ಕೋಟತಟ್ಟು ಕಲ್ಮಾಡಿ ಅಂಗನವಾಡಿ ಕೇಂದ್ರದಲ್ಲಿ ಪೋಷಣೆ ಮಾಸಾಚರಣೆಯ ಪ್ರಯುಕ್ತ ಮಾತೃ ವಂದನಾ ಸಪ್ತಾಹ ಹಾಗೂ ಪೌಷ್ಟಿಕ ಆಹಾರ ಸಪ್ತಾಹ ಕಾರ್ಯಕ್ರಮ

0
827

ಕುಂದಾಪುರ ಮಿರರ್ ಸುದ್ದಿ…
ಕೋಟ:
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಡುಪಿ, ಶಿಶು ಅಭಿವೃದ್ಧಿ ಯೋಜನೆ ಬ್ರಹ್ಮಾವರ, ಸಮುದಾಯ ಆರೋಗ್ಯ ಕೇಂದ್ರ ಕೋಟ,ಹಾಗೂ ಅಂಗನವಾಡಿ ಕೇಂದ್ರ ಕೋಟ ಕಲ್ಮಾಡಿ ಇವರ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಪೋಷಣೆ ಮಾಸಾಚರಣೆಯ ಪ್ರಯುಕ್ತ ಮಾತೃ ವಂದನಾ ಸಪ್ತಾಹ ಹಾಗೂ ಪೌಷ್ಟಿಕ ಆಹಾರ ಸಪ್ತಾಹ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇದರಲ್ಲಿ ಪೌಷ್ಠಿಕ ಆಹಾರ ಪ್ರದರ್ಶನ ಹಾಗೂ ಪ್ರಾತ್ಯಕ್ಷಿಕೆ ಮತ್ತು ದಿನದ ವಿಶೇಷವಾಗಿ ಕೋವಿಡ್ ಲಸಿಕ ಮಾಹಿತಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು.


ಕಾರ್ಯಕ್ರಮವನ್ನು ಕೋಟ ಅಮೃತೇಶ್ವರಿ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಎಂ. ಸುಬ್ರಾಯ ಆಚಾರ್ ಉದ್ಘಾಟಿಸಿ ಮಾತನಾಡಿ ಸೊಪ್ಪು ತರಕಾರಿಗಳ ಪ್ರದರ್ಶನ ಹಾಗು ಪೌಷ್ಟಿಕ ಆಹಾರ ಮೇಳ ಅತ್ಯುತ್ತಮವಾದ ಕಾರ್ಯಕ್ರಮವಾಗಿದೆ. ಇದರ ಪ್ರಯೋಜನವನ್ನು ಸ್ಥಳೀಯರು ಪಡೆದುಕೊಂಡಲ್ಲಿ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯವಾಗುತ್ತದೆ ಹಾಗೂ ಕಾರ್ಯಕ್ರಮದಲ್ಲಿ ಪ್ರದರ್ಶಿಸಿದ ಅತೀ ಅಪರೂಪದ ಸೊಪ್ಪುಗಳು ತನ್ನ ಬಾಲ್ಯದ ನೆನಪನ್ನು ನೆನಪಿಸಿದೆ ಎಂದರು.

Click Here

ಕೋವಿಡ್ ಲಸಿಕೆಯ ಬಗ್ಗೆ ಕೋಟ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ವಿಶ್ವನಾಥ್ ಮಾತನಾಡಿ ಕೋಟತಟ್ಟು ಗ್ರಾಮ 90 ಶೇಕಡಾ ಲಸಿಕೆಯನ್ನು ಮುಗಿಸಿದೇ. 100 ಶೇಕಡ ಲಸಿಕಾಕರಣ ವನ್ನು ಸಾಧಿಸಲು ತಮ್ಮೆಲ್ಲರ ಪಾತ್ರ ಮುಖ್ಯ ಎಂದರು. ಪೋಷಣಾ ಮಾಸಾಚರಣೆ ಹಾಗೂ ಪೌಷ್ಟಿಕ ಆಹಾರ ಮತ್ತು ಮಾತೃ ವಂದನಾ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದ ಶಿಶು ಅಭಿವೃದ್ಧಿ ಯೋಜನೆಯ ಅಂಗನವಾಡಿ ಮೇಲ್ವಿಚಾರಕಿ ಮೀನಾಕ್ಷಿ ಒದಗಿಸಿದರು.

ಸಭೆಯ ಅಧ್ಯಕ್ಷತೆಯನ್ನು ಕೋಟತಟ್ಟು ಪಂಚಾಯತ್ ಸದಸ್ಯೆ ಸರಸ್ವತಿ ವಹಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಅತೀ ಉತ್ತಮವಾದ ಪೌಷ್ಠಿಕ ಆಹಾರದ ತಯಾರಿಕೆಗೆ ಬಹುಮಾನವನ್ನು ನೀಡಲಾಯಿತು. ಗರ್ಭಿಣಿಯೋರ್ವ ರಿಂದ ಮಾತ್ರವಂದನ ಅರ್ಜಿಯನ್ನು ಸ್ವೀಕರಿಸಲಾಯಿತು ನಂತರ ಪೆÇೀಷಣ ಮಾಸಾಚರಣೆ ಜಾಥಾ ನಡೆಯಿತು.

ಅಂಗನವಾಡಿ ಕೇಂದ್ರದ ಮಕ್ಕಳು ಪೌಷ್ಠಿಕ ಆಹಾರದ ಮಾಹಿತಿ ನೀಡಿದ್ದು ಕಾರ್ಯಕ್ರಮದ ವಿಶೇಷವಾಗಿತ್ತು.

ಮುಖ್ಯ ಅತಿಥಿಗಳಾಗಿ ಬಾಲ ವಿಕಾಸ ಸಮಿತಿಯ ಅಧ್ಯಕ್ಷೆ ವನಜ, ಕೋಟ ಸಮುದಾಯ ಆರೋಗ್ಯ ಕೇಂದ್ರದ ಹರಿಶಂದ್ರ ನಾಯಕ್, ಆಶಾ ಕಾರ್ಯಕರ್ತೆ ಮಲ್ಲಿಕಾ ,ಪೂರ್ಣಿಮಾ ,ಅಂಗನವಾಡಿ ಸಹಾಯಕಿ ಶೈಲಜಾ ಉಪಸ್ಥಿತರಿದ್ದರು. ಅಂಗನವಾಡಿ ಕಾರ್ಯಕರ್ತೆ ಜಯಲಕ್ಷ್ಮೀ ಕಾರ್ಯಕ್ರಮವನ್ನು ನಿರೂಪಿಸಿ ನಿರ್ವಹಿಸಿದರು.

LEAVE A REPLY

Please enter your comment!
Please enter your name here