ಗೋವುಗಳ ಶ್ರೇಯಾಭಿವೃದ್ಧಿಗೆ ಯೋಜನೆ -ಸಚಿವ ಕೋಟ ಶ್ರೀನಿವಾಸ ಪೂಜಾರಿ

0
681

ಕುಂದಾಪುರ ಮಿರರ್ ಸುದ್ದಿ…
ಕೋಟ:ಕೇಂದ್ರ ಹಾಗೂ ರಾಜ್ಯ ಸರಕಾರ ಗೋವುಗಳ ಶ್ರೇಯಾಭಿವೃದ್ಧಿಗೆ ಯೋಜನೆಗಳನ್ನು ರೂಪಿಸಿದ್ದು ಅದರಲ್ಲಿ ಬಹುಮುಖ್ಯವಾಗಿ ಗೋ ಶಾಲೆ ನಿರ್ಮಾಣಕ್ಕೆ ಬೇಕಾದ ವ್ಯವಸ್ಥೆಗಳನ್ನು ಈಗಾಗಲೇ ಕಾರ್ಯೊನ್ಮುಖವಾಗಿದ್ದು ಅವುಗಳ ಆರೈಕೆಗೆ ಭಾಗವಾಗಿ ಲಸಿಕಾ ಕ್ರಮಗಳನ್ನು ಕೈಗೊಳ್ಳುತ್ತಿವೆ ಎಂದು ಸಮಾಜಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಇಲಖಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ


ಕೋಟದ ಎ.ಪಿಎಮ್‍ಸಿ ಸಂಕೀರ್ಣದಲ್ಲಿ ಉಡುಪಿ ಜಿಲ್ಲಾ ಪಂಚಾಯತ್ ಪಶುಪಾಲನಾ ಇಲಾಖೆ ಬ್ರಹ್ಮಾವರ ತಾಲೂಕು,ಕೋಟ ಗ್ರಾಮಪಂಚಾಯತ್ ಹಾಗೂ ಹಾಲು ಉತ್ಪಾದಕ ಸಹಕಾರಿ ಸಂಘ ಕೋಟ ಮತ್ತು ಮಣೂರು ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಎನ್,ಎ.ಡಿ.ಸಿ.ಪಿ ಕಾರ್ಯಕ್ರಮದಡಿ 4ರಿಂದ 8ತಿಂಗಳ ಪ್ರಾಯದ ಹಸುಗಳಿಗೆ ಉಚಿತ ಕಂದುರೋಗ ಲಸಿಕಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಸ್ವಾಭಾವಿಕವಾಗಿ ಜಾನುವಾರುಗಳಿಗೆ ಕಾಲಕ್ಕೆ ತಕ್ಕಂತೆ ಲಸಿಕೆಗಳನ್ನು ಹಾಕಿಸುವುದರ ಮೂಲಕ ರೋಗ ಮುಕ್ತ ಜಾನುವಾರುವಾಗಿಸಲು ಸಾಧ್ಯವಿದೆ. ಇದರಿಂದ ನಮ್ಮ ಇಲ್ಲಿನ ಹಸುಗಳ ವಿಶೇಷವಾದ ಬೇಡಿಕೆಗಳು ವ್ಯಕ್ತವಾಗುತ್ತದೆ.ಅದರಿಂದ ತಯಾರಾಗುವ ಉತ್ಪನ್ನಗಳು ವಿದೇಶದಲ್ಲಿ ಮನ್ನಣೆ ಸಿಗುತ್ತದೆ.ಇಲ್ಲವಾದಲ್ಲಿ ಬೇಡಿಕೆಗಳು ಕುಸಿದು ರಫ್ತು ಪ್ರಮಾಣದಲ್ಲಿ ಪರಿಣಾಮಗಳು ಬೀಳುತ್ತದೆ ಆ ನಿಟ್ಟಿನಲ್ಲಿ ನಮ್ಮ ಪ್ರಧಾನಿಗಳು ಕರೆ ಅನುಸಾರ ದೇಶದಲ್ಲಿ ಸೊಂಕು ಮುಕ್ತ ಜಾನುವಾರುವಾಗಿಸಲು ಶ್ರಮಿಸಬೇಕಾಗಿದೆ,
ಗೋಶಾಲೆ ನಿರ್ಮಾಣ ,ಗೋಮಾಳದ ಬಗ್ಗೆ ಉಲ್ಲೇಖ
ಕರ್ನಾಟಕದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೊಂಡರೆ ಸಹಜವಾಗಿ ಗೋವುಗಳಿಗೆ ಬೇಡಿಕೆ ಜಾಸ್ತಿಯಾಗುತ್ತದೆ.ಆ ದಿಸೆಯಲ್ಲಿ ಪ್ರತಿ ಜಿಲ್ಲೆಯಲೂ ಹಾಗೂ ತಾಲೂಕು ಕೇಂದ್ರಗಳಲ್ಲಿ ಗೋ ಶಾಲೆಗಳನ್ನು ನಿರ್ಮಾಣ ಮಾಡಲು ಸಂಕಲ್ಪಿಸಿದೆ.ರಾಜ್ಯ ಎಲ್ಲಾ ಭಾಗಗಳಲ್ಲಿರುವ ಗೋಮಾಳಗಳ ಸಮೀಕ್ಷೆ ಮಾಡಿ ಸರ್ವೇ ಮಾಡಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ.ಈ ಸಂಬಂಧ ಕಂದಾಯ ಇಲಾಖೆ,ಪಶುಸಂಗೋಪನಾ ಇಲಾಖೆ ಹಾಗೂ ನಮ್ಮ ಧಾರ್ಮಿಕದತ್ತಿ ಇಲಾಖೆ ಜೊತೆಗೂಡಿ ಗೋಶಾಲೆ ನಿರ್ಮಾಣ ಮಾಡಲು ಯೋಚನೆ ಯೋಜನೆಗಳನ್ನು ರೂಪಿಸಲು ಈಗಾಗಲೇ ಕಾರ್ಯಪ್ರವೃತ್ತರಾಗಿದ್ದೇವೆ. ನಮ್ಮ ಸರಕಾರ ಹೈನುಗಾರರ ಪರವಾಗಿ ಕಾರ್ಯನಿರ್ವಹಿಸುವ ನಿಟ್ಟಿನಲ್ಲಿ ರೋಗಮುಕ್ತ ಹೈನುಗಾರಿಕೆಗೆ ಸಂಕಲ್ಪಿಸಿದೆ ಅದರಂತೆ ಸ್ಥಳೀಯ ಪಶುಆಸ್ಪತ್ರೆಗಳ,ಸಹಕಾರಿ ಸಂಘಗಳಮೂಲಕ ಅನುಷ್ಠಾನಕ್ಕೆ ಕರೆ ನೀಡಲಾಗಿದೆ.ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷತೆಯನ್ನು ಕೋಟ ಗ್ರಾಮಪಂಚಾಯತ್ ಅಧ್ಯಕ್ಷ ಅಜಿತ್ ದೇವಾಡಿಗ ವಹಿಸಿದರು.

