ಕೊಲ್ಲೂರು :ಖಾಸಗೀ ಬಸ್ ಅಪಘಾತ : ಒರ್ವ ಸಾವು, ಎಂಟು ಜನ ಗಂಭೀರ

0
478

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಖಾಸಗೀ ಬಸ್ಸೊಂದು ನಿಯಂತ್ರಣ ತಪ್ಪಿ ಚರಂಡಿಗೆ ಪಲ್ಟಿಯಾಗಿ ಬಿದ್ದ ಪರಿಣಾಮ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದವರ ಪೈಕಿ ಒಬ್ಬ ಸಾವನ್ನಪ್ಪಿ ಎಂಟು ಜನ ಗಂಭೀರ ಗಾಯಗೊಂಡ ಘಟನೆ ಕೊಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೊಲ್ಲೂರು ಹಾಲ್ಕಲ್ ಜಂಕ್ಷನ್ ಇಳಿಜಾರಿನ ಬಳಿ ಬುಧವಾರ ಮುಂಜಾನೆ ನಡೆದಿದೆ. ದುರ್ಘಟನೆಯಲ್ಲಿ ಸಾವನ್ನಪ್ಪಿದ ಪ್ರಯಾಣಿಕನನ್ನು ಗದಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಶಿರಹಟ್ಟಿ ನಿವಾಸಿ ರುದ್ರಪ್ಪ ಎಂಬುವರ ಪುತ್ರ ಬಸವರಾಜ್(22) ಎಂದು ಗುರುತಿಸಲಾಗಿದೆ. ಗಂಭಿರ ಗಾಯಗೊಂಡವರನ್ನು ಬಸ್ಸಿನಲ್ಲಿದ್ದ ರಂಗಪ್ಪ, ಗೀರೀಶ್, ಮನೋಜ್ ಕುಮಾರ್, ಮಲ್ಲೇಶ್, ದೇವೇಂದ್ರ, ಹಾಲಸ್ವಾಮಿ, ಗುರುನಾಥ, ಮಾಸ್ಟರ್ ಅಭಿಜಿತ್ ಎಂದು ಗುರುತಿಸಲಾಗಿದೆ.

Click Here

Click Here

ಸುಮಾರು 35ರಿಂದ 40 ಜನರು ಇದ್ದ ದುರ್ಗಾಂಬಾ ಬಸ್ ಚಳ್ಳಕೆರೆಯಿಂದ ಮಂಗಳೂರಿಗೆ ಪ್ರಯಾಣಿಸುತ್ತಿತ್ತು. ಬುಧವಾರ ಬೆಳಿಗ್ಗೆ ನಸುಕಿನಲ್ಲಿ ಸುಮಾರು 2.30 ಗಂಟೆಗೆ ಕೊಲ್ಲೂರು ಹಾಲ್ಕಲ್ ಜಂಕ್ಷನ್ ಇಳಿಜಾರಿನ ಬಳಿ ಬಸ್ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದಿದೆ. ಗಂಭೀರ ಗಾಯಗೊಂಡಿದ್ದ ಬಸವರಾಜ್ ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿಯಲ್ಲಿ ಮೃತಪಟ್ಟಿದ್ದು, ಮೃತ ದೇಹವನ್ನು ಕುಂದಾಪುರ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿಡಲಾಗಿದೆ.

ಗಂಭೀರ ಗಾಯಗೊಂಡವರನ್ನು ಕುಂದಾಪುರದ ಸರ್ಕಾರಿ ಆಸ್ಪತ್ರೆ, ಆದರ್ಶ ಆಸ್ಪತ್ರೆ ಹಾಗೂ ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Click Here

LEAVE A REPLY

Please enter your comment!
Please enter your name here