ಕುಂದಾಪುರ ಮಿರರ್ ಸುದ್ದಿ…
ಕೋಟ: ಪ್ರಸ್ತುತ ವಿದ್ಯಾಮಾನದಲ್ಲಿ ಮಕ್ಕಳ ಬಗ್ಗೆ ನಿರ್ಲಕ್ಷ ಹೆಚ್ಚುತ್ತಿದೆ ಈ ಬಗ್ಗೆ ಹೆಚ್ಚಿನ ಗಮನ ಹರಿಸುವುದು ಒಳಿತು ಎಂದು ಸಾಮಾಜಿಕ ಕಾರ್ಯಕರ್ತೆ ಕಲ್ಪನಾ ಭಾಸ್ಕರ್ ಹೇಳಿದರು.
ಕೋಟದ ಪಂಚವರ್ಣ ಮಹಿಳಾ ಮಂಡಲದ ವತಿಯಿಂದ ಮಾತೃಸಂಸ್ಥೆ ಪಂಚವರ್ಣ ಯುವಕ ಮಂಡಲದ ಸಹಯೋಗದೊಂದಿಗೆ ಹದಿಹರೆಯದ ಸಮಸ್ಯೆಗಳ ಕುರಿತು ಮಾಹಿತಿ ಕಾರ್ಯಾಗಾರ ಅರಿವು ನಿಮ್ಮಗಿರಲಿ ನೆರವು ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿ ಹೆಚ್ಚುತ್ತಿರುವ ಮೊಬೈಲ್ ವ್ಯಾಮೂಹ ಅದರಿಂದ ಉದ್ಭವಿಸುತ್ತಿರುವ ಸಮಸ್ಯೆ ಪೋಷಕರಿಗೆ ಕಗ್ಗಂಟ್ಟಾಗಿ ಪರಿಣಮಿಸುತ್ತಿದೆ.ವಿದ್ಯಾರ್ಥಿಗಳು ಶಾಲಾ ಜೀವನಲ್ಲಿ ದುಷ್ಛಟಕ್ಕಿಡಾಗುತ್ತಿದ್ದಾರೆ,ಮಾದಕ ವ್ಯಸವಕ್ಕೆ ಅತಿಹೆಚ್ಚು ಬಲಿಯಾಗುತ್ತಿದ್ದಾರೆ.ಅಶ್ಲೀಲ ವಿಡಿಯೋಗಳಿಂದ ಯುವ ಸಮೂಹ ಲವ್ ಇನ್ನಿತರ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ ಇನ್ನೊಂದೆಡೆ ನಮ್ಮ ಯುವ ಸಮೂಹದ ಆಹಾರ ಕ್ರಮಗಳ ಬದಲಾವಣೆಯಿಂದ ಅನಾರೋಗ್ಯಕ್ಕಿಡಾಗುತ್ತಿದ್ದಾರೆ.ಈ ರೀತಿಯ ಅವ್ಯವಸ್ಥೆಯಿಂದ ಸಮಾಜದ ದೃಷ್ಠಿ ಬದಲಾಗುತ್ತಿದೆ ಇದಕ್ಕೆ ಪೆÇೀಷಕರೇ ಜಾಗೃತರಾಗಬೇಕು ತಮ್ಮ ಮಕ್ಕಳ ಚಲನವಲನಗಳ ಬಗ್ಗೆ ಆಗಾಗ ಕಣ್ಣಾಯಿಸಿ ಜಾಗೃತರನ್ನಾಗಿಸಿ ಸುಸಂಸ್ಕೃತರನ್ನಾಗಿಸಿ ಎಂದು ಕರೆ ಇತ್ತರು.
ಕಾರ್ಯಕ್ರಮವನ್ನು ಕೋಟ ಗ್ರಾಮಪಂಚಾಯತ್ ಸದಸ್ಯೆ ಜ್ಯೋತಿ.ಬಿ ಶೆಟ್ಟಿ ಉದ್ಘಾಟಿಸಿದರು.
ಅಧ್ಯಕ್ಷತೆಯನ್ನು ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಕಲಾವತಿ ಅಶೋಕ್ ವಹಿಸಿದ್ದರು.
ಕೋಟ ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್ಯ ಉಪಸ್ಥಿತರಿದ್ದರು. ಪಂಚವರ್ಣ ಮಹಿಳಾ ಮಂಡಲದ ಸದಸ್ಯೆ ಸುಜಾತ ಬಾಯರಿ ಸ್ವಾಗತಿಸಿ ನಿರೂಪಿಸಿದರು. ಪಂಚವರ್ಣ ಯುವಕ ಮಂಡಲದ ಕಾರ್ಯಾಧ್ಯಕ್ಷ ರವೀಂದ್ರ ಕೋಟ ವಂದಿಸಿದರು.ಪಂಚವರ್ಣ ಮಹಿಳಾ ಮಂಡಲದ ಕಾರ್ಯದರ್ಶಿ ಲಲಿತಾ ಮೂಡುಗಿಳಿಯಾರು ಸಹಕರಿಸಿದರು.