ಕುಂದಾಪುರ ಮಿರರ್ ಸುದ್ದಿ…
ಕೋಟ: ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿರ್ದೇಶಮದ ಮೇರೆಗೆ ಪ್ರತಿ ತಿಂಗಳ ಶನಿವಾರ ಆಯಾ ಪಂಚಾಯತ್ ವ್ಯಾಪ್ತಿಗಳ ರಸ್ತೆ,ಸಮುದ್ರ ತಟ ಸ್ವಚ್ಛಗೊಳಿಸುವ ಸುತ್ತೋಲೆ ಹೊರಡಿಸಿದ್ದು ಅದರಂತೆ ಕೋಟ ಗ್ರಾಮಪಂಚಾಯತ್ ಶನಿವಾರ ಕೋಟ ಠಾಣೆ ಸಮೀಪ ರಾಷ್ಟ್ರೀಯ ಸ್ವಚ್ಛತಾ ಅಭಿಯಾನ ಹಮ್ಮಿಕೊಂಡಿತು.
ಈ ಸಂದರ್ಭದಲ್ಲಿ ಕೋಟ ಗ್ರಾಮಪಂಚಾಯತ್ ಅಧ್ಯಕ್ಷ ಅಜಿತ್ ದೇವಾಡಿಗ,ಕಾರ್ಯದರ್ಶಿ ಶೇಖರ್ ಮರವಂತೆ,ಪಂಚಾಯತ್ ಸದಸ್ಯರು,ಎಸ್ ಎಲ್ ಆರ್ ಎಂ ಘಟಕದ ಲೋಲಾಕ್ಷಿ ಕೊತ್ವಾಲ್ ಮತ್ತಿತರರು ಉಪಸ್ಥಿತರಿದ್ದರು.