ಕುಂದಾಪುರ: ಸುಮಾರು 400 ವರ್ಷ ಹಳೆಯ ಲಿಂಗ ಮುದ್ರೆ ಕಲ್ಲು ಪತ್ತೆ.!

0
441

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಕುಂದಾಪುರ ತಾಲೂಕು ಬಸ್ರೂರು ಗ್ರಾಮ ಪಂಚಾಯತ್ ಹಿಂಭಾಗದ ಅಶೋಕ ಪಾರ್ಕ್ ಜೀರ್ಣೋದ್ಧಾರ ಕಾರ್ಯವು ಸ್ಧಳೀಯರ ಸಹಕಾರದಲ್ಲಿ ನಡೆಯುತ್ತಿದ್ದು,ಈ ಪಾರ್ಕ ಅಭಿವೃದ್ಧಿ ಕಾರ್ಯದ ಸಮಿತಿ ಅಧ್ಯಕ್ಷರು ಹಾಗೂ ಗ್ರಾಮ ಪಂಚಾಯತ್ ಸದಸ್ಯರಾದ ಮಹೇಶ್ ಮೆಂಡನ್ ನೇತೃತ್ವದಲ್ಲಿ ಜಾಗ ಸಮತಟ್ಟು ಮಾಡುವ ಸಂದರ್ಭ ಲಿಂಗಮುದ್ರೆ ಕಲ್ಲು ಪತ್ತೆಯಾಗಿದೆ. ಈ ಕಲ್ಲಿನ ಬಗ್ಗೆ ಭಾರತೀಯ ಇತಿಹಾಸ ಸಂಕಲನ ಸಮಿತಿ ಕರ್ನಾಟಕ ಉಡುಪಿ ಜಿಲ್ಲೆಯ ಜಿಲ್ಲಾ ಸಂಚಾಲಕರು ಪ್ರದೀಪ ಕುಮಾರ್ ಬಸ್ರೂರು ಇವರ ಗಮನಕ್ಕೆ ತಂದಿದ್ದರು.

ಕಲ್ಲಿನಲ್ಲಿ ಸೂರ್ಯ,ಚಂದ್ರ,ಶಿವಲಿಂಗ,ನಂದಿ ವಿಗ್ರಹ ಇರುವುದು ಕಂಡು ಬಂದಿದೆ. ಕೆಳದಿಯ ಸ.ಸೂ ನಾಲ್ಕು ನೂರು ವಷ೯ದ ಹಳೆಯ ಲಿಂಗ ಮುದ್ರಿಕೆ ಕಲ್ಲು ಇದಾಗಿದೆ. ಈ ಕಲ್ಲು ಸೂರ್ಯ,ಚಂದ್ರ,ಇರುವ ತನಕ ಅಜರಾಮರವಾಗಿ ಇರಲಿಯೆನ್ನುವಂತ ಸಂದೇಶ ನೀಡುವಂತಿದೆ.

ಶೈವರು ಶಿವನನ್ನು, ವೈಷ್ಣವರು ವಿಷ್ಣುವಿನನ್ನು,ಜೈನರು ತೀಥ೯ಂಕರರನ್ನು ಆರಾಧಿಸುವುದು ಸಾಮಾನ್ಯವಾಗಿತ್ತು. ಶೈವರ ಗಡಿಗಳನ್ನು ಲಿಂಗ ಮುದ್ರೆ ಕಲ್ಲನ್ನು ವೈಷ್ಣವರು ವಾಮನ ಮುದ್ರೆ ಕಲ್ಲನ್ನು ಜೈನರು ಮುಕ್ಕೊಡೆ ಕಲ್ಲುಗಳನ್ನು ಹಾಕುತ್ತಿದ್ದರು. ಆ ಮೂಲಕ ಅವರ ಗಡಿಗಳನ್ನು ಗುರುತು ಮಾಡುವುದು ಸಹಜವಾಗಿತ್ತು.ಅಂತೆಯೇ ಲಿಂಗ ಮುದ್ರೆ ಕಲ್ಲುಗಳನ್ನು ಗಡಿಗೆ ಸಂಬಂಧಿಸಿದ ಗಡಿಯ ಕಲ್ಲುಗಳನ್ನು ಹಾಕಲಾಗಿತ್ತು.

Click Here

Click Here

ಈ ಹಿಂದೆ ಶಾಂತಾವರ ವೀರಾಂಜನೇಯ ಅಣತಿ ದೂರದಲ್ಲಿ ವಾಮನ ಮುದ್ರೆ ಕಲ್ಲು,ರಮಾನಂದ ಶೆಟ್ಟಿಗಾರ ಮನೆ ಬಳಿ ಲಿಂಗ ಮುದ್ರೆ ಕಲ್ಲು ಪತ್ತೆಯಾಗಿತ್ತು.

“ಇತಿಹಾಸದ ಸಂಭಂದಿಸಿದ ಶಾಸನ,ವೀರಗಲ್ಲು,ವಕೈ ಮಾಸ್ತಿ ಕಲ್ಲು ,ಲಿಂಗ ಮುದ್ರೆ ಕಲ್ಲು ಉಳಿಸುವಲ್ಲಿ ಸಾರ್ವಜನಿಕರ ಸಹಕಾರ ಹಾಗೂ ಉಳಿಸುವಲ್ಲಿ ಸೇವೆ ಅಗತ್ಯವಾಗಿದೆ. ನಮ್ಮ ನಮ್ಮ ಊರಿನಲ್ಲಿ ಇತಿಹಾಸದ ದಾಖಲೆ ಉಳಿಸಬೇಕಾಗಿದೆ” ಎಂದು ಫ್ರೊ.ಟಿ. ಮುರುಗೇಶ್ ಇತಿಹಾಸ ಸಂಶೋಧಕರು ಹೇಳಿದ್ದಾರೆ.

ಈ ಲಿಂಗ ಮುದ್ರೆ ಕಲ್ಲು ಪತ್ತೆ ಹಚ್ಚುವಲ್ಲಿ ಪಾರ್ಕ್ ಸಮಿತಿಯ ಕಾರ್ಯದರ್ಶಿಯವರಾದ ನಿತೇಶ್ ಶೆಟ್ಟಿ ಬಸ್ರೂರು , ಮಧುಸೂಧನ್ ಭಟ್ ಸಹಕರಿಸಿದ್ದಾರೆ.

Click Here

LEAVE A REPLY

Please enter your comment!
Please enter your name here