ಕುಂದಾಪುರ ಮಿರರ್ ಸುದ್ದಿ…


ಕುಂದಾಪುರ :ಭಾರತೀಯ ಜನತಾ ಪಕ್ಷ ಎಂದರೆ ಅಭಿವೃದ್ದಿ. ಇವತ್ತು ಕೇಂದ್ರ, ರಾಜ್ಯದಲ್ಲಿ ಅಭಿವೃದ್ದಿಯನ್ನು ಕಂಡಿದ್ದೇವೆ. ಉಡುಪಿ ಜಿಲ್ಲೆಯಲ್ಲಿ ಐದು ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ. ಕುಂದಾಪುರ ಕ್ಷೇತ್ರದಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟರು ನಿರಂತರ ಗೆಲುವು ಸಾಧಿಸಿದ ರೀತಿಯಲ್ಲಿಯೇ ಕಿರಣ್ ಕೊಡ್ಗಿ ಗೆಲುವು ಸಾಧಿಸಲಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಅವರು ಕುಂದಾಪುರದ ಸಂಗಮ್ ಪರಿಸರದಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ರಾಜ್ಯ ಮತ್ತು ಕೇಂದ್ರದಲ್ಲಿ ಒಂದೇ ಸರ್ಕಾರವಿದ್ದರೆ ಅಭಿವೃದ್ದಿ ವೇಗ ಪಡೆಯುತ್ತದೆ. ಕೇಂದ್ರದ ಯೋಜನೆಗಳು ರಾಜ್ಯದಲ್ಲಿ ಸಮರ್ಪಕವಾಗಿ ಅನುಷ್ಠಾನವಾಗಲು ಡಬ್ಬಲ್ ಇಂಜಿನ್ ಸರ್ಕಾರ ಇರಬೇಕು. ಈ ಬಾರಿ ಪಕ್ಷ ಹೆಚ್ಚಿನ ಸಂಖ್ಯೆಯಲ್ಲಿ ಯುವಕರಿಗೆ ಟಿಕೆಟು ನೀಡಿದೆ. ಕೇಂದ್ರ ಸರ್ಕಾರದ ಜನತೆಗೆ ನೀಡಿದ ಯೋಜನೆಗಳು ಪ್ರತಿಯೋರ್ವರನ್ನು ತಲುಪಿಸಿದೆ ಎಂದರು.
ಅಭ್ಯರ್ಥಿ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ ಹಾಲಾಡಿ ಶ್ರೀನಿವಾಸ ಶೆಟ್ಟರು ರಾಜಕೀಯ ನಿವೃತ್ತಿ ಪಡೆದಿಲ್ಲ. ಚುನಾವಣೆಗೆ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ನಮ್ಮೆಲ್ಲರ ಅಪೇಕ್ಷೆ ಹಾಲಾಡಿಯವರೇ ಸ್ಪರ್ಧೆ ಮಾಡಬೇಕು ಎನ್ನುವುದಾಗಿತ್ತು. ಪಕ್ಷ ನನಗೆ ಅವಕಾಶ ನೀಡಿತು. ಹಾಲಾಡಿಯವರ ಮಾರ್ಗದರ್ಶನದಲ್ಲಿ ಚುನಾವಣೆ ಎದುರಿಸುತ್ತಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಚುನಾವಣಾ ಪ್ರಭಾರಿ ಶ್ಯಾಮಲ ಕುಂದರ್, ಮಂಡಲದ ಮಾಜಿ ಅಧ್ಯಕ್ಷ ಸುರೇಶ ಶೆಟ್ಟಿ ಕಾಡೂರು, ಪುರಸಭಾ ಸದಸ್ಯ ಮೋಹನದಾಸ ಶೆಣೈ, ಭಾಸ್ಕರ ಪುತ್ರನ್ ಉಪಸ್ಥಿತರಿದ್ದರು.