ಕುಂದಾಪುರ ಮಿರರ್ ಸುದ್ದಿ…
ಕೋಟ: ಇಲ್ಲಿನ ಕೋಟತಟ್ಟು ಗ್ರಾಮಪಂಚಾಯತ್ ವ್ಯಾಪ್ತಿಯ ಕಲ್ಮಾಡಿ ಅಂಗನವಾಡಿಯಲ್ಲಿ ಹೋಳಿ ಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು.
ಪೂರ್ವಾಹ್ನ 10ಗ ಪುಟಾಣಿಗಳು ಅಂಗನವಾಡಿ ಪ್ರವೇಶಿಸುತ್ತಿದ್ದಂತೆ ಇಪ್ಪತ್ತಕ್ಕೂ ಅಧಿಕ ಪುಟಾಣಿಗಳು ಬಣ್ಣ ಬಣ್ಣದ ಓಕುಳಿಯಾಟದಲ್ಲಿ ನಲಿದಾಡಿದರು.
ಸಾಮಾನ್ಯವಾಗಿ ಹೋಳಿ ಹಬ್ಬದಂತೆ ಬೇರೆ ಬೇರೆ ಭಾಗದಲ್ಲಿ ಜನ,ಸಮುದಾಯ ಸಂಭ್ರಮಿಸುತ್ತಾರೆ ಆದರೆ ಅಂಗನವಾಡಿಯಲ್ಲಿ ಅದು ಕಾರಂತರ ವಿಚಾರಧಾರೆ ಪಸರಿಸುವ ಥೀಂ ಪಾರ್ಕನಲ್ಲಿ ಪುಟಾಣಿ ಮಕ್ಕಳ ಹೋಳಿ ಓಕುಳಿ ವಿಶೇಷವಾಗಿ ಗಮನ ಸೆಳೆಯಿತು.
ಪುಟಾಣಿಗಳೊಂದಿಗೆ ನಲಿದಾಡಿದ ಟೀಚರ್
ಹೋಳಿ ಸಂಭ್ರಮದ ಹಿನ್ನಲ್ಲೆಯಲ್ಲಿಕಾರಂತ ಥೀಮ್ ಪಾರ್ಕನಲ್ಲಿ ಮಕ್ಕಳ ಹಸ್ತವನ್ನು ಬಿಳಿ ಕಾಗದದ ಮೇಲೆ ಬಣ್ಣ ಬಣ್ಣದ ಹಸ್ತದ ಅಚ್ಚು ಸಂಗ್ರಹಿಸಲಾಯಿತು. ಮಕ್ಕಳು ಥೀಮ್ ಪಾರ್ಕ್ ಹೊರಾಂಗಣದಲ್ಲಿ ವಿವಿಧ ಬಗೆಯ ಆಟ ಆಡಿ ಕುಶಿಪಟ್ಟವು. ಈ ನಡುವೆ ಪಟಾಣಿಗಳಿಗೆ ಹೋಳಿಯ ಮಹತ್ವ ಸಾರಿದರಲ್ಲದೆ ಅದರ ಗೀತೆಗಳಿಗೆ ಹೆಜ್ಜೆ ಹಾಕಿಸಿದರು. ಅಂಗನವಾಡಿ ಕಾರ್ಯಕರ್ತೆ ಜಯಲಕ್ಷ್ಮೀ, ಸಹಾಯಕಿ ಶೈಲಜಾ, ಪೋಷಕರು ಉಪಸ್ಥಿತರಿದ್ದರು.