ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಕುಂದಾಪುರ ಶಾಸ್ತ್ರೀ ಸರ್ಕಲ್ ಬಳಿಯ ಮುಖ್ಯರಸ್ತೆಯಲ್ಲಿ ರಾಧಾ ಮೆಡಿಕಲ್ಸ್ ಸೆ.9ರಂದು ಗುರುವಾರ ಶುಭಾರಂಭಗೊಂಡಿತು.
ಬಸ್ರೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ.ಅಪ್ಪಣ್ಣ ಹೆಗ್ಡೆ ಉದ್ಘಾಟನೆ ನೆರವೇರಿಸಿ, ಫಾರ್ಮಸಿಯಲ್ಲಿ 35 ವರ್ಷಗಳ ಸೇವೆ ನೀಡುತ್ತಿರುವ ರಾಧ ಮೆಡಿಕಲ್ ಒಳ್ಳೆಯ ಸೇವೆಯನ್ನು ನೀಡುತ್ತಿದ್ದಾರೆ. ಎಲ್ಲಾ ರೀತಿಯ ಔಷಧ ಒಂದೇ ಕಡೆ ದೊರೆಯುವುದರಿಂದ ಜನರಿಗೆ ಅನುಕೂಲವಾಗುತ್ತದೆ. ಬೆಳೆಯುತ್ತಿರುವ ಕುಂದಾಪುರಕ್ಕೆ ಇಂತಹ ಸಂಸ್ಥೆಗಳ ಅವಶ್ಯಕತೆ ಇದೆ. ರಾಧಾ ಮೆಡಿಕಲ್ಸ್ ಕುಂದಾಪುರದಲ್ಲಿಯೂ ಯಶಸ್ಸು ಗಳಿಸಲಿ ಎಂದು ಶುಭ ಹಾರೈಸಿದರು.
ಕುಂದಾಪುರ ವಿಧಾನ ಸಭಾ ಕ್ಷೇತ್ರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಕಾರ್ಯಕ್ರಮಕ್ಕೆ ಆಗಮಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕುಂದಾಪುರ ಪುರಸಭಾ ಅಧ್ಯಕ್ಷೆ ವೀಣಾ ಭಾಸ್ಕರ್ ಮೆಂಡನ್, ಬೈಂದೂರು ಕ್ಷೇತ್ರದ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಉಜ್ವಲ್ ಗ್ರೂಪ್ ಉಡುಪಿ ಇದರ ಪುರುಷೋತ್ತಮ ಶೆಟ್ಟಿ, ಕುಂದಾಪುರದ ವಿನಯ ನರ್ಸಿಂಗ್ ಹೋಮ್‍ನ ವೈದ್ಯ ಡಾ.ವಿಶ್ವನಾಥ ಶೆಟ್ಟಿ, ಪುರಸಭಾ ಸದಸ್ಯರಾದ ಪ್ರೇಮಲತಾ ರಮೇಶ್ ಪೂಜಾರಿ, ದೇವಕಿ ಸಣ್ಣಯ್ಯ, ಶಾರದ ಕಾರಂತ ಉಪ್ಪಿನಕುದ್ರು, ಉದಯ್ ಕಾರಂತ, ಸಾಯಿರಾಧ ಗ್ರೂಪ್‍ನ ಮನೋಹರ ಎಸ್. ಶೆಟ್ಟಿ ಉಪಸ್ಥಿತರಿದ್ದರು.
ದಿನಕರ್ ರಾವ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಇದು ರಾಧಾ ಮೆಡಿಕಲ್ಸ್‍ನ 7ನೇ ಸಂಸ್ಥೆಯಾಗಿದೆ. ಕಳೆದ 35 ವರ್ಷಗಳಿಂದ ಫಾರ್ಮಸಿಯಲ್ಲಿ ಸೇವೆ ಸಲ್ಲಿಸುತ್ತಿರುವ ರಾಧಾ ಮೆಡಿಕಲ್ ಸಂಪೂರ್ಣ ಹವಾನಿಯಂತ್ರಿತ ಮೆಡಿಕಲ್ ಸ್ಟೋರ್ ವ್ಯವಸ್ಥೆ ಹೊಂದಿದೆ. ಇಲ್ಲಿ ಆಯುರ್ವೇದ, ಜೆನರಿಕ್, ಸರ್ಜಿಕಲ್, ವೆಟರ್ನರಿ, ಜನರಲ್, ಕಾಸ್ಮೆಟಿಕ್ಸ್, ಬೇಬಿ ಕೇರ್, ಫಿಟ್‍ನೆಸ್ ಮತ್ತು ನ್ಯೂಟ್ರಿಷನ್, ಬ್ಯೂಟಿ ಪ್ರೊಡಕ್ಟ್ಸ್ ಮತ್ತು ಸುಗಂಧ ದ್ರವ್ಯ, ಆಹಾರ ಮತ್ತು ಪಾನೀಯಗಳು ದೊರೆಯುತ್ತವೆ.