, ಬ್ರಹ್ಮಾವರ, ಕುಂದಾಪುರ, ಉಡುಪಿ, ಕಾರ್ಕಳ ಆಶ್ರಯದಲ್ಲಿ ರೋಟರಿ ಕ್ಲಬ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಡುಪಿ, ತಾಲೂಕು ಕಾನೂನು ಸೇವೆಗಳ ಸಮಿತಿ ಕುಂದಾಪುರದ ಸಹಯೋಗದಲ್ಲಿ ಸರಕಾರಿ ಶಾಲೆ ಉಳಿಯಲಿ, ಬೆಳೆಯಲಿ, ನೆರೆ ಹೊರೆಯ ಸಮಾನ ಶಾಲೆಯಾಗಲಿ ಎನ್ನುವ ಧ್ಯೇಯದೊಂದಿಗೆ ‘ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕುಗಳ ಕಾಯ್ದೆ -೨೦೦೯’ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದರು.

Click Here

ಉದ್ಘಾಟಿಸಿದ ಭಟ್ಕಳದ ಉದ್ಯಮಿ ಅಬ್ದುಲ್ ಸಿರಾಜುದ್ದಿನ್ ಶುಭಹಾರೈಸಿದರು. ಎಸ್‌ಡಿಎಂಸಿ ಸಮನ್ವಯ ವೇದಿಕೆ ಜಿಲ್ಲಾಧ್ಯಕ್ಷ ಅಬ್ದುಲ್ ಸಲಾಂ ಚಿತ್ತೂರು ಅಧ್ಯಕ್ಷತೆ ವಹಿಸಿದ್ದರು.

ಹೋರಾಟದ ಎಚ್ಚರಿಕೆ
ಸಮನ್ವಯ ವೇದಿಕೆ ಕುಂದಾಪುರ ವಲಯದ ಅಧ್ಯಕ್ಷ ಎಸ್.ವಿ. ನಾಗರಾಜ ಮಾತನಾಡಿ, ಇಂಗ್ಲಿಷ್ ವ್ಯಾಮೋಹ, ಶಿಕ್ಷಣದ ವ್ಯಾಪಾರೀಕರಣ, ಅಪಪ್ರಚಾರ, ಕಾಳಜಿಯಿಲ್ಲದ ಜನಪ್ರತಿನಿಽಗಳು, ಅಽಕಾರಿಗಳಿಂದಾಗಿ ಸರಕಾರಿ ಶಾಲೆಗಳು ಮುಚ್ಚುವ ಪರಿಸ್ಥಿತಿಗೆ ತಲುಪಿದೆ. ಹೀಗೆ ಮುಂದುವರಿಯುತ್ತಿದ್ದರೆ, ನಮ್ಮ ವೇದಿಕೆಯಿಂದ ಜಿಲ್ಲೆಯ ೬೨೨ ಶಾಲೆಗಳ ೧೧,೫೦೦ ಮಂದಿ ಸದಸ್ಯರ ಸಹಿತ ರಾಜ್ಯದ ೪೫ ಸಾವಿರಕ್ಕೂ ಮಿಕ್ಕಿ ಶಾಲೆಗಳ ೮.೫೦ ಲಕ್ಷ ಸದಸ್ಯರು ಸರಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಬೀದಿಗಿಳಿದು ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಬಿಆರ್‌ಪಿ ಸಂತೋಷ್ ಕುಮಾರ್ ಶೆಟ್ಟಿ, ಎಸ್‌ಡಿಎಂಸಿ ಸಮನ್ವಯ ವೇದಿಕೆಯ ಜಿಲ್ಲಾ ಕಾರ್‍ಯದರ್ಶಿ ದೀಪಾ ಮಹೇಶ್, ಬ್ರಹ್ಮಾವರ ಅಧ್ಯಕ್ಷ ಬಾಲಕೃಷ್ಣ ಪೂಜಾರಿ, ಕಾರ್‍ಯದರ್ಶಿ ಆರತಿ ಮೇಲಾಂಟ, ಪುರಸಭಾ ಘಟಕಾಧ್ಯಕ್ಷ ಅಶ್ವಥ್ ಕುಮಾರ್, ಕುಂದಾಪುರ ಕಾರ್‍ಯದರ್ಶಿ ಪ್ರಮೋದಾ ಕುಶಲ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು.

ಬೈಂದೂರು ವಲಯದ ಅಧ್ಯಕ್ಷ ಅವನೀಶ ಹೊಳ್ಳ ಸ್ವಾಗತಿಸಿ, ರವಿ ಮರವಂತೆ ವಂದಿಸಿದರು. ಕುಂಭಾಶಿ ಘಟಕದ ಅಧ್ಯಕ್ಷೆ ದೀಪಿಕಾ ರಮೇಶ್, ರಾಜಶೇಖರ್ ಕಾಳಾವರ ಕಾರ್‍ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here