ಕುಂದಾಪುರ ಮಿರರ್ ಸುದ್ದಿ…
ಕೋಟ: ಇಲ್ಲಿನ ಕೋಟತಟ್ಟು ಪಡುಕರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇದರ ನೂತನ ರಂಗಮಂಟಪ ಹಾಗೂ ಕೊಠಡಿ ಶಿಲಾನ್ಯಾಸ ಕಾರ್ಯಕ್ರಮ ಇತ್ತೀಚಿಗೆ ನಡೆಯಿತು.
ಧಾರ್ಮಿಕ ಕಾರ್ಯಕ್ರಮವನ್ನು ಸಾಲಿಗ್ರಾಮ ವೇ.ಮೂ ಜನಾರ್ದನ ಅಡಿಗ ನೆರವೇರಿಸಿದರು.ಕೋಟದ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ಶಿಲಾನ್ಯಾಸಗೈದರು.
ಕಾರ್ಯಕ್ರಮದಲ್ಲಿ ಕೋಟತಟ್ಟು ಗ್ರಾಮಪಂಚಾಯತ್ ಅಧ್ಯಕ್ಷೆ ಅಶ್ವಿನಿ ದಿನೇಶ್,ಸದಸ್ಯೆ ವಿದ್ಯಾ ಸಾಲಿಯಾನ್, ಕರ್ಣಾಟಕ ಬ್ಯಾಂಕ್ ನಿವೃತ್ತ ಜನರಲ್ ಮ್ಯಾನೇಜರ್ ರವೀಂದ್ರನಾಥ ಹಂದೆ,ಶಾಲಾ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಾಗರಾಜ್ ಹಂದೆ,ಶಾಲಾ ಹಳೆವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಶಿವಮೂರ್ತಿ ಕೆ,ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಸುಲೇಮಾನ್ , ಉಪಾಧ್ಯಕ್ಷೆ ಶ್ಯಾಮಲ,ಅನಿತಾ,ಶ್ರೀನಿವಾಸ್ ,ಮಾಜಿ ಅಧ್ಯಕ್ಷ ಹುಸೇನ್ ,ಶಾಲಾ ಮುಖ್ಯ ಶಿಕ್ಷಕಿ ಜಾನಕಿ ಭಟ್,ಸಹಶಿಕ್ಷಕರಾದ ಸಂಗೀತ ಕೋಟ್ಯಾನ್ ,ಗಣೇಶ್ ಆಚಾರಿ,ಅರವಿಂದ ಹೆಬ್ಬಾರ್,ಗೌರವ ಶಿಕ್ಷಕಿ ಶೈಲಜಾ,ಗುತ್ತಿಗೆದಾರ ರಹೀಲ್ ಇಬಾಹಿಂ , ಸ್ಥಳೀಯರಾದ ಕೇಶವ ಪುತ್ರನ್,ಅಕ್ಷರದಾಸೋಹ ಸಿಬ್ಬಂದಿಗಳು, ಉಪಸ್ಥಿತರಿದ್ದರು.