ಕೋಟತಟ್ಟು – ಪಡುಕರೆ ಶ್ರೀ ಶಿರಸಿ ಮಾರಿಕಾಂಬಾ ದೇವಸ್ಥಾನ ವಾರ್ಷಿಕ ವರ್ಧಂತ್ಯುತ್ಸವ, ಬ್ರಹ್ಮಕಲಶಾಭಿಷೇಕ ಸಂಪನ್ನ

0
257

ಕುಂದಾಪುರ ಮಿರರ್ ಸುದ್ದಿ…

ಕೋಟ: ಶ್ರೀ ಶಿರಸಿ ಮಾರಿಕಾಂಬಾ ದೇವಸ್ಥಾನ ಕೋಟತಟ್ಟು – ಪಡುಕರೆ ಇಲ್ಲಿ ಗುರುವಾರ ಶ್ರೀ ದೇವಿಯ ದಿವ್ಯ ಸನ್ನಿಧಿಯಲ್ಲಿ ವಾರ್ಷಿಕ ವರ್ಧಂತ್ಯುತ್ಸವ, ಬ್ರಹ್ಮಕಲಶಾಬಿಷೇಕ ಕಾರ್ಯಕ್ರಮಗಳು ವೇ.ಮೂರ್ತಿ ಮಧುಸೂಧನ ಬಾಯರಿ ನೇತ್ರತ್ವದಲ್ಲಿ ನಡೆಯಿತು.

ದೇವಳದಲ್ಲಿ ವಿವಿಧ ದೇವರುಗಳ ದರ್ಶನ ಸೇವೆ, ಪೂಜಾ ಕಾರ್ಯಗಳು, ಪ್ರಸಾದ ವಿತರಣೆ ನೆರವೆರಿತು.

Click Here

ಧಾರ್ಮಿಕ ವಿಧಿವಿಧಾನದಲ್ಲಿ ಕೋಟ ರಾಜೇಂದ್ರ ಅಡಿಗ ಭಾಗಿಯಾದರು.

ದೇವಳದ ಆಡಳಿತ ಮಂಡಳಿ ಗೌರವಾಧ್ಯಕ್ಷ ಆನಂದ್ ಸಿ ಕುಂದರ್, ಅಧ್ಯಕ್ಷ ಬಸವ ಕುಂದರ್, ಪ್ರಧಾನ ಕಾರ್ಯದರ್ಶಿ ರಮೇಶ್ ಪೂಜಾರಿ, ಕೋಶಾಧಿಕಾರಿ ಶಿವಮೂರ್ತಿ ಉಪಾಧ್ಯ, ಉಪಾಧ್ಯಕ್ಷರಾದ ಕೃಷ್ಣ ಪುತ್ರನ್, ಯೋಗೇಂದ್ರ ತಿಂಗಳಾಯ, ಜತೆಕಾರ್ಯದರ್ಶಿ ಮಂಜುನಾಥ ನಾಯ್ಕ್, ಗೌರವ ಸಲಹೆಗಾರರಾದ ಸಂಜೀವ ಆರ್ ಕುಂದರ್, ಚಂದ್ರ ಪುತ್ರನ್, ಉದಯ್ ತಿಂಗಳಾಯ, ಅಶೋಕ್ ಪೂಜಾರಿ, ನಾಗಪ್ಪ ಪೂಜಾರಿ, ಬಾಬು ಪೂಜಾರಿ, ದೇವಳದ ಅರ್ಚಕರಾದ ನೆಂದಪ್ಪ ಪೂಜಾರಿ, ಪಾತ್ರಿಗಳಾದ ಸಂಜೀವ ಪೂಜಾರಿ,ನಂದಿ ಪೂಜಾರಿ, ಚಂದ್ರ ಮೆಂಡನ್ ಅಣ್ಣಪ್ಪ ತಿಂಗಳಾಯ, ರಾಜೇಂದ್ರ , ವಿಠ್ಠಲ ಪೂಜಾರಿ, ಸಿದ್ಧಿ ಶ್ರೀನಿವಾಸ ಪೂಜಾರಿ, ಸುಧಾಕರ್ ಮತ್ತಿತರರು ಉಪಸ್ಥಿತರಿದ್ದರು.

ಸಕಲ ವೈದಿಕ, ಧಾರ್ಮಿಕ, ಪೂಜಾ ಕಾರ್ಯಕ್ರಮದ ನಂತರ ಮಹಾ ಅನ್ನಸಂತರ್ಪಣೆ ಕಾರ್ಯಕ್ರಮ ನೆರವೆರಿತು. ಸಾಂಸ್ಕೃತಿಕ ಕಾರ್ಯಕ್ರಮಗಳ ಭಾಗವಾಗಿ ರಾತ್ರಿ 8.30 ಕುಂದಗನ್ನಡದ ಚೇತನ್ ನೈಲಾಡಿಯವರ ಹೆಂಗ್ಸರ್ ಪಂಚಾಯ್ತಿ ನಮ್ಮಂತಕೆ ರಾತ್ರಿಮ9.30.ಸಾಂಸ್ಕ್ರತಿಕ ಸಂಜೆ ಹಾಡು ನೃತ್ಯ, ಭಾವ ಬಣ್ಣಗಳ ತಿಲ್ಲಾನ ಜರಗಿತು.

LEAVE A REPLY

Please enter your comment!
Please enter your name here