ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಸ್ನೇಹಿತರೊಂದಿಗೆ ಗುಡ್ ಪ್ರೈಡೇ ರಜೆಗೆ ಮಜಾ ಮಾಡಲು ಬಂದ ವಿದ್ಯಾರ್ಥಿಯೊಬ್ಬ ನೀರುಪಾಲಾಗಿ ನಾಪತ್ತೆಯಾದ ಘಟನೆ ಬೈಂದೂರು ತಾಲೂಕಿನ ಯಡ್ತರೆ ಗ್ರಾಮದ ಕೊಸಳ್ಳಿ ಪಾಲ್ಸ್ ನಲ್ಲಿ ಶುಕ್ರವಾರ ಸಂಜೆ ನಡೆದಿದೆ.
ಘಟನೆಯಲ್ಲಿ ನಾಪತ್ತೆಯಾದ ವಿದ್ಯಾರ್ಥಿಯನ್ನು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಎ.ಎಸ್.ಐ ಕುಮಾರ ಶೆಟ್ಟಿ ಎಂಬುವರ ಮಗ ಚಿರಾಂತ್ ಶೆಟ್ಟಿ(20) ಎಂದು ತಿಳಿದುಬಂದಿದೆ.
ಮಂಗಳೂರಿನ ಬಳ್ಳಾಲ್ ಭಾಗ್ ನ ಶ್ರೀ ದೇವಿ ಕಾಲೇಜ್ ನಲ್ಲಿ ಎರಡನೇ ವರ್ಷದ ಬಿಕಾಂ ಜೊತೆಗೆ ಏವಿಯೇಷನ್ ಕೊರ್ಸ ಕಲಿಯುತ್ತಿದ್ದ ಚಿರಾಂತ್ ಶೆಟ್ಟಿ ಪಿಜಿಯಲ್ಲಿ ಉಳಿದುಕೊಂಡಿದ್ದ.
ಗುಡ್ ಪ್ರೈಡೆ ರಜೆ ಕಳೆಯಲು ತನ್ನ ತರಗತಿಯ ಹಾಗೂ ಪಿಜಿಮೆಟ್ ಬೈಂದೂರಿನ ಕಿರ್ತನ್ ದೇವಾಡಿಗ (20), ಅಕ್ಷಯ್ ಆಚಾರಿ (20) ರವರ ಮನೆಗೆ ತನ್ನ ತರಗತಿಯವರಾದ ಆಲ್ವಿನ್, ಧರಣ್, ರೆಯಾನ್ ರವರೊಂದಿಗೆ ಬೈಂದೂರಿಗೆ ಗುರುವಾರ ರಾತ್ರಿ ಬಂದು ಅಕ್ಷಯ್ ಆಚಾರಿ ಮನೆಯಲ್ಲಿ ಉಳಿದುಕೊಂಡಿದ್ದರು. ಶುಕ್ರವಾರ ಮಧ್ಯಾಹ್ನ ಕೀರ್ತನ್ ದೇವಾಡಿಗನ ಮನೆಯಲ್ಲಿ ಊಟ ಮುಗಿಸಿ 3.30ರ ಸುಮಾರಿಗೆ ಬೈಕ್ ನಲ್ಲಿ ಕೊಸಳ್ಳಿ ಪಾಲ್ಸ್ ಗೆ ಹೋಗಿದ್ದರು. ಚಿರಾಂತ್ ಶೆಟ್ಟಿ ಹೊರತು ಪಡಿಸಿ ಉಳಿದವರಿಗೆ ಈಜು ಬರದೇ ಇರುವುದರಿಂದ ನೀರಿಗೆ ಇಳಿಯದೇ ದಡದಲ್ಲಿ ಕುಳಿತಿದ್ದರೆನ್ನಲಾಗಿದೆ.
ನೀರಿಗಿಳಿದ ಚಿರಾಂತ್ ಮುಳುಗಿ ನಾಪತ್ತೆಯಾಗಿದ್ದು, ಪೊಲೀಸರು, ಅಗ್ನಿಶಾಮಕದಳದ ಸಿಬ್ಬಂದಿ, ಸ್ಥಳೀಯರು ಹುಡುಕಾಟ ನಡೆಸಿದ್ದಾರೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.