ಹಂಗಾರಕಟ್ಟೆ- ಅಶಕ್ತರ ಬಾಳಿನ ಆಶಾಕಿರಣ ಹ.ರಾ. ವಿನಯಚಂದ್ರ ಸಾಸ್ತಾನ ಅವರಿಗೆ ಪಂಚವರ್ಣ ರಜತ ಗೌರವ ಪ್ರದಾನ

0
438

ಅನಾಥರನ್ನು ಸಲಹುದೆ ಪುಣ್ಯದ ಕಾರ್ಯ -ಬಾಳೆಕುದ್ರು ಶ್ರೀ ನೃಸಿಂಹಾಶ್ರಮ ಸ್ವಾಮೀಜಿ

ಕುಂದಾಪುರ ಮಿರರ್ ಸುದ್ದಿ…
ಕೋಟ: ಸೇವೆಯನ್ನು ತನ್ನ ಜೀವನದ ಸರ್ವಸ್ವ ಎಂದು ತಿಳಿದು ನಿರಂತರವಾಗಿ ಸೇವಾ ಚಟುವಟಿಕೆಯಲ್ಲಿ ತೊಡಗಿಕೊಂಡ ವಿನಯಚಂದ್ರರ ಸಾಮಾಜಿಕ ಕಾರ್ಯ ನಿಜಕ್ಕೂ ಸ್ವಾಗತಾರ್ಹ ಎಂದು ಹಂಗಾರಕಟ್ಟೆ ಬಾಳೆಕುದ್ರು ಶ್ರೀ ಮಠದ ಶ್ರೀ ಶ್ರೀ ಶ್ರೀ ನೃಸಿಂಹಾಶ್ರಮ ಸ್ವಾಮೀಜಿ ಹೇಳಿದ್ದಾರೆ.

ಪಂಚವರ್ಣ ಯುವಕ ಮಂಡಲ ಕೋಟ ಇದರ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ಕೋಟ ಇದರ ಬೆಳ್ಳಿ ಹಬ್ಬದ ಅಂಗವಾಗಿ ಸಾಧಕರಿಗೆ ರಜತ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಕಾರ್ಕಳದ ರಂಗನಪಲ್ಕೆ ಹೊಸಬೆಳಕು ಆಶ್ರಯದ ಸೇವಾ ಪ್ರತಿನಿಧಿ ವಿನಯಚಂದ್ರ ಸಾಸ್ತಾನ ರಜತ ಗೌರವ ಪ್ರದಾನ ಮಾಡಿ ಆಶ್ರೀವಚನಗೈದು ಅನಾಥರನ್ನು ಸಲಹುದೆ ಪುಣ್ಯದ ಕಾರ್ಯ ತನ್ನ ವಯಕ್ತಿಕ ಜೀವನವನ್ನು ಬದಿಗಿಟ್ಟು ಸಮಾಜದ ಋಣ ತಿರಿಸುವ ನಿಮ್ಮ ಸೇವೆ ನಿರಂತರವಾಗಲಿ ಪಂಚವರ್ಣ ಸಂಸ್ಥೆ ನಿಜಕ್ಕೂ ಅರ್ಥಪೂರ್ಣವಾಗಿ ರಜತ ವರ್ಷಾಚರಣೆ ಆಚರಿಸಿದೆ ಇದು ಅಭಿನಂದನೀಯ ಎಂದರು.
ಸಮಾಜಸೇವಕ ,ಅಶಕ್ತರ ಬಾಳಿನ ಆಶಾಕಿರಣ ರಂಗನಪಲ್ಕೆ ಹೊಸಬೆಳಕು ಆಶ್ರಮದ ಸೇವಾ ಪ್ರತಿನಿಧಿ ಹ.ರಾ ವಿನಯಚಂದ್ರ ಸಾಸ್ತಾನ ಇವರಿಗೆ ಪಂಚವರ್ಣ ರಜತ ಗೌರವಾರ್ಪಣೆ ಪ್ರದಾನ ಮಾಡಲಾಯಿತು.ಈ ಸಂದರ್ಭದಲ್ಲಿ ಸ್ಥಳೀಯ ದಾನಿಗಳ ಹಾಗೂ ಪಂಚವರ್ಣ ಸಂಸ್ಥೆ ವತಿಯಿಂದ ದಿನಸಿ ಪರಿಕರಯುಕ್ತ ರಜತ ಹೊರೆಕಾಣಿಕೆ ಹಸ್ತಾಂತರಿಸಲಾಯಿತು.

Click Here

ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಳದ ನಿಕಟಪೂರ್ವ ಅಧ್ಯಕ್ಷ ಪ್ರಸ್ತುತ ಸದಸ್ಯ ಕೆ.ಅನಂತಪದ್ಮನಾಭ ಐತಾಳ್ ವಿವಿಧ ಪರಿಕರಗಳನ್ನು ಆಶ್ರಮಕ್ಕೆ ಹಸ್ತಾಂತರಿಸಿದರು.

ಕೋಟ ಪಂಚವರ್ಣ ಯುವಕ ಮಂಡಲ ಅಧ್ಯಕ್ಷ ಅಜಿತ್ ಆಚಾರ್ಯ ಅಧ್ಯಕ್ಷತೆಯನ್ನು ವಹಿಸಿದ್ದರು.
ಬಾಳೆಕುದ್ರು ಶ್ರೀ ಮಠದ ಅಧ್ಯಕ್ಷ ರಾಜಶೇಖರ ಕಲ್ಕೂರ, ಪಂಚವರ್ಣ ಮಹಿಳಾ ಮಂಡಲ ಅಧ್ಯಕ್ಷೆ ಕಲಾವತಿ ಅಶೋಕ್,ಹಂದಟ್ಟು ಮಹಿಳಾ ಬಳಗದ ಅಧ್ಯಕ್ಷೆ ಪುಷ್ಭಾ ಕೆ ಹಂದಟ್ಟು ,ಸ್ಥಾಪಕಾಧ್ಯಕ್ಷ ಸುರೇಶ್ ಗಾಣಿಗ,ಮಣೂರು ಫ್ರೆಂಡ್ಸ್ ಅಧ್ಯಕ್ಷ ದಿನೇಶ್ ಆಚಾರ್ಯ,ಸಂಯುಕ್ತ ಒಕ್ಕೂಟದ ಸಂಯೋಜಕ ಸತ್ಯನಾರಾಯಣ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು. ಪಂಚವರ್ಣದ ಕಾರ್ಯಾಧ್ಯಕ್ಷ ರವೀಂದ್ರ ಕೋಟ ಸ್ವಾಗತಿಸಿ ಪ್ರಾಸ್ತಾವನೆ ಸಲ್ಲಿಸಿದರು. ಪಂಚವರ್ಣ ಮಹಿಳಾ ಮಂಡಲದ ಸುಜಾತ ಬಾಯರಿ ಕಾರ್ಯಕ್ರಮ ನಿರೂಪಿಸಿದರು.ಪಂಚವರ್ಣ ಗೌರವ ಸದಸ್ಯ ರಾಧಕೃಷ್ಣ ಬ್ರಹ್ಮಾವರ ವಂದಿಸಿದರು.

Click Here

LEAVE A REPLY

Please enter your comment!
Please enter your name here