ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ವಾರಾಹಿ ನೀರಾವರಿ ಯೋಜನೆಯ ಮೂಲ ಉದ್ದೇಶದಂತೆ ಪ್ರತಿಯೊಬ್ಬ ರೈತರಿಗೆ ವಾರಾಹಿ ನೀರು ಸಿಗುವ ತನಕ ಹೋರಾಟ ಮಾಡುತ್ತೇನೆ. ತನ್ನ ಹೋರಾಟ ಹತ್ತಿಕ್ಕಲೂ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ. ಈ ಹೋರಾಟದಲ್ಲಿ ತನ್ನ ಬಲಿದಾನವಾದರೂ ಚಿಂತೆ ಇಲ್ಲ ಎಂದು ಉಡುಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಕೆ. ಪ್ರತಾಪಚಂದ್ರ ಶೆಟ್ಟಿ ಹೇಳಿದರು.
ಅವರು ಉಡುಪಿ ಜಿಲ್ಲಾ ರೈತ ಸಂಘದ ನೇತ್ರತ್ವದಲ್ಲಿ ಅಂಪಾರು ಶ್ರೀ ರಾಮ ಸಭಾಭವನದಲ್ಲಿ ನಡೆದ ವಾರಾಹಿ ಬಲದಂಡೆ ನೀರಾವರಿ ಯೋಜನೆ ಅಚ್ಚುಕಟ್ಟು ಪ್ರದೇಶದ ರೈತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ವಾರಾಹಿ ನೀರಾವರಿ ಯೋಜನೆ ಆರಂಭವಾಗಿ 41 ವರ್ಷ ಕಳೆದರೂ ಕೂಡಾ ಅದು ಚುರುಕು ಪಡೆದುಕೊಂಡಿದ್ದು 2000ನೇ ಇಸವಿಯ ಅನಂತರ. ಕೇವಲ ರೈತರಿಗೆ ನೀರು ಕೊಡುವ ಉದ್ದೇಶದಿಂದ ಈ ಯೋಜನೆ ಇಂದು ಬೇರೆ ಉದ್ದೇಶಕ್ಕೆ ಬಳಕೆಯಾಗುತ್ತಿರುದು ವಿಪರ್ಯಾಸವಾಗಿದೆ. ಮೂಲ ಯೋಜನೆಯಲ್ಲಿರುವ ಬಲ ದಂಡೆ ಕಾಮಗಾರಿ ಆರಂಭವಾಗಿಲ್ಲ. ಆದರೆ ಸೌಕೂರು ಏತನೀರಾವರಿ ಕಾಮಗಾರಿ ಆರಂಭಗೊಂಡಿದೆ. ಬಲದಂಡೆ ಕಾಮಗಾರಿ ಕೂಡಲೇ ಆರಂಭಗೊಂಡು, ಮೂಲ ಯೋಜನೆಯಲ್ಲಿರುವ ಪ್ರತೀ ಫಲಾನುಭವಿಗಳಿಗೂ ನೀರು ಸಿಗಬೇಕು. ಭವಿಷ್ಯದಲ್ಲಿ ರೈತರಿಗೆ ವಾರಾಹಿ ನಾಲೆಯಿಂದ ಬರುವ ನೀರು ಮಾತ್ರ ಆಸರೆಯಾಗಲಿದೆ ಎಂದು ಹೇಳಿದರು.
ಮುಂದಿನ ವರ್ಷಗಳಲ್ಲಿ ರೈತರ ನೀರಾವರಿ ಪಂಪ್ ಸೆಟ್‍ಗಳಿ ಬಿಲ್ ಪಾವತಿಸುವ ಸಂದರ್ಭ ಬರುತ್ತದೆ. ಆಗ ವಿದ್ಯುತ್ ಬಿಲ್ ಪಾವತಿಸುದು ಕಷ್ಟ ಹಾಗೂ ಬಿಲ್ ಪಾವತಿ ಕೃಷಿ ಮಾಡಿದರೂ ನಿರೀಕ್ಷಿತ ಲಾಭ ಅಸಾಧ್ಯ. ಅಂತಹ ಸಂದರ್ಭದಲ್ಲಿ ನಾಲೆಯ ಮೂಲಕ ಹರಿದು ಬರುವ ವಾರಾಹಿ ನೀರು ರೈತರನ್ನು ರಕ್ಷಿಸಲಿದೆ. ಮುಂದಿನ ಜನಾಂಗ ನಮ್ಮನ್ನು ಜರಿಯಬಾರದು. ಚುನಾಯಿತ ಪ್ರತಿನಿ„ಗಳಾದ ನಾವು ನಮ್ಮ ಜವಬ್ದಾರಿ, ಕರ್ತವ್ಯಗಳನ್ನು ಮರೆಯಬಾರದು. ಇಲ್ಲಿ ಸಂಸದರು, ಶಾಸಕರು, ಮಾಜಿ ಶಾಸಕರು ಎಲ್ಲರೂ ವಾರಾಹಿ ಬಲದಂಡೆ ಯೋಜನೆ ಕಾಮಗಾರಿ ಆರಂಭಕ್ಕೆ ಪ್ರಯತ್ನಿಸಬೇಕು. ಮುಖ್ಯಮಂತ್ರಿಗಳು ಈ ಬಗ್ಗೆ ಆಸಕ್ತಿ ವಹಿಸುತ್ತಾರೆ ಎನ್ನುವ ನಂಬಿಕೆ ಇದೆ ಎಂದರು.
