ಸಾಧಕರೆಡೆ – ನಮ್ಮನಡೆ ತಿಂಗಳ ಕಾರ್ಯಕ್ರಮ ಶಿವಾನಂದ ಅಡಿಗ ಮಣೂರು ಸನ್ಮಾನ

0
343

ಕುಂದಾಪುರ ಮಿರರ್ ಸುದ್ದಿ…

ಕೋಟ: ಶ್ರೀ ಶಾಂತಿಮತೀ ಪ್ರತಿಷ್ಠಾನ ಹಮ್ಮಿಕೊಂಡ ಸಾಧಕರೆಡೆ – ನಮ್ಮನಡೆ ತಿಂಗಳ ಕಾರ್ಯಕ್ರಮದಲ್ಲಿ 2023ರ ಫೆ. ತಿಂಗಳ ಸಾಧಕರಾಗಿ ಕೃಷಿ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ಸಾಮಾಜಿಕ ಕಾರ್ಯಕರ್ತ ಶಿವಾನಂದ ಅಡಿಗ ಮಣೂರು ಇವರನ್ನು ಗೌರವಿಸಲಾಯಿತು.

Click Here

ಕೇರಳ ಕೊಲ್ಲಂನ ಅಮ್ಮ ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ರಮೇಶ ಅಡಿಗ ಉಪಸ್ಥಿತರಿದ್ದು ಲಲಿತಾ ಸಹಸ್ರನಾಮದ ಮಹತ್ವವನ್ನು ವಿವರಿಸಿದರು. ಪ್ರತಿಷ್ಠಾನದ ಕೋಶಾಧಿಕಾರಿ ಉಮೇಶ ಬಾಯರಿ, ಸದಸ್ಯರಾದ ವನಿತಾ ಉಪಾಧ್ಯ, ಲಕ್ಷ್ಮೀ ಭಟ್ ಹಾಗೂ ಶಿವಾನಂದ ಅಡಿಗರ ಹಿತೈಷಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಶ್ರೀ ಶಾಂತಿಮತೀ ಪ್ರತಿಷ್ಠಾನವು ದಶಮಾನೋತ್ಸವದ ಸವಿನೆನಪಿಗಾಗಿ ನಡೆಸುತ್ತಿರುವ ಕೋಟಿ ಗಾಯತ್ರೀ ಜಪ ಹಾಗು ಲಕ್ಷ ಲಲಿತಾ ಸಹಸ್ರನಾಮ ಪಾರಾಯಣದ ಅಭಿಯಾನವು ಈ ಸಂದರ್ಭದಲ್ಲಿ ನಡೆಯಿತು. ಪ್ರತಿಷ್ಠಾನದ ಪ್ರಸನ್ನ ಭಟ್ ಸ್ವಾಗತಿಸಿ ಡಾ| ವಿಜಯ ಮಂಜರ್ ಪ್ರಸ್ತಾವನೆಗೈದರು. ಪ್ರತಿಷ್ಠಾನದ ಅಧ್ಯಕ್ಷ ಸಚ್ಚಿದಾನಂದ ಅಡಿಗರು ಧನ್ಯವಾದಗೈದರು. ರಾಮಚಂದ್ರ ಉಡುಪ ಕಾರ್ಯಕ್ರಮ ನಿರ್ವಹಣೆಗೈದರು.

Click Here

LEAVE A REPLY

Please enter your comment!
Please enter your name here