ಬಸ್ರೂರು: ಶ್ರೀ ಶಾರದಾ ಆಂಗ್ಲ ಮಾಧ್ಯಮ ಶಾಲೆ ಅಧಿಕಾರ ಹಸ್ತಾಂತರ

0
524

ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಶಾಲೆ ಮತ್ತು ದೇವಾಲಯಗಳು ಅಭಿವೃದ್ಧಿಗೊಂಡರೇ ಇಡೀ ಗ್ರಾಮವೇ ಅಭಿವೃದ್ಧಿ ಹೊಂದುತ್ತದೆ. ಈ ನಿಟ್ಟಿನಲ್ಲಿ ಸುದೀರ್ಘ 18 ವರ್ಷಗಳ ಇತಿಹಾಸವಿರುವ ಈ ಶಾಲೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ದೇವಾನಂದ್ ಶೆಟ್ಟಿ ಹೇಳಿದರು.

ಕೋಳ್ಕೆರೆ ರತ್ನಾಕರ್ ಶೆಟ್ಟಿ ಮೆಮೋರಿಯಲ್ ಎಜುಕೇಶನ್ ಟ್ರಸ್ಟ್ ಇವರಿಂದ ನಡೆಸಲ್ಪಟ್ಟ ಬಸ್ರೂರು ಶ್ರೀ ಶಾರದಾ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯನ್ನು ನೂತನ ಆಡಳಿತ ಮಂಡಳಿಯಾದ ಬ್ರಹ್ಮಶ್ರೀ ಎಜುಕೇಶನಲ್ ಟ್ರಸ್ಟ್ ಗೆ ಹಸ್ತಾಂತರ ಮಾಡುವ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.

Click Here

Click Here

ಈ ಸಂದರ್ಭ ಕೆಆರ್ ಎಸ್ಎಂಇ ಟ್ರಸ್ಟ್‌ ನ ಅಧ್ಯಕ್ಷೆ ಗಿರಿಜಾ ಆರ್ ಶೆಟ್ಟಿ, ಶಾಲಾ ಸಂಚಾಲಕ ಅರುಣ್ ಕುಮಾರ್ ಶೆಟ್ಟಿ, ಟ್ರಸ್ಟ್ ನ ಸದಸ್ಯರುಗಳಾದ ಅಬ್ದುಲ್ ಜುನೈದ್, ಮೋಸಸ್ ಮನೋಹರ ಇವರು ಶಾಲೆಗೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ಬ್ರಹ್ಮಶ್ರೀ ಎಜುಕೇಶನಲ್ ಟ್ರಸ್ಟ್ ನ ಅಧ್ಯಕ್ಷ ಸಂತೋಷ್ ಶೆಟ್ಟಿ ಇವರಿಗೆ ಹಸ್ತಾಂತರಿಸಿ ಶುಭ ಹಾರೈಸಿದರು.
ನೂತನ ಆಡಳಿತ ಮಂಡಳಿಯಾದ ಬ್ರಹ್ಮಶ್ರೀ ಎಜುಕೇಶನಲ್ ಟ್ರಸ್ಟ್ ನ ಅಧ್ಯಕ್ಷ ಸಂತೋಷ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಆಶಾ ಸಂತೋಷ್ ಕುಮಾರ್ ಶೆಟ್ಟಿ, ಅಂಪಾರು ಮಾಜಿ ಗ್ರಾಮ ಪಂಚಾಯತ್ ಸದಸ್ಯ ರೋಷಣಿ, ಬ್ರಹ್ಮಶ್ರೀ ಎಜುಕೇಶನಲ್ ಟ್ರಸ್ಟ್ ನ ಟ್ರಸ್ಟಿಗಳಾದ ಅಶೋಕ್ ಎನ್, ಸುಧೀರ್ ಕುಮಾರ್, ರಮೇಶ್ ಪೂಜಾರಿ, ಗಣೇಶ್ ಎಸ್ ಬೀಜಾಡಿ, ಶಾಲಾ ಪ್ರಾಂಶುಪಾಲೆ ಅನಿತಾ ಆಲಿಸ್ ಡಿಸೋಜಾ ಉಪಸ್ಥಿತರಿದ್ದರು. ಶಾಲಾ ಶಿಕ್ಷಕ ಸಂಜಿತ್ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು.

Click Here

LEAVE A REPLY

Please enter your comment!
Please enter your name here