ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಶತಮಾನಗಳ ಇತಿಹಾಸವಿರುವ ಕೆರಾಡಿಯ ವರಸಿದ್ದಿ ಶ್ರೀ ವಿನಾಯಕ ದೇವಸ್ಥಾನದ ಸನ್ನಿದಾನದಲ್ಲಿ ಲೋಕ ಕಲ್ಯಾಣಾರ್ಥ ಪ್ರತೀ ವರ್ಷದಂತೆ ನಡೆಯುವ ವರ್ಧಂತ್ಯೋತ್ಸವ, 1108 ಕಾಯಿಗಳ ಸಹಸ್ರ ನಾಳಿಕೇರ, ಮಹಾಗಣಪತಿ ಯಾಗ ಕಾರ್ಯಕ್ರಮವು ಎ.9 ಭಾನುವಾರದಂದು ವಿಜೃಂಭಣೆಯಿಂದ ನಡೆಯಿತು.
ಬೆಳಗ್ಗೆ 6ರಿಂದ ಶ್ರೀ ಗುರು ಗಣಪತಿ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹವಾಚನ, ಋತ್ವಿಕಾ ವರ್ಣ, ಶಾಂತಿ ಹೋಮ, ಪ್ರಾಯಶ್ಚಿತ್ತ ಹೋಮ, ಬ್ರಹ್ಮ ಕಲಶಾಭಿಷೇಕ ಹಾಗೂ ಅಷ್ಟೋತ್ತರ ಶತಾಧಿಕ, ಸಹಸ್ರ ನಾಟಕೇರ, ಮಹಾ ಗಣಪತಿ ತೀರ್ಥಪ್ರಸಾದ ವಿತರಣೆ. ಯಾಗ, ಮಹಾ ಪೂಜೆ, ಕಳಶಾಭಿಷೇಕ, ಮಧ್ಯಾಹ್ನ ಮಹಾ ಅನ್ನ ಸಂತರ್ಪಣೆ ನಡೆಯಿತು.
ಕಾರ್ಯಕ್ರಮದ ಸಂಪೂರ್ಣ ನೇತೃತ್ವವನ್ನು ವರಸಿದ್ಧಿ ವಿನಾಯಕ ದೇವಸ್ಥಾನ, ಕೆರಾಡಿ ಇದರ ಅಧ್ಯಕ್ಷ ಕೊಲ್ಲೂರು ಮೂಕಾಂಬಿಕ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆರಾಡಿ ಚಂದ್ರಶೇಖರ ಶೆಟ್ಟಿ ವಹಿಸಿದ್ದರು.
ಈ ಸಂದರ್ಭದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯರಾದ ಡಾ.ಅತುಲಕುಮಾರ ಶೆಟ್ಟಿ, ಬೆಳ್ವೆ ಗಣೇಶ್ ಕಿಣಿ, ಪ್ರಮುಖರಾದ ವಸಂತ್ ಬೆಳ್ವೆ ಮೊದಲಾದವರು ಹಾಜರಿದ್ದರು.