ಕುಂದಾಪುರ ಮಿರರ್ ಸುದ್ದಿ…
ಕೋಟ: ಇಲ್ಲಿನ ಕೊಮೆ ಕೊರವಡಿ ಶ್ರೀ ಪಟ್ಟಾಭಿರಾಮಚಂದ್ರ ಮಂದಿರದ ಸುವರ್ಣ ಸಂಭ್ರಮ, ನೂತನ ಶಿಲಾಮಯ ದೇಗುಲ, ಶ್ರೀರಾಮಮೂರ್ತಿ ಸ್ಥಾಪನೆ, ಬ್ರಹ್ಮಕುಂಭಾಭಿಷೇಕ,ಕೋಟಿ ಶ್ರೀರಾಮತಾರಕ ಲೇಖನ ಯಜ್ಞ , ಮಹಾಅನ್ನಸಂತರ್ಪಣೆ , ಶ್ರೀರಾಮ ಸಮುದಾಯ ಭವನ ಲೋಕಾರ್ಪಣೆ ಮಾ.21 ರಿಂದ 30ತನಕ ಜರಗಲಿದ್ದು ಆ ಪ್ರಯುಕ್ತ ಶ್ರೀರಾಮನ ವಿಗ್ರಹ, ಪ್ರಭಾವಳಿ, ಬೆಳ್ಳಿ ನಗರ ಭಜನಾ ಮಂಟಪ ಪುರಮೆರವಣಿಗೆ ಅದ್ಧೂರಿಯಾಗಿ ಜರಗಿತು.
ತೆಕ್ಕಟ್ಟೆ ಮಹಾಲಿಂಗೇಶ್ವರ ದೇವಸ್ಥಾನದಿಂದ ಹೊರಟ ಪುರಮೆರವಣಿಗೆ ಕೊಮೆ ಕೊರವಡಿ ನವೀಕೃತ ಶ್ರೀ ರಾಮದೇಗಲದವರೆಗೆ ವೈಭವಪೂರಿತವಾಗಿ ಸಾಗಿತು.
ಇದೇ ಮೊದಲ ಬಾರಿಗೆ ಕರಾವಳಿ ಭಾಗದಲ್ಲಿ ಶ್ರೀರಾಮ ಮಂದಿರದ ಪರಮೆರವಣಿ ಅದ್ಧೂರಿಯಾಗಿ ಜನಮನಸೂರ್ಯಗೊಳಿಸಿತು.
ಮೆರವಣಿಗೆಯಲ್ಲಿ ವಿವಿಧ ಬಗೆಯ ವೇಷಗಳು ಗಮನ ಸೆಳೆಯಿತು. ಪುಟಾಣಿ ಭಜಕರಿಂದ ಹಿಡಿದು ಮಹಿಳೆಯರು, ಪುರುಷ ಭಜಕರು ತಾಳ ಹಿಡಿದು ನರ್ತಿಸಿದರು. ಚಂಡೆ ವಾದನ, ತಟ್ಟಿರಾಯ, ವಿವಿಧ ವೇಷಗಳಾದ ಯಕ್ಷಗಾನ,ಹನುಮ ಪಾತ್ರದಾರಿ, ಹುಲಿವೇಷ ವಿಶೇಷವಾಗಿ ಗಮನ ಸೆಳೆಯಿತು. ದಾರಿಯೂದ್ದಕ್ಕೂ ಕೇಸರಿ ವಸ್ತ್ರದಾರಿಗಳು, ಭಗವತ್ ಧ್ವಜ ರಾರಾಜಿಸಿದವು. ಈ ಸಂದರ್ಭದಲ್ಲಿ ಮಂದಿರದ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಆನಂದ್ ಸಿ ಕುಂದರ್, ಅಧ್ಯಕ್ಷ ವಿಠ್ಠಲ್ ಅನಂತ ಪೈ ಸಾಲಿಗ್ರಾಮ, ದೇಗುಲದ ಅಧ್ಯಕ್ಷ ಕೆ.ಚಂದ್ರ ಕಾಂಚನ್, ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ರಾಜು ಪೂಜಾರಿ, ಉಮೇಶ್ ಮೆಂಡನ್, ಧಾರ್ಮಿಕ ಮುಖಂಡರಾದ ಮಲ್ಯಾಡಿ ಶಿವರಾಮ ಶೆಟ್ಟಿ, ಟಿ.ಗಣಪತಿ ಶ್ರೀಯಾನ್, ತೆಕ್ಕಟ್ಟೆ ಗ್ರಾ.ಪಂ ಅಧ್ಯಕ್ಷೆ ಮಮತಾ ದೇವಾಡಿಗ, ಉಪಾಧ್ಯಕ್ಷರಾದ ಸಂಜೀವ ದೇವಾಡಿಗ, ಸದಸ್ಯರಾದ ಶೇಖರ್ ಕಾಂಚನ್, ವಿಜಯ ಭಂಢಾರಿ, ಗೋಪಾಲ ಕಾಂಚನ್, ವಿನೋದ ದೇವಾಡಿಗ, ಕಮಲ ಪೂಜಾರ್ತಿ, ಪ್ರೇಮಾ, ಕೊಮೆ ಸೊಸೈಟಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಗೋಪಾಲ ಪೂಜಾರಿ, ಹಿಂದೂ ಮುಖಂಡರಾದ ಶ್ರೀನಾಥ್ ಶೆಟ್ಟಿ, ಪ್ರಶಾಂತ್ ಮಡಪಾಡಿ, ಮಂದಿರದ ಸಮಿತಿ ಪದಾಧಿಕಾರಿಗಳು, ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳು, ಸ್ಥಳೀಯ ಸಂಘಸಂಸ್ಥೆಗಳ ಪದಾಧಿಕಾರಿಗಳು, ಕೊಮೆ, ಕೊರವಡಿ ಗ್ರಾಮಸ್ಥರು ಭಾಗಿಯಾದರು.