ಉಡುಪಿಯಲ್ಲಿ ಐದು ನದಿಗಳು ಹರಿಯುತ್ತಿದ್ದರೂ, ವಾರಾಹಿ ನೀರನ್ನು ತಗೆದುಕೊಂಡು ಹೋಗಲಾಗುತ್ತಿದೆ. ಇದಕ್ಕೆ ನಮ್ಮ ಆಕ್ಷೇಪವಿಲ್ಲ. ಆದರೆ ಮೂಲ ಯೋಜನೆಗೆ ಹಿನ್ನೆಡೆಯಾಗಬಾರದು. ವಾರಾಹಿ ನದಿಯ ನೀರು ಯಾವ ಯಾವ ಸರ್ವೇ ನಂಬರ್‍ಗಳಲ್ಲಿ ವಾರಾಹಿ ಕಾಲುವೆ ಹೋಗುತ್ತದೆ ಎನ್ನುವ ಮಾಹಿತಿಯನ್ನು ಆಯಾಯ ಗ್ರಾ.ಪಂ.ಗಳಿಗೆ ತಕ್ಷಣ ಒದಗಿಸಿ ಎಂದು ವಾರಾಹಿ ಅ„ಕಾರಿಗಳಿಗೆ ಪ್ರತಾಪಚಂದ್ರ ಶೆಟ್ಟಿ ಅವರು ಸೂಚನೆ ನೀಡಿದರು.
ರೈತ ಸಂಘದ ಕಾರ್ಯದರ್ಶಿ ಸಂತೋಷಕುಮಾರ ಶೆಟ್ಟಿ ಬಲಾಡಿ ಮಾತನಾಡಿ, ಉಡುಪಿ ಜಿಲ್ಲಾ ರೈತ ಸಂಘದ ನೇತ್ರತ್ವದಲ್ಲಿ ವಾರಾಹಿ ನೀರಾವರಿ ಯೋಜನೆಗೆ ಸಂಬಂಧಪಟ್ಟಂತೆ ಇದು 5ನೇ ಸಭೆಯಾಗಿದೆ. ರೈತರಿಗೆ ಯೋಜನೆಯ ಬಗ್ಗೆ ಅರಿವು ಮೂಡಿದೆ. ರೈತರ ಸಂದೇಹಗಳು ಮತ್ತು ಆತಂಕಗಳ ಪರಹಾರಕ್ಕೆ ಉತ್ತಮ ವೇದಿಕೆಯಾಗಿದೆ ಎಂದರು. ಕೃಷಿಕ ದಿನಕರ ಶೆಟ್ಟಿ ಮುಂಬಾರು ಮಾತನಾಡಿ, ವಾರಾಹಿ ಬಲದಂಡೆ ಯೋಜನೆಗೆ ಹಿಂದೊಮ್ಮೆ ಸರ್ವೇ ಮಾಡಿ ಗುರುತು ಕಲ್ಲುಗಳನ್ನು ಹಾಕಿದ್ದರು. ಈಗ ವಿನ್ಯಾಸ ಬದಲಾವಣೆ ಎನ್ನಲಾಗುತ್ತಿದೆ. ಈಗ ಯಾವ ಮಾರ್ಗದಲ್ಲಿ ಹಾದು ಹೋಗುತ್ತದೆ ಎನ್ನುವ ಗೊಂದಲ ರೈತರಲ್ಲಿದೆ. ಬಲದಂಡೆ ಯೋಜನೆ ಕೂಡಲೇ ಅನುಷ್ಠಾನವಾಗದೇ ಇದ್ದರೆ ಮುಂದೆ ಉಚಿತ ವಿದ್ಯುತ್ ಸಿಗದೆ ರೈತರು ನೀರಿನ ಅಭಾವಕ್ಕೆ ಗುರಿಯಾಗುವ ಸಾಧ್ಯತೆ ಇದೆ. ಹಾಗಾಗಿ ಈ ಯೋಜನೆ ಕೂಡಲೇ ಕಾರ್ಯಗತಗೊಳ್ಳಬೇಕು ಎಂದರು. ಕಿರಣ್ ಹೆಗ್ಡೆ ಅಂಪಾರು ಮಾತನಾಡಿ, ಯೋಜನೆಯ ಮುಖ್ಯ ಕಾಲುವೆ ಪಥ ಬದಲಾವಣೆಯಿಂದ ಮೂಲ ಅಚ್ಚುಕಟ್ಟು ಪ್ರದೇಶದ ರೈತರಿಗೆ ಅನ್ಯಾಯವಾಗಬಾರದು. ಮುಂದೆ ಅದು ಗೊಂದಲಕ್ಕೆ ಕಾರಣವಾಗಬಾರದು. ಈ ಬಗ್ಗೆ ಅ„ಕಾರಿಗಳು ಮುತುವರ್ಜಿ ವಹಿಸಬೇಕು ಎಂದರು.
