ಕುಂದಾಪುರ ಮಿರರ್ ಸುದ್ದಿ…
ಕೋಟ: ಕೋಟ ವಲಯ ಸವಿತಾ ಸಮಾಜ ಆಶ್ರಯದಲ್ಲಿ, ಉಡುಪಿ ಜಿಲ್ಲಾ ಸವಿತಾ ಸಮಾಜದ ಸಹಯೋಗದಲ್ಲಿ ಸವಿತಾ ಸಮಾಜದವರಿಗಾಗಿ ಕ್ರೀಡಾಕೂಟ ಕಾರ್ಯಕ್ರಮ ಎ.25ರಂದು ಮಣೂರು ಪಡುಕರೆ ಪ್ರೌಢಶಾಲೆ ಕ್ರೀಡಾಂಗಣದಲ್ಲಿ ಜರಗಿತು.
ಅಂತರರಾಷ್ಟ್ರೀಯ ಕೇಶ ವಿನ್ಯಾಸಗಾರ ಪ್ರಶಸ್ತಿ ಪುರಸ್ಕೃತ ಶಿವರಾಮ ಭಂಡಾರಿ ಮುಂಬೈ ಕ್ರೀಡಾಕೂಟ ಉದ್ಘಾಟಿಸಿ, ಇಂತಹ ಕ್ರೀಡಾಕೂಟಗಳು ಹೆಚ್ಚು-ಹೆಚ್ಚು ನಡೆದಾಗ ಸಮಾಜದ ನಡುವೆ ಉತ್ತಮ ಸಂಬಂಧ ಹಾಗೂ ಸಂಘಟನೆ ಸಾಧ್ಯವಾಗುತ್ತದೆ ಎಂದರು.
ಉದ್ಯಮಿ ರಮೇಶ್ ಭಂಡಾರಿ ಕಾರ್ಕಡ ಕ್ರೀಡಾಜ್ಯೋತಿ ಬೆಳಗಿದರು.
ಸಂಘಟನೆಯ ಅಧ್ಯಕ್ಷ ಮಂಜುನಾಥ ಭಂಡಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಉಡುಪಿ ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷರಾದ ವಿಶ್ವನಾಥ ಭಂಡಾರಿ ನಿಂಜೂರು, ಪ್ರಧಾನ ಕಾರ್ಯದರ್ಶಿ ಸದಾಶಿವ ಬಂಗೇರ, ತಾಲೂಕು ಘಟಕಗಳ ಅಧ್ಯಕ್ಷರಾದ ಶಿವರಾಮ ಭಂಡಾರಿ ಹಂದಾಡಿ, ನಾಗೇಶ್ ಭಂಡಾರಿ ಬಜಗೋಳಿ, ಸುರೇಶ್ ಭಂಡಾರಿ ಹೆಬ್ರಿ, ಸಂತೋಷ್ ಭಂಡಾರಿ ಉಪ್ಪುಂದ, ರಾಜು ಸಿ. ಭಂಡಾರಿ, ವಿನಯ್ ಡಿ. ಭಂಡಾರಿ ಪಡುಬಿದ್ರೆ, ಕೋಟ ವಲಯ ಸವಿತಾ ಸಮಾಜದ ಗೌರವಾಧ್ಯಕ್ಷ ಪ್ರಶಾಂತ್ ಭಂಡಾರಿ, ಹಿರಿಯರಾದ ವಿಟ್ಠಲ ಭಂಡಾರಿ ಸಾಲಿಗ್ರಾಮ, ಕೇಶವ ಭಂಡಾರಿ ಕಟಪಾಡಿ, ಸವಿತಾ ಸಮಾಜದ ಸಹಕಾರಿ ಸಂಘದ ಅಧ್ಯಕ್ಷ ನವೀನ್‍ಚಂದ್ರ ಭಂಡಾರಿ ಮಣಿಪಾಲ, ಜಿಲ್ಲಾ ಪರಿಯಾಳ ಸಂಘದ ಅಧ್ಯಕ್ಷ ಶಂಕರ್ ಸಾಲಿಯಾನ್ ಮೊದಲಾದವರು ಉಪಸ್ಥಿತರಿದ್ದರು.
ಹರೀಶ್ ಭಂಡಾರಿ ಗಿಳಿಯಾರು ಸ್ವಾಗತಿಸಿ, ಜಿಲ್ಲಾ ಸಂಘದ ಗೌರವಾಧ್ಯಕ್ಷ ಬನ್ನಂಜೆ ಗೋವಿಂದ ಭಂಡಾರಿ ಪ್ರಾಸ್ತಾವಿಕ ಮಾತನಾಡಿದರು. ದೈ.ಶಿಕ್ಷಕ ಸತೀಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.