ಕುಂದಾಪುರ ಮಿರರ್ ಸುದ್ದಿ…
ಕೋಟ :ಕೋಟದ ಸಮಾಜ ಸೇವಕ ಆನಂದ ಸಿ ಕುಂದರ್ ಅವರ 75ನೇ ಹುಟ್ಟುಹಬ್ಬದ ಅಮೃತಮಹೋತ್ಸವ ಆನಂದಾಮೃತ ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮ ಬುಧವಾರ ಕೋಟತಟ್ಟು ಜನತಾ ಪ್ರಾಂಗಣದಲ್ಲಿ ಜರಗಿತು.
ರಾಜ್ಯ ಹಿಂದುಳಿದ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಆನಂದ ಕುಂದರ್ ಜನರ ಮಧ್ಯದಲ್ಲಿ ಇದ್ದುಕೊಂಡು ಜನಸೇವೆಗೆ ನಿಂತ ಅಜಾತಶತ್ರು , ಅವರ ಸಮಾಜಮುಖಿ ವ್ಯಕ್ತಿತ್ವ ಎಲ್ಲರಿಗೂ ಆದರ್ಶವಾದದ್ದು,ಮಾತು ಕಡಿಮೆ ಕೃತಿಯಲ್ಲಿ ಅವರ ಕಾರ್ಯ ಸಾಧನೆ, ಅವರ ಸಮಾಜ ಮುಖಿ ಸೇವೆ ಹೀಗೆ ಮುಂದುವಯಲಿ ಎಂದು ಆಶಿಸಿ ಶುಭಹಾರೈಕೆ ಸಲ್ಲಿಸಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಟಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಮಾತನಾಡಿ, ಕುಂದರ್ ಅವರು , ಸಮಾಜದ ಆಸ್ತಿ ಇವರ ಸೇವೆಗೆ ಬೆಲೆ ಕಟ್ಟಲಾಗದು, ಸಮಾಜದ ಬಗ್ಗೆ ಅವರಿಗಿರುವ ಕಾಳಜಿ ಬಹಳ ಅದ್ಭುತ ,ಮಗುವಿನಂತ ಮನಸ್ಸಿನ ಕುಂದರ್ ಸಮಾಜದಿಂದ ಪಡೆದದ್ದು ಸಮಾಜಕ್ಕೆ ಅರ್ಪಿಸಿಕೊಂಡಿದ್ದಾರೆ.ಅವರ ಶೈಕ್ಷಣಿಕ ಸಾಮಾಜಿಕ ,ಧಾರ್ಮಿಕ ಕ್ಷೇತ್ರದ ಕಾರ್ಯಗಳನ್ನು ಕೊಂಡಾಡಿದರು.
ಡಾ.ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್‍ನ ಪ್ರವರ್ತಕ ನಾಡೋಜ ಡಾ| ಜಿ. ಶಂಕರ್, ವೇ.ಮೂ ಮದುಸೂದನ ಬಾಯರಿ, ವೇಮೂ ಜಿ ರಾಮ ಪ್ರಸಾದ್, ಅಡಿಗ, ಧಾರ್ಮಿಕ ಚಿಂತಕ ಕಟ್ಕೇರೆ ಪ್ರೇಮಾನಂದ ಶೆಟ್ಡಿ,ಕೋಟ ಸಿ ಎ ಬ್ಯಾಂಕ್ ಅಧ್ಯಕ್ಷ ಜಿ.ತಿಮ್ಮ ಪೂಜಾರಿ, ಸಾಮಾಜಿಕ ಚಿಂತಕ ಇಬ್ರಾಹಿಂ ಸಾಹೇಬ್ ಹಂಗಾರಕಟ್ಟೆ,ಉದ್ಯಮಿ ಆನಂದ್ ಸುವರ್ಣ, ಕುಂದರ್ ಪುತ್ರರಾದ ಪ್ರಶಾಂತ್ ಕುಂದರ್, ರಕ್ಷಿತ್ ಕುಂದರ್, ಪುತ್ರಿ ರಚನಾ ಕುಂದರ್, ಸೊಸೆಯಂದಿರರಾದ ವೈಷ್ಣವಿ ಆರ್ ಕುಂದರ್,ದಿವ್ಯಲಕ್ಷ್ಮೀ ಪಿ ಕುಂದರ್,ಅವರ ಕುಟುಂಬಿಕರು ಮತ್ತಿತರರು ಉಪಸ್ಥಿತರಿದ್ದರು. ಕೋಟದ ಸಮುದ್ಯತಾ ಇವೆಂಟ್ ವ್ಯವಸ್ಥೆ ಕಲ್ಪಿಸಿತು
ಕಾರ್ಯಕ್ರಮದಲ್ಲಿ ವಿಶೇಷ
ಜನತಾ ಸಂಸ್ಥೆ ಆವರದಿಂದ ಬ್ಯಾಂಡ್ ಸೆಟ್ ಸಂಗೀತದೊಂದಿಗೆ ವಾಹನದ ಮೂಲಕ ಮೆರವಣಿಗೆಯಲ್ಲಿ ಗೀತಾ ಆನಂದ್ ಕುಂದರ್ ಕರೆತರಲಾಯಿತು.
ಯಕ್ಷ ನಾಟ್ಯ ಗಾನ ವೈಭವ,ಕುಂದಾಪುರ ಕನ್ನಡದ ಹೆಂಗ್ಸ್ರ್ ಪಂಚೇತಿ,ಪ್ರಸಿದ್ಧ ಗಾಯಕರನ್ನೊಳಗೊಂಡ ಸಂಗೀತ ರಸಮಂಜರಿ ಜರಗಿತು.
ಗಮನ ಸೆಳೆದ ಕುಂದರ್ ಭಾವಯಾನ
ಇಡೀ ಕಾರ್ಯಕ್ರಮದಲ್ಲಿ ವಿಶೇಷವಾಗಿ ನಿರೂಪಕ ರಾಘವೇಂದ್ರ ಕಾಂಚನ್ ಪಡುಕರೆ ಇವರ ಮೂಲಕ ಕುಂದರ್ ಬದುಕಿನ ಭಾವಯಾನ ಸಂದರ್ಶನದ ಮೂಲಕ ಅಭಿಮಾನಿಗಳಿಗೆ ಒಂದು ವರೆ ತಾಸು ಉಣ ಬಡಿಸಲಾಯಿತು.ಸುಮಾರು 80 ಕ್ಕೂ ಅಧಿಕ ಸ್ಥಳೀಯ ಸಂಘಸಂಸ್ಥೆಗಳು,ದೇವಸ್ಥಾನದ ಆಡಳಿತ ಮಂಡಳಿಗಳು,ವಿವಿಧ ಉದ್ಯಮಿಗಳು ಕುಂದರ್‍ರವರಿಗೆ ಅಭಿನಂದನೆ ಸಲ್ಲಿಸಿ ಶುಭಹಾರೈಕೆ ಸಲ್ಲಿಸಿದರು.
ಪತ್ರಕರ್ತ ಕೆ.ಸಿ, ರಾಜೇಶ್, ನಿರೂಪಕ ಅವಿನಾಶ್ ಕಾಮತ್ ಕಾರ್ಯಕ್ರಮ ನಿರೂಪಿಸಿದರು. ರಮೇಶ್ ಹೆಚ್ ಕುಂದರ್, ಉದಯ್ ಶೆಟ್ಟಿ ಮಣೂರು ,ರವಿಕಿರಣ್ ಕೋಟ ಕಾರ್ಯಕ್ರಮ ಸಂಯೋಜಿಸಿದರು.