ನಾಲಾ ಪಥ ಪರಿಷ್ಕಾರ, ನೀರಿನ ಸೇತುವೆ ನಿರ್ಮಾಣ: ವಾರಾಹಿ ನೀರಾವರಿ ಅ„ಕಾರಿಗಳು ಸಭೆಗೆ ಮಾಹಿತಿ ನೀಡಿ, ಬಲದಂಡೆ ಯೋಜನೆ ಸುಮಾರು 1,900 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸಲಿದೆ. ಇದರ ಮೂಲ ನಾಲಾ ಪಥದಲ್ಲಿ ರಕ್ಷಿತಾರಣ್ಯ, ಡೀಮ್ಡ್ ಫಾರೆಸ್ಟ್, ಬೆಟ್ಟಗುಡ್ಡಗಳು ಇರುವುದರಿಂದ ಮುಖ್ಯನಾಲೆಯ ವಿನ್ಯಾಸದಲ್ಲಿ ಒಂದಿಷ್ಟು ಬಲದಲಾವಣೆಗಳನ್ನು ಮಾಡಿಕೊಳ್ಳಲಾಗಿದೆ. ಇದರಿಂದ ಮೂಲ ಅಚ್ಚುಕಟ್ಟು ಪ್ರದೇಶಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಪರಿಷ್ಕøತ ನಾಲಾ ಪಥದಲ್ಲಿ ನೀರಿನ ಸೇತುವೆಗಳ ವಿನ್ಯಾಸ ಅಳವಡಿಸಲಾಗಿದೆ. ಶಂಕರನಾರಯಣ-ಹಳ್ನಾಡು 9.5 ಕಿ.ಮೀ ಮುಖ್ಯ ಕಾಲುವೆಯಾಗಿದ್ದು, ಅಂಪಾರು ಸರ್ಕಲ್ ನಿಂದ ಉಪ ಕಾಲುವೆಗಳ ನಿರ್ಮಾಣ ಮಾಡಲಾಗುತ್ತದೆ. ಈಗಾಗಲೇ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿದೆ ಎಂದರು.
ವಾರಾಹಿ ನೀರಾವರಿ ನಿಗಮದ ಕಾರ್ಯಪಾಲಕ ಇಂಜಿನಿಯರ್ ಪ್ರವೀಣ್, ಸಹಾಯಕ ಇಂಜಿನಿಯರ್‍ಗಲಾದ ಪ್ರಸನ್ನಕುಮಾರ್, ಕಿರಣ್ ಅವರು ಸಭೆಗೆ ಮಾಹಿತಿ ಒದಗಿಸಿದರು.
ಇಂಜಿನಿಯರ್‍ಗಳಾದ ಪ್ರೀತಮ್, ಪ್ರಶಾಂತ್‍ಕುಮಾರ್, ಪ್ರಸನ್ನ ಕಾಮತ್, ಕೆ. ಆಶ್ರಫ್ ಉಪಸ್ಥಿತರಿದ್ದರು. ಉಡುಪಿ ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬಿ. ಸತೀಶ್ ಕಿಣಿ ಬೆಳ್ವೆ, ವಕ್ತಾರ ವಿಕಾಸ್ ಹೆಗ್ಡೆ, ಮುಖಂಡರಾದ ಪ್ರದೀಪ ಕುಮಾರ್ ಶೆಟ್ಟಿ ಗುಡಿಬೆಟ್ಟು, ಸದಾಶಿವ ಶೆಟ್ಟಿ ಶಂಕರನಾರಾಯಣ, ಶರತಚಂದ್ರ ಶೆಟ್ಟಿ, ಕೃಷ್ಣದೇವ ಕಾರಂತ ಕೋಣಿ, ಅಶೋಕ ಕುಮಾರ್ ಶೆಟ್ಟಿ ಚೋರಾಡಿ, ರಮೇಶ ಗಾಣಿಗ ಕೊಲ್ಲೂರು, ದೇವಾನಂದ ಶೆಟ್ಟಿ ಬಸ್ರೂರು, ರೋಹಿತ್‍ಕುಮಾರ ಶೆಟ್ಟಿ ಶಂಕರನಾರಾಯಣ, ವಿಜಯ ಪುತ್ರನ್, ಗಣಪಯ್ಯ ಶೆಟ್ಟಿ ಕುಪ್ಪುಗೋಡು ಮೊದಲಾದವರು ಉಪಸ್ಥಿತರಿದ್ದರು.