ಕುಂದಾಪುರ :ಕುಂಭಾಸಿಯಲ್ಲಿ ಸರಣಿ ಅಪಘಾತ : ಒಬ್ಬ ಸಾವು, ಇಬ್ಬರು ಗಂಭೀರ!

0
339

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ:ರಾಷ್ಟ್ರೀಯ ಹೆದ್ದಾರಿ 66ರ ಕುಂಭಸಿಯ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನ ಎದುರುಗಡೆ ಜೀಪು, ಸ್ಕೋಟಿ, ಬೈಕ್ ಹಾಗೂ ಸೈಕಲ್ ನಡುವೆ ಸರಣಿ ಅಪಘಾತದಿಂದ ಸ್ಕೋಟಿ ಸವಾರ ಮೃತಪಟ್ಟ ಘಟನೆ ಭಾನುವಾರ ಸಂಜೆ ನಡೆದಿದೆ.

Click Here

Click Here

ಮೃತಪಟ್ಟ ವ್ಯಕ್ತಿ ತೆಕ್ಕಟೆ ನಾಗರಾಜ್ ದೇವಾಡಿಗ ಎಂದು ಗುರುತಿಸಲಾಗಿದೆ.

ಉಡುಪಿಯಿಂದ ಕುಂದಾಪುರ ಕಡೆಗೆ ಅತೀ ವೇಗ ಅಜಾಗ್ರತೆಯಿಂದ ಬಂದ ಜೀಪು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ಹೋಗುತ್ತಿದ್ದ ಸ್ಕೋಟಿಗೆ ಡಿಕ್ಕಿ ಹೊಡೆದು ಮುಂದೆ ಸಾಗಿ ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ನಂತರ ರಸ್ತೆ ಪಕ್ಕದಲ್ಲಿ ನಿಲ್ಲಿಸಿದ ಬೈಕ್ ಗೆ ಡಿಕ್ಕಿ ಹೊಡೆದು ಚಾಲಕನ ನಿಯಂತ್ರಣ ತಪ್ಪಿ ಮನೆಯೊಂದಕ್ಕೆ ನುಗ್ಗಿದೆ.

ಅಪಘಾತದಲ್ಲಿ ಸ್ಕೂಟಿ ಚಾಲಕ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಅಲ್ಲದೆ ಗಾಯಗೊಂಡ ಬೈಕ್ ಸವಾರ ಮತ್ತು ಸೈಕಲ್ ಸವಾರನನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

Click Here

LEAVE A REPLY

Please enter your comment!
Please enter your name here