ಕುಂದಾಪುರ ಮಿರರ್ ಸುದ್ದಿ…
ಕೋಟ: ಇಲ್ಲಿನ ಹರ್ತಟ್ಟು ಕಲ್ಲಟ್ಟು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಇದರ ನೂತನ ಸುತ್ತು ಪೌಳಿ ಲೋಕಾರ್ಪಣೆ, ಅಷ್ಠಬಂಧ ಪುನರ್ ಪ್ರತಿಷ್ಠೆ ಬ್ರಹ್ಮಕಲಶೋತ್ಸವ ಕಾರ್ಯಕ್ರಮ 22 ರಿಂದ24ರ ತನಕ ನಡೆಯಲಿದ್ದು ಆ ಪ್ರಯುಕ್ತ ಹೊರೆಕಾಣಿಕೆ ಸಮರ್ಪಣೆ, ನಂದಿ ವಿಗ್ರಹ ಮೆರವಣಿಗೆ ಅದ್ಧೂರಿಯಾಗಿ ಜರಗಿತು.
ಕೋಟ ಮಹಾತೋಭಾರ ಶ್ರೀ ಹಿರೇಮಹಾಲಿಂಗೇಶ್ಚರ ದೇವಳದಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ಸಂಚರಿಸಿ ವೈಭಪೂರಿತ ಮೆರವಣಿಗೆ ಶ್ರೀ ದೇವಳವನ್ನು ತಲುಪಿತು.
ಮೆರವಣಿಗೆಯಲ್ಲಿ ಕೀಲು ಕುದುರೆ, ತಟ್ಟಿರಾಯ, ಚಂಡೆವಾದನ, ವಾದ್ಯಘೋಷಗಳು, ಕಳಶ ಹಿಡಿದ ಮಹಿಳಾ ಭಕ್ತಾಧಿಗಳು ವಿಶೇಷವಾಗಿ ಗಮನ ಸೆಳೆಯಿತು. ಸ್ಥಳೀಯ ಗ್ರಾಮಸ್ಥರಿಂದ ಹೊರೆಕಾಣಿಕೆ ಶ್ರೀದೇವಳಕ್ಕೆ ಅರ್ಪಿಸಲಾಯಿತು. ದೇವಳದ ಗೌರವಾಧ್ಯಕ್ಷ ಆನಂದ್ ಸಿ ಕುಂದರ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುರೇಶ್ ಗಾಣಿಗ, ಕಾರ್ಯದರ್ಶಿ ಹರೀಷ್ ದೇವಾಡಿಗ, ಕೋಶಾಧಿಕಾರಿ ಶ್ರೀಕಾಂತ್ ಶೆಣೈ, ಸಮಿತಿಯ ಪ್ರಮುಖರಾದ ಸಿದ್ಧ ದೇವಾಡಿಗ, ಚಂದ್ರ ಹಾಡಿಕೆರೆ, ತಿಮ್ಮ ಕಾಂಚನ್, ಆದರ್ಶ ಶೆಟ್ಟಿ, ಶೇಖರ್ ದೇವಾಡಿಗ, ನಾಗರಾಜ್ ಗಾಣಿಗ, ಸಂತೋಷ್ ಪೂಜಾರಿ, ಕೀರ್ತಿಶ್ ಪೂಜಾರಿ, ಕೋಟ ಗ್ರಾಮಪಂಚಾಯತ್ ಅಧ್ಯಕ್ಷ ಅಜಿತ್ ದೇವಾಡಿಗ, ಸದಸ್ಯರಾದ ಪಾಂಡು ಪೂಜಾರಿ, ದೇವಳದ ಅರ್ಚಕ ಸುಧೀರ್ ಐತಾಳ್ ಭಾಗಿಯಾದರು.
ಮಂಗಳಾದ ಧಾರ್ಮಿಕ ವಿಧಿವಿಧಾನ
ಮಂಗಳವಾರ ಶ್ರೀ ದೇವಳದಲ್ಲಿ ವೇ.ಮೂ.ಸುಧೀರ್ ಐತಾಳ್ ನೇತ್ರತ್ವದಲ್ಲಿ ಮಣಿಕಲ್ ಮಂಜುನಾಥ ಉಡುಪ ಸಂಯೋಜನೆಯೊಂದಿಗೆ ಸಹಸ್ರ ಸಂಕೇತನಾಮ, ಅಹಿತ ಸಂಕೇತನಾಮ, ಚಕ್ರಾಬ್ಧ ಪೂಜೆ, ದ್ವಾದಶ ಪೂಜೆ ಆರಾಧನೆ ನಡೆಯಿತು.
ಪೂಜಾ ಕಾರ್ಯದಲ್ಲಿ ದೇವಳದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ.ಸುರೇಶ್ ಗಾಣಿಗ ದಂಪತಿಗಳು ಭಾಗಿಯಾಗಿಯಾದರು.