ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಅತೀ ವೇಗವಾಗಿ ಬಂದ ಪಿಕ್ ಅಪ್ ವಾಹನ ಆಟೋ ರಿಕ್ಷಾಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಘಟನೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಹೆಮ್ಮಾಡಿ ಸಮೀಪದ ಮೂವತ್ತುಮುಡಿ ಸೇತುವೆ ಬಳಿ ಶನಿವಾರ ಸಂಜೆ ನಡೆದಿದೆ.
ಅಪಘಾತದಲ್ಲಿ ಆಟೋದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಆಟೋ ರಿಕ್ಷಾ ಡಿವೈಡರ್ ಏರಿ ನಿಂತಿದ್ದು, ಪಿಕ್ ವಾಹನ ರಸ್ತೆಯಿಂದ ಕೆಳಗಿಳಿದು ಹೊಳೆಯಂಚಿನಲ್ಲಿ ಜಾರಿದೆ.
ಪಿಕ್ ಅಪ್ ವಾಹನದಲ್ಲಿ ಇಬ್ಬರು ಇದ್ದು ಚಾಲಕನಿಗೆ ಅಲ್ಪಸ್ವಲ್ಪ ಗಾಯಗಳಾಗಿವೆ ಎನ್ನಲಾಗಿದ್ದು, ಆಟೋದಲ್ಲಿ ನಾಲ್ಕು ಜನ ಇದ್ದರು. ಎರಡೂ ವಾಹನಗಳು ತ್ರಾಸಿ ಕಡೆಯಿಂದ ಕುಂದಾಪುರ ಕಡೆಗೆ ಪ್ರಯಾಣಿಸುತ್ತಿದ್ದವು. ಕುಂದಾಪುರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