ಕುಂದಾಪುರ ಮಿರರ್ ಸುದ್ದಿ…
ಕೋಟ: ಜಿಲ್ಲಾ ಪಂಚಾಯತ್ ಉಡುಪಿ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಉಡುಪಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಉಡುಪಿ ಇವರ ನೇತೃತ್ವದಲ್ಲಿ ಶನಿವಾರ ಮಣಿಪಾಲದ ಆಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಜರುಗಿದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಕಾರ್ಯಕ್ರಮದಲ್ಲಿ ತೆಕ್ಕಟ್ಟೆ ಗ್ರಾಮ ಪಂಚಾಯತ್‍ನ ಪದ್ಮಕಮಲ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದ ಸ್ವಸಹಾಯ ಗುಂಪಿನ ಮಹಿಳಾ ಚಾಲಕಿ ರೇವತಿ ತೆಕ್ಕಟ್ಟೆ ಇವರನ್ನು ಉಡುಪಿ ಜಿಲ್ಲೆಯ ಎಸ್‍ಎಲ್‍ಆರ್‍ಎಮ್ ಘಟಕದ ಅತ್ಯುತ್ತಮ ಮಹಿಳಾ ವಾಹನ ಚಾಲಕಿ ಸಂಜೀವಿನಿ ಪುರಸ್ಕಾರ ನೀಡಿ ಗೌರವಿಸಲಾಯಿತು.
ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ(ಎನ್‍ಆರ್‍ಎಲ್‍ಎಮ್), ಸಂಜೀವಿನಿ ಯೋಜನೆಯಡಿ ಅಭಿಯಾನದ ಧ್ಯೇಯದಂತೆ ಗ್ರಾಮೀಣ ಮಹಿಳೆಯರ ಸಾಮಾಜಿಕ, ಆರ್ಥಿಕ ಜೀವನೋಪಾಯ ಹಾಗೂ ಹಣಕಾಸು ಸೇರ್ಪಡೆಯ ನಿಟ್ಟಿನಲ್ಲಿ ಘನ ತ್ಯಾಜ್ಯ ನಿರ್ವಹಣಾ ಘಟಕದಲ್ಲಿ ಅತೀ ಹೆಚ್ಚಿನ ಅವಧಿಯವರೆಗೆ ವಾಹನ ಚಾಲಾಯಿಸಿದ ಕೀರ್ತಿ ರೇವತಿ ತೆಕ್ಕಟ್ಟೆ ಇವರಿಗಿದೆ.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಕಿರಣ್ ಪಾಡ್ನೆಕರ್, ಎಡಿಸಿ ವೀಣಾ, ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು, ತೆಕ್ಕಟ್ಟೆ ಗ್ರಾಮ ಪಂಚಾಯತ್‍ನ ಪಿಡಿಒ ಸುನೀಲ್, ವಿಕಾಸ ಸಂಜೀವಿನಿ ಒಕ್ಕೂಟ ತೆಕ್ಕಟ್ಟೆಯ ಸದಸ್ಯರು ಉಪಸ್ಥಿತರಿದ್ದರು.