Click Here

Click Here

ಅತಿಥಿಗಳಾಗಿ ಕೋಟ ಗ್ರಾ.ಪಂ ಉಪಾಧ್ಯಕ್ಷೆ ಜಯಂತಿ ಪೂಜಾರಿ,ಸದಸ್ಯರಾದ ವನೀತಾ ಶ್ರೀಧರ ಆಚಾರ್ಯ, ಚಂದ್ರಶೇಖರ್ ಆಚಾರ್ಯ,ಕೋಟ ಸಹಕಾರಿ ಹಾಲು ಉತ್ಪಾದಕ ಸಂಘದ ಅಧ್ಯಕ್ಷ ಪ್ರಕಾಶ್ ಶೆಟ್ಟಿ, ಮಣೂರು ಸಹಕಾರಿ ಹಾಲು ಉತ್ಪಾದಕ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ,ಕೋಟತಟ್ಟು ಪಡುಕರೆ ಸಹಕಾರಿ ಹಾಲು ಉತ್ಪಾದಕ ಸಂಘದ ಅಧ್ಯಕ್ಷ ಕೆ.ಶಿವಮೂರ್ತಿ ಉಪಾಧ್ಯ,ಪಶುಪಾಲನಾ ಇಲಾಖೆಯ ತಾಂತ್ರಿಕ ಸಂಯೋಜಕ ಡಾ.ಸಂದೀಪ್ ಕುಮಾರ್,ಡಾ.ಪ್ರದೀಪ್ ಕೊಂಡೋಜಿ ಸಾಯ್ಬ್ರಿಕಟ್ಟೆ, ಕಳತ್ತೂರು ಸಂತೆಕಟ್ಟೆ ಡಾ.ಮಂಜುನಾಥ ಅಡಿಗ,ಸಾಸ್ತಾನದ ಡಾ. ವಿಜಯ ಕುಮಾರ್,ಕೋಟ ಸಹಕಾರಿ ಹಾಲು ಉತ್ಪಾದಕ ಸಂಘದ ಕಾರ್ಯದರ್ಶಿ ರಾಜೇಶ್,ಉಪಾಧ್ಯಕ್ಷ ನರಸಿಂಹ ಪೂಜಾರಿ,ನಿರ್ದೇಶಕರಾದ ಪ್ರಕಾಶ್ ಶೆಟ್ಟಿ ದ್ಯಾವಸ,ಜಿ ಕೃಷ್ಣ ದೇವಾಡಗ,ಶ್ರೀಕಾಂತ್ ಮಯ್ಯ, ಮಣೂರು ಸಂಘದ ಹರ್ಷ ಪೂಜಾರಿ, ಮತ್ತು ಪಶು ಆಸ್ಪತ್ರೆ ಸಿಬ್ಬಂದಿವರ್ಗ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಬ್ರಹ್ಮಾವರದ ಮುಖ್ಯ ಪಶುಪಾಲನಾ ಇಲಾಖಾ ವೈದ್ಯಾಧಿಕಾರಿ ಡಾ. ಅರುಣ್ ಕುಮಾರ್ ಶೆಟ್ಟಿ ಸ್ವಾಗತಿಸಿ ನಿರೂಪಿಸಿದರು. ಕೋಟತಟ್ಟು ಗ್ರಾಮಪಂಚಾಯತ್ ಸದಸ್ಯ ಸತೀಶ್ ಕುಂದರ್ ವಂದಿಸಿದರು.

Click Here

LEAVE A REPLY

Please enter your comment!
Please enter your name here