ಕುಂದಾಪುರ ಮಿರರ್ ಸುದ್ದಿ…
ಕೋಟ: ಇಲ್ಲಿನ ಕೋಟ ಗ್ರಾಮಪಂಚಾಯತ್ ನಲ್ಲಿ ರಾಷ್ಟ್ರೀಯ ಹೆದ್ದಾರಿ ಸಮಸ್ಯೆಗಳ ಕುರಿತು ಸಭೆ ಪಂಚಾಯತ್ ಅಧ್ಯಕ್ಷ ಅಜಿತ್ ದೇವಾಡಿಗ ಅಧ್ಯಕ್ಷತೆಯಲ್ಲಿ ಮಂಗಳವಾರ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಸಭೆಯಲ್ಲಿ ಕೋಟ ರಾಷ್ಟ್ರೀಯ ಹೆದ್ದಾರಿ ಅಮೃತೇಶ್ವರಿ ಸರ್ಕಲ್ ಬಳಿ ಅಪಘಾತ ಸೇರಿದಂತೆ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು.
ಇತ್ತೀಚಿಗೆ ಉಡುಪಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪಂಚಾಯತ್ ಸಮ್ಮುಖದಲ್ಲಿ ಅಮೃತೇಶ್ವರಿ ಸರ್ಕಲ್ ಬಂದ್ ಗೊಳಿಸುವ ಬಗ್ಗೆ ಸ್ಥಳೀಯ ಅಭಿಪ್ರಾಯ ತೆಗೆದು ನಿರ್ಣಯ ಮಾಡಿ ನೀಡಲು ಸಲಹೆ ನೀಡಿದ್ದಾರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪರಿಹಾರ ಪಡೆದುಕೊಂಡ ಸ್ಥಳಗಳನ್ನು ತೆರವುಗೊಳಿಸಲು ಸಭೆಯಲ್ಲಿ ಸೂಚಿಸಿ ನಿರ್ಣಯ ಕೈಗೊಂಡಿತು. ಈ ಮೂಲಕ ಅಲ್ಲಿನ ವಿವಿಧ ಸಮಸ್ಯೆಗಳನ್ನು ಬಗೆಹರಿಸಬಹುದಾಗಿದೆ,ಸರ್ಕಲ್ ಬಳಿ ವಿಭಜಕವನ್ನು ಅಗಲಿಕರಣಗೊಳಿಸಿ ವಾಹನ ನಿಲ್ಲುವಷ್ಟು ವ್ಯವಸ್ಥೆ ಕಲ್ಪಿಸಲು ಕುರಿತಂತೆ ಸರ್ಕಲ್ ಬಳಿ ಹೈಮಾಸ್ಟ್ ಅಳವಡಿಸುವ ಕುರಿತು ಸಭೆ ಸೂಚಿಸಿತು.
ಸಭೆಯಿಂದ ಹೊರಗುಳಿದ ನವಯುವ ಕಂಪನಿ
ಸಭೆಯಲ್ಲಿ ನವಯುಗ ಕಂಪನಿ ಅನುಪಸ್ಥಿತಿ ಬಗ್ಗೆ ಪಂಚಾಯತ್ ಆಕ್ರೋಶ ಹೊರಹಾಕಿ ಅವರ ವಿರುದ್ಧ ನೋಟೀಸ್ ಜಾರಿಗೊಳಿಸುವ ನಿರ್ಧಾರ ಕೈಗೊಂಡಿತು.
ಈ ಕಾರ್ಯಕ್ರಮದಲ್ಲಿ ಪಂಚಾಯತ್ ಸಭಾಂಗಣದ ಮೇಲ್ಭಾಗದ ವಿನ್ಯಾಸದ ಅನುದಾನ ಒದಗಿಸಿದ ಮನೋವೈದ್ಯ ಡಾ.ಸಿ ಪ್ರಕಾಶ್ ತೋಳಾರ್ ,ಕರಾವಳಿ ಓಷಿಯನ್ ಪ್ರಾಡೆಕ್ಟ್ ಪರವಾಗಿ ಸುರೇಂದ್ರ ಪೂಜಾರಿ ಇವರನ್ನು ಅಭಿನಂದಿಸಲಾಯಿತು.
ಸಭೆಯಲ್ಲಿಆಟೋ ಚಾಲಕ ಸಂಘದ ಪದಾಧಿಕಾರಿಗಳು,ಹಿ.ಜಾ.ವೇ ಕೋಟ ಪದಾಧಿಕಾರಿಗಳು, ಪಂಚಾಯತ್ ಉಪಾಧ್ಯಕ್ಷೆ ಜಯಂತಿ ಪೂಜಾರಿ,ಕೋಟ ಠಾಣಾಧಿಕಾರಿ ಮಧು ಬಿ.ಇ,ಗೋವೆನ್ ಮೆರಿನ್ ಫ್ರೆಶ್ ಪಾಲುದಾರ ಬಿಜು ನಾಯರ್, ಕೋಟ ಅಮೃತೇಶ್ವರಿ ದೇವಳದ ಅಧ್ಯಕ್ಷ ಆನಂದ್ ಸಿ ಕುಂದರ್,ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುರೇಶ್ ಬಂಗೇರ,ಉದ್ಯಮಿ ಸದಾನಂದ ಪೂಜಾರಿ,ಲಕ್ಷ್ಮೀ ಸೋಮಬಂಗೇರ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ.ಸುನೀತಾ, ಸದಸ್ಯರು ,ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪಂಚಾಯತ್ ಸದಸ್ಯ ಚಂದ್ರ ಪೂಜಾರಿ ನಿರೂಪಿಸಿದರು.