ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಆನಗಳ್ಳಿ ಗ್ರಾಮದ ಕಳಂಜೆ ರಾಮಕೃಷ್ಣ ಭಟ್ ಇವರ ಮನೆಗೆ ನಾಮಫಲಕ ಅನಾವರಣವನ್ನು ಯಕ್ಷಗಾನ ವಿಮರ್ಶಕರು ದಿನೇಶ್ ಉಪ್ಪೂರು ಅನಾವರಣಗೊಳಿಸಿದರು.
ಕಾಯ೯ಕ್ರಮ ಅಧ್ಯಕ್ಷತೆಯನ್ನು ಆನಗಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಲಾರೇನ್ಸ್ ಡಿ ಸೋಜ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಶಿವ೯ ಎಮ್.ಎಸ್.ಆರ್.ಎಸ್ ಕಾಲೇಜಿನ ಸಹ ಪ್ರಾಧ್ಯಾಪಕರಾದ ಮುರುಗೇಶ್.ಟಿ ಭಾರತ ಸ್ವಾತಂತ್ರ್ಯಕ್ಕೆ ಕಳಂಜೆ ರಾಮಕೃಷ್ಣ ಭಟ್ ಅವರ ಸೇವೆ ಮತ್ತು ಕೊಡುಗೆಯ ಬಗ್ಗೆ ವಿಸ್ತರಿಸಿದರು.
ಈ ಸಂದರ್ಭ ಮುಖ್ಯ ಅತಿಥಿಯಾಗಿ ಕುಂದಾಪುರದ ಉಪ ತಹಶೀಲ್ದಾರಾದ ರಾಮಚಂದ್ರ ಹೆಬ್ಬಾರ್, ಶಿವ೯ ಎಮ್.ಎಸ್.ಆರ್.ಎಸ್. ಕಾಲೇಜಿನ ಗಣೇಶ್, ಆನಗಳ್ಳಿ ಗೆಳೆಯರ ಬಳಗ ಅಧ್ಯಕ್ಷರಾದ ರವಿ ಉಪಸ್ಥಿತರಿದ್ದರು.
ಜನ ಸೇವಾ ಟ್ರಸ್ಟ್ (ರಿ) ಮೂಡುಗಿಳಿಯಾರು, ಎನ್.ಎಸ್.ಎಸ್ ಘಟಕ ಎಮ್.ಎಸ್.ಆರ್.ಎಸ್ ಕಾಲೇಜು ಶಿವ೯, ಗೆಳೆಯರ ಬಳಗ ಆನಗಳ್ಳಿ, ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಸಹಕಾರ ನೀಡಿದರು. ಕಾಯ೯ಕ್ರಮ ದಲ್ಲಿ ‘ಸ್ವರಾಜ್ಯ 75’ ಕಾಯ೯ಕ್ರಮದ ಸಂಚಾಲಕರಾದ ಪ್ರದೀಪ ಕುಮಾರ್ ಬಸ್ರೂರು ನಿರೂಪಿಸಿದರು. ವಸಂತ ಗಿಳಿಯಾರು ಪ್ರಾಸ್ತಾವಿಕ ಮಾತುಗಳನ್ನಾಡಿದರು, ಅಶೋಕ್ ಕೆರೆಕಟ್ಟೆ ಧನ್ಯವಾದ ಗೈದರು, ಅಂತಿಮವಾಗಿ ರಾಷ್ಟ್ರ ಧ್ವಜ ಹಸ್ತಾಂತರಿಸಲಾಯಿತು.