ಕುಂದಾಪುರ ಮಿರರ್ ಸುದ್ದಿ…
ಕೋಟ: ಅನ್ಯೋನ್ಯತಾ ಆಟೋ ನಿಲ್ದಾಣ ಸಾಸ್ತಾನ ಇದರ ಬಹುದಿನದ ಬೇಡಿಕೆಯಾದ ಆಟೋ ನಿಲ್ದಾಣವನ್ನು ಸ್ಥಳೀಯ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ಅನುದಾನದಡಿ ನಿಲ್ದಾಣ ಹಾಗೂ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ಅನುದಾನದ ಮೂಲಕ ವ್ಯವಸ್ಥೆ ಕಲ್ಪಿಸಿದ್ದು ಇದನ್ನು ಶನಿವಾರ ಲೋಕಾರ್ಪಣೆಗೊಳಿಸಲಾಯಿತು. ನಿಲ್ದಾಣವನ್ನು ಐರೋಡಿ ಗ್ರಾಮಪಂಚಾಯತ್ ಅಧ್ಯಕ್ಷೆ ಗೀತಾ ಶೆಟ್ಟಿ ಉದ್ಘಾಟನೆಗೊಳಿಸಿದರು.
ಈ ಸಂದರ್ಭದಲ್ಲಿ ಐರೋಡಿ ಗ್ರಾಮಪಂಚಾಯತ್ ಉಪಾದ್ಯಕ್ಷ ನಟರಾಜ ಗಾಣಿಗ, ಗೂಡ್ಸ್ ವಾಹನ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ,ಕೋಟ ಬಿಜೆಪಿ ಮಹಾಶಕ್ತಿಕೇಂದ್ರ ಅಧ್ಯಕ್ಷ ಸುರೇಶ್ ಕುಂದರ್,ಮುಖಂಡರಾದ ಶಂಕರ್ ಕುಲಾಲ್,ಆಟೋ ಚಾಲಕ ಸಂಘದ ಪ್ರಮುಖರು, ಸ್ಥಳಿಯ ಗಣ್ಯರು ಉಪಸ್ಥಿತರಿದ್ದರು.