ಕುಂದಾಪುರ ಮಿರರ್ ಸುದ್ದಿ…
ಕೋಟ: ಸ್ನೇಹಕೂಟ ಮಣೂರು ಇದರ ವತಿಯಿಂದ ವಿಶ್ವಮಹಿಳಾ ದಿನದ ಮಾಸಾಚರಣೆ ಕಾರ್ಯಕ್ರಮ ಮಣೂರು ಭಾರತೀ ವಿಷ್ಣುಮೂರ್ತಿ ಮಯ್ಯ ಮನೆಯಂಗಳದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಕೋಟ ಸೇವಾ ಸಂಗಮ ಶಿಶುಮಂದಿರ ವ್ಯವಸ್ಥಾಪಕಿ ಭಾಗ್ಯವಾದಿರಾಜ್ ಉದ್ಘಾಟಿಸಿದರು.
ಸಭೆಯ ಅಧ್ಯಕ್ಷತೆಯನ್ನು ಸಮಾಜಸೇವಕಿ ಡಾ.ವಾಣಿಶ್ರೀ ವಹಿಸಿ ಮಾತನಾಡಿ ಸಮಾಜಸೇವೆಯ ಮೂಲಕ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ ಎಂಬುವುದನ್ನು ಸಂಘಸಂಸ್ಥೆಗಳು ತೋರಿಸಿಕೊಟ್ಟಿವೆ. ಈ ನಿಟ್ಟಿನಲ್ಲಿ ಸ್ನೇಹಕೂಟದ ಮೂಲಕ ಹಲವಾರು ತೆರೆಯಮರೆಯ ಕಾರ್ಯಗಳು ನಡೆಯುತ್ತಿದೆ ಇದೊಂದು ಬದಲಾವಣೆಗೆ ಹಿಡಿದ ಕೈಗನ್ನಡಿಯಾಗಿದೆ. ತನ್ನ ಮನೆಯಂಗಳವನ್ನು ವಿಶ್ವಮಹಿಳಾ ದಿನದ ವೇದಿಕೆಯಾಗಿರಿಸಿ ಮಹಿಳೆಯರ ತುಡಿತಗಳ ಬಗ್ಗೆ ಚಿಂತಿಸುವ ಕಾರ್ಯ ನಿಜಕ್ಕೂ ಪ್ರಶಂಸನೀಯ, ಸ್ನೇಹಕೂಟ ಸಾಮಾಜಿಕ ಕಾರ್ಯದ ನಡುವೆ ಸಾಂಸ್ಕೃತಿಕವಾಗಿ ತೊಡಗಿಕೊಂಡಿದೆ ಇದು ಇತರ ಸಂಸ್ಥೆಗಳಿಗೆ ಮಾದರಿ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಸ್ನೇಹಕೂಟದ ಸಾಧಕಿಯರಾದ ಭಾರತೀ.ವಿ ಮಯ್ಯ,ಮುಕಾಂಬಿಕಾ ಮಯ್ಯ,ಸುವರ್ಣಲತಾ,ಮೀರಾ ಸಾಮಗ,ವನೀತಾ ಉಪಾಧ್ಯ, ಸುಪ್ರೀತಾ ಪುರಾಣಿಕ ಇವರುಗಳನ್ನು ಅಭಿನಂದಿಸಲಾಯಿತು.
ಭಾಗೇಶ್ಚರಿ ಮಯ್ಯ,ಮಾನಸ ಮಯ್ಯ,ಗಾಯತ್ರಿ ಹೊಳ್ಳ,ಶ್ವೇತ ಉಪಾಧ್ಯ,ಶಶಿಕಲಾ ಐತಾಳ್,ಸುಜಾತ ಬಾಯರಿ ಸನ್ಮಾನಿಸಲಾಯಿತು.
ಸ್ನೇಹಕೂಟದಿಂದ ವಿವಿಧ ಆಟೋಟ ಸ್ಪರ್ಧೆ ಏರ್ಪಡಿಸಿದ್ದು ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಕೋಟ ಸೇವಾಸಂಗಮ ಶಿಶು ಮಂದಿರದ ಇದರ ಕಾರ್ಯದರ್ಶಿ ವಸುಧಾ ಪ್ರಭು,ಕೋಟ ಮಹಿಳಾ ಮಂಡಳ ಉಪಾಧ್ಯಕ್ಷೆ ಗೀತಾ ಎ ಕುಂದರ್ ಉಪಸ್ಥಿತರಿದ್ದರು.ಸನ್ಮಾನ ಕಾರ್ಯಕ್ರಮವನ್ನು ಸುಪ್ರೀತಾ ಪುರಾಣಿಕ ನಿರ್ವಹಿಸಿದರು.
ಕಾರ್ಯಕ್ರಮವನ್ನು ಸುಜಾತ ಬಾಯರಿ ಸ್ವಾಗತಿಸಿ ನಿರೂಪಿಸಿದರು.
ಸಭಾ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮ ನೆರವೆರಿತು.ಗಾಯಿತ್ರಿ ಹೊಳ್ಳ ವಂದಿಸಿದರು.