ಕುಂದಾಪುರ ಮಿರರ್ ಸುದ್ದಿ…
ಕೋಟ: ಶ್ರೀ ಶಾಂತಿಮತೀ ಪ್ರತಿಷ್ಠಾನದ ಸಾಧಕರೆಡೆ ನಮ್ಮನಡೆ ತಿಂಗಳ ಕಾರ್ಯಕ್ರಮ ಕೋಡಿ ಕನ್ಯಾಣದಲ್ಲಿ ಮಾ.28ರಂದು ನಡೆಯಿತು.
ತಿರುಮಲ ತಿರುಪತಿ ದಾಸ ಸಾಹಿತ್ಯ ಪ್ರೊಜೆಕ್ಟ್ ನ ಭಜನಾ ತರಬೇತುದಾರರಾದ ಇವರು ಸುಮಾರು 25 ಕ್ಕೂ ಹೆಚ್ಚು ತಂಡಗಳಿಗೆ ಭಜನೆ ತರಬೇತಿಯನ್ನು ನೀಡುತ್ತಿದ್ದು ಭಾರತೀಯ ಸಂಪ್ರದಾಯ ಮತ್ತು ಸಂಸ್ಕೃತಿಯ ರಕ್ಷಣೆ ಹಾಗೂ ಪ್ರಸಾರದಲ್ಲಿ ನಿಸ್ವಾರ್ಥವಾಗಿ ಸೇವೆಯನ್ನು ಸಲ್ಲಿಸುತ್ತಿರುವ ಹಿನ್ನಲ್ಲೆಯಲ್ಲಿ ಶಾಂತೀಮತಿ ಪ್ರತಿಷ್ಠಾನದ ಮಾರ್ಚ್ ತಿಂಗಳ ಸಾಧಕಿಯಾಗಿ ವೀಣಾ ಪ್ರಸನ್ನ ಶಾನುಭೋಗ್ ಇವರನ್ನು ಗೌರವಿಸಲಾಯಿತು.
ಹೊಟೇಲ್ ಶಿವಳ್ಳಿ ವೆಜ್‍ನ ಮಾಲಿಕರಾದ ಗಣೇಶ ಅಡಿಗ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಪ್ರಸನ್ನಾ ಶಾನುಬೋಗ್ ವಿಷ್ಣುಮಂಗಲ, ಪ್ರತಿಷ್ಠಾನದ ಮಾಜಿ ಅಧ್ಯಕ್ಷ ದಯಾನಂದ ವಾರಂಬಳ್ಳಿ, ವನಿತಾ ಉಪಾಧ್ಯಾಯ ಹಾಗೂ ವೀಣಾ ಪ್ರಸನ್ನ ಶಾನುಭೋಗ್ ಇವರ ಅಭಿಮಾನಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ವಿದ್ವಾನ್ ಡಾ| ವಿಜಯ ಮಂಜರ್ ಸ್ವಾಗತಿಸಿ ಪ್ರಸ್ತಾವನೆಗೈದರು. ಲಕ್ಷ್ಮೀ ಭಟ್ ಪ್ರಾರ್ಥಿಸಿ, ರಾಮಚಂದ್ರ ಉಡುಪ ಕಾರ್ಯಕ್ರಮ ನಿರೂಪಿಸಿದರು. ಪ್ರತಿಷ್ಠಾನದ ಅಧ್ಯಕ್ಷ ಸಚ್ಚಿದಾನಂದ ಅಡಿಗ ಧನ್ಯವಾದಗೈದರು.