ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಬಿಜೆಪಿಯವರು ಹಿಂದುತ್ವ ವನ್ನು ಗುತ್ತಿಗೆ ಪಡೆದಿಲ್ಲ. ಹಿಂದುತ್ವ ಯಾರ ಮನೆಯ ಆಸ್ತಿಯೂ ಅಲ್ಲ. ನಾನೂ ಹಿಂದೂನೇ, ಸಿದ್ಧರಾಮಯ್ಯನೂ ಹಿಂದೂನೆ ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ
ಭಾನುವಾರ ಬೈಂದೂರಿನ ಜೆ.ಎನ್.ಆರ್ ಸಭಾಭವನದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು.
ಬೈಂದೂರಿನಲ್ಲಿ ಐವತ್ತು ಸಾವಿರ ಮತಗಳ ಅಂತರದಿಂದ ಗೋಪಾಲ ಪೂಜಾರಿಯವರನ್ನು ಗೆಲ್ಲಿಸುವ ಪಣ ತೊಟ್ಟಿರುವುದು ಖುಷಿ ಕೊಟ್ಟಿದೆ ಎಂದ ಅವರು, ಕರ್ನಾಟಕದಲ್ಲಿ ಬಿಜೆಪಿ ಭ್ರಷ್ಟ ಆಡಳಿತ ನಡೆಸಿದ್ದರ ಪರಿಣಾಮ ವಲಸೆ ಕಾರ್ಯಕ್ರಮ ನಡೆಯುತ್ತಿದೆ ಎಂದರು.
ಬಿಜೆಪಿ ಡ್ಯಾಂ ಒಡೆದಿದೆ ಎಂದಿದ್ದಕ್ಕೆ ಬೊಮ್ಮಾಯಿ ಕಾಂಗ್ರೆಸ್ ಡ್ಯಾಂನಲ್ಲಿ ನೀರಿಲ್ಲ ಎಂದಿದ್ದಾರೆ. ನಾನು ಬಿಜೆಪಿ ಡ್ಯಾಂ ಒಡೆದಿದೆ ಎಂದು ಹೇಳಿದ್ದನ್ನು ಅವರು ತಪ್ಪಾಗಿ ತಿಳಿದುಕೊಂಡಿದ್ದಾರೆ ಎಂದ ಅವರು, ಡ್ಯಾಂನ ಬೀಗ ಜಗದೀಶ್ ಶೆಟ್ಟರ್ ಕೈಯಲ್ಲಿತ್ತು ಎನ್ನುವುದನ್ನು ಬಿಜೆಪಿಯ ಬೊಮ್ಮಾಯಿ ಮರೆತಿದ್ದಾರೆ ಎಂದು ವ್ಯಂಗ್ಯವಾಡಿದರು.
ನಮ್ಮಲ್ಲಿ ಹಿರಿಯರಿಗೆ ವಿಶೇಷ ಗೌರವವಿದೆ ಎಂದ ಡಿಕೆಶಿ, ಮನೆಯ ಹಿರಿಯರಿಗೆ ವಯಸ್ಸಾದ ತಕ್ಷಣ ಹೊರಹಾಕುವ ಸಂಸ್ಕೃತಿ ಬಿಜೆಪಿಯದ್ದು ಎಂದು ಛೇಡಿಸಿದರು.
ಬೈಂದೂರು ಪುಣ್ಯಕ್ಷೇತ್ರ. ಅಧಿಕಾರ ನಶ್ವರ, ಸಾಧನೆ ಅಜರಾಮರ, ಮತದಾರನೇ ಈಶ್ವರ ಪರಮೇಶ್ವರರು. ಬಿಜೆಪಿ ದೂರ ಇಡ್ಬೇಕು ಅಂತ ಜೆಡಿಎಸ್ ಜೊತೆ ಸೇರ್ಕೊಂಡ್ವಿ. ಆದರೆ ಕುಮಾರವಸ್ಬಾಮಿ ಉಳಿಸಿಕೊಂಡಿಲ್ಲ. ಅವರಿಗೆ ಪಾಪ ಆ ಯೋಗವಿಲ್ಲ ಎಂದು ವ್ಯಂಗ್ಯವಾಡಿದರು.
ದಕ್ಷಿಣ ಕನ್ನಡದ ಮೂವರು ಎಂಎಲ್ಲೆಗಳು ಯಾಕೆ ಕೋರ್ಟಿನಿಂದ ಸ್ಟೇ ತಕ್ಕೊಂಡ್ರಿ ಅಂತ ಹೇಳ್ಬೇಕಲ್ಲ ಎಂದ ಅವರು ನಡೆದಂತೆ ನುಡಿಯುವ ಸಂಸ್ಕೃತಿ ಕಾಂಗ್ರೆಸ್ಸಿನದ್ದು ಎಂದರು.