ಕುಂದಾಪುರ ಮಿರರ್ ಸುದ್ದಿ…
ಕೋಟ: ಕೋಟದ ಪಂಚವರ್ಣ ಯುವಕ ಮಂಡಲ ಹಾಗೂ ಪಂಚವರ್ಣ ಮಹಿಳಾ ಮಂಡಲ ಇದರ ಬೆಳ್ಳಿ ಹಬ್ಬದ ವರ್ಷಾಚರಣೆಯ ಅಂಗವಾಗಿ ಸಾಧಕರಿಗೆ ರಜತ ಗೌರವಾರ್ಪಣೆ ನೀಡುತ್ತಿದ್ದು ಈ ಹಿನ್ನಲ್ಲೆಯಲ್ಲಿ ಈ ತಿಂಗಳು ವಿಶೇಷಚೇತನರಾಗಿ ತನ್ನ ಅಂಗವೈಕಲ್ಯದ ನಡುವೆ ಕಲಾಪ್ರಕಾರಗಳಿಗೆ ಜೀವತುಂಬುವ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತೆ ಲಲಿತಾ ಪೂಜಾರಿ ಕೊರವಾಡಿ ಇವರನ್ನು ಆಯ್ಕೆಗೊಳಿಸಲಾಗಿದೆ.
ಪಂಚವರ್ಣ ಸಂಸ್ಥೆ ನೀಡುತ್ತಿರುವ ನಾಲ್ಕನೇ ಸಾಧಕ ಶಕ್ತಿಯಾಗಿದ್ದು ಈ ಹಿಂದೆ ಸಹಕಾರಿ ಕ್ಷೇತ್ರದಲ್ಲಿ ಸಾಧನೆಗೈದ ಜಿ.ತಿಮ್ಮ ಪೂಜಾರಿ,ಸಮಾಜಸೇವಕ ಈಶ್ವರ್ ಮಲ್ಪೆ,ಅನಾಥದ ಬದುಕಿನ ಆಶಾಕಿರಣ ವಿನಯಚಂದ್ರ ಸಾಸ್ತಾನ ಇವರುಗಳನ್ನು ಗುರುತಿಸಿದ್ದು ಇಲ್ಲಿ ಸ್ಮರಿಸಬಹುದಾಗಿದೆ.ಇದೇ ಮಾ.25ರಂದು ಕುಂಭಾಶಿಯ ಕೊರವಡಿ ಅವರ ಸ್ವಗೃಹದಲ್ಲಿ ಈ ಗೌರವ ಕಾರ್ಯಕ್ರಮ ನಡೆಯಲಿದೆ ಎಂದು ಪಂಚವರ್ಣ ಸಂಸ್ಥೆಯ ಅಧ್ಯಕ್ಷ ಅಜಿತ್ ಆಚಾರ್ಯ ತಿಳಿಸಿದ್ದಾರೆ.