ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೈಲೂರು ಕುಂದಾಪುರ ತ ರೋಬೋಸಾಪ್ಟ್ ಉಡುಪಿ ಇವರು ಕೊಡಮಾಡಿದ ಕಂಪ್ಯೂಟರಗಳ ಹಸ್ತಾಂತರ ಕಾರ್ಯಕ್ರಮವು ಶಾಲಾ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಸಂತೋಷ ಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಿತು.
ಅಜಿತ್ ಸಿನಿಯರ್ ಎಗ್ಸಿಕ್ಯೂಟಿವ್ ಇನ್ಪ್ರಾಸ್ಟ್ರೆಕ್ಚರ್ ಆಂಡ್ ಮೈನ್ಟೆನೆಸ್ ರೋಬೋ ಸಾಪ್ಟ್ (Senior Executive Infrastructure and Maintenance) ಇವರು ಸುಮಾರು ಒಂದು ಲಕ್ಷ ಮೂವತೈದು ಸಾವಿರ ಮೊತ್ತದ ಮೂರು ಕಂಪ್ಯೂಟರ್‌ಗಳು ಮತ್ತು ಮೂರು ಯು ಪಿ ಎಸ್‌ಗಳನ್ನು ಶಾಲೆಗೆ ಹಸ್ತಾಂತರಿಸಿ ಮಾತನಾಡುತ್ತ ಗ್ರಾಮೀಣ ಪ್ರದೇಶದ ಶಾಲೆಯೊಂದು ಆಧುನಿಕ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಂಡು ಮಕ್ಕಳ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ಶ್ಲಾಘನೀಯವಾದುದು” ಎಂದು ಅಭಿಪ್ರಾಯ ಪಟ್ಟರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಶಾಲಾ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷರು, ಶತಮಾನೋತ್ಸವ ಸಮಿತಿ ಅಧ್ಯಕ್ಷರು ಹಾಗೂ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಘಟಕದ ಸಭಾಪತಿಗಳಾದ ಜಯಕರ ಶೆಟ್ಟಿ ಮೂಡುಬೈಲೂರು, ವಿರೇಂದ್ರ ಸಿನಿಯರ್ ಟೆಕ್‌ನಿಕಲ್ ಸೂಪರ್‌ಇನ್‌ಡೆಂಟ್ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ, ರೋಬೋಸಾಪ್ಟ್‌ನ ಎಗ್ಸಿಕ್ಯೂಟಿವ್ ಮ್ಯಾನೇಜರ್‌ಗಳಾದ ಶರತ್ ಮತ್ತು ರಕ್ಷಿತ್ ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಗಿರಿಜಾ ಡಿ ಸ್ವಾಗತಿಸಿದರು. ಸಹಶಿಕ್ಷಕ ಆನಂದ ಕುಲಾಲ ಪ್ರಸ್ತಾವನೆಗೈದರು. ಪ್ರೌಢ ಶಾಲಾ ಸಹಶಿಕ್ಷಕ ನಾರಾಯಣ ಅಡಿಗ ವಂದಿಸಿದರು. ಸಹಶಿಕ್ಷಕ ಸಂತೋಷ ಕಾರ್ಯಕ್ರಮ ನಿರೂಪಿಸಿದರು.