ಕುಂದಾಪುರ ಮಿರರ್ ಸುದ್ದಿ…
ಕೋಟ: ಕೋಟ ಮಣೂರು ಪಡುಕರೆ ಸಂಯುಕ್ತ ಪ್ರೌಢಶಾಲೆ ಇಲ್ಲಿಗೆ ಕೋಟ ಗ್ರಾಮಪಂಚಾಯತ್ ಉದ್ಯೋಗಖಾತ್ರಿ ಯೋಜನೆ ಹಾಗು ವಿವಿಧ ಇಲಾಖೆಯಿಂದ ಸುಮಾರು 7.30ಲಕ್ಷ ರೂ ಅನುದಾನದಡಿ ಸುಸಜ್ಜಿತ ಶೌಚಾಲಯ ನಿರ್ಮಿಸಿದ್ದು ಇದರ ಹಸ್ತಾಂತರ ಕಾರ್ಯಕ್ರಮ ಸೋಮವಾರ ನಡೆಯಿತು.
ಶೌಚಾಲಯವನ್ನು ಮಣೂರು ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ಉದ್ಘಾಟಿಸಿದರು.
ಬ್ರಹ್ಮಾವರ ತಾಲೂಕು ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಹೆಚ್.ವಿ ಇಬ್ರಾಹಿಂಪು ಕೋಟ ಗ್ರಾಮಪಂಚಾಯತ್ ಅಧ್ಯಕ್ಷ ಅಜಿತ್ ದೇವಾಡಿಗ,ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುರೇಶ್ ಬಂಗೇರ,ಲಕ್ಷ್ಮೀ ಸೋಮಬಂಗೇರ ಸರಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ.ಸುನೀತಾ,ಉಪಾಧ್ಯಕ್ಷೆ ಜಯಂತಿ ಪೂಜಾರಿ,ಸದಸ್ಯರಾದ ಸುಧಾ.ಎ.ಪೂಜಾರಿ,ಮಣೂರು ಶಿವರಾಮ್ ಶೆಟ್ಟಿ, ಭುಜಂಗ ಗುರಿಕಾರ,ಶೇಖರ್ ಗಿಳಿಯಾರು,ಜಯರಾಮ್ ಶೆಟ್ಟಿ, ಪಾಂಡು ಪೂಜಾರಿ,ಶಾರದ ಆರ್ ಕಾಂಚನ್,ಗುಲಾಬಿ, ಪಂಚಾಯ್ ಲೆಕ್ಕಾಸಹಾಯಕ ಅಧಿಕಾರಿ ಪೂರ್ಣಿಮಾ ಅಧಿಕಾರಿ,ಸಂಯುಕ್ತ ಪ್ರೌಢಶಾಲಾ ಮುಖ್ಯ ಶಿಕ್ಷಕ ನಿರಂಜನ್ ನಾಯಕ್,ಶಿಕ್ಷಕರಾದ ರಾಮದಾಸ ನಾಯಕ್,ಪಂಚಾಯತ್ ಕಾರ್ಯದರ್ಶಿ ಶೇಖರ್ ಮರವಂತೆ ,ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಜಯಂತಿ,ಗೀತಾನಂದ ಸಮಾಜ ಕಾರ್ಯವಿಭಾಗದ ರವಿಕಿರಣ್ ಕೋಟ, ಮತ್ತಿತರರು ಉಪಸ್ಥಿತರಿದ್ದರು.