ಕುಂದಾಪುರ ಮಿರರ್ ಸುದ್ದಿ…
ಕೋಟ: ದೇವಾಡಿಗರ ಸಂಘ ಕೋಟ ಸಾಲಿಗ್ರಾಮ ಇದರ 10ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ವಿದ್ಯಾರ್ಥಿವೇತನ ಕಾರ್ಯಕ್ರಮ ಭಾನುವಾರ ಕೋಟ ಮಾಂಗಲ್ಯ ಮಂದಿರದಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ 75ನೇ ಹುಟ್ಟುಹಬ್ಬದ ಪ್ರಯುಕ್ತ ಅನಂದ ಸಿ. ಕುಂದರ್ ಇವರನ್ನು ಸಂಘದ ವತಿಯಿಂದ ಗೌರವಿಸಲಾಯಿತು.
ಧಾರ್ಮಿಕ ವಿಧಿವಿಧಾನಗಳನ್ನು ವೇ.ಮೂ ಸುಬ್ರಹ್ಮಣ್ಯ ಅಡಿಗ ನೆರವೆರಿಸಿದರು.
ಮುಖ್ಯ ಅತಿಥಿಗಳಾಗಿ ಬಾರಕೂರು ಏಕನಾಥೇಶ್ವರ ದೇವಸ್ಥಾನ ಆಡಳಿತ ಮಂಡಳಿಯ ಸದಸ್ಯರಾದ ಜನಾರ್ದನ ದೇವಾಡಿಗ, , ಗಣೇಶ್ ದೇವಾಡಿಗ, ನರಸಿಂಹ ದೇವಾಡಿಗ ಉಡುಪಿ, ಕೋಟ ಗ್ರಾಮ ಪಂಚಾಯತಿ ಅಧ್ಯಕ್ಷ ಅಜಿತ್ ದೇವಾಡಿಗ ,
ಕೋಟ ಸಾಲಿಗ್ರಾಮ ದೇವಾಡಿಗ ಸಂಘದ ಅಧ್ಯಕ್ಷ ನರಸಿಂಹ ದೇವಾಡಿಗ, ಕಾರ್ಯದರ್ಶಿ ಸತೀಶ್ ದೇವಾಡಿಗ ,ಕಾರ್ಯಕಾರಿ ಮಂಡಳಿಯ ಸದಸ್ಯರಾದ ಗಿರೀಶ್ ದೇವಾಡಿಗ ಕೃಷ್ಣದೇವಾಡಿಗ ಆನಂದ ದೇವಾಡಿಗ, ದಿನೇಶ್ ದೇವಾಡಿಗ, ಮತ್ತು ದೇವಾಡಿಗ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಗೌರವಾಧ್ಯಕ್ಷ ಕುಮಾರ್ ದೇವಾಡಿಗ ಸ್ವಾಗತಿಸಿದರು.
ಕಾರ್ಯಕ್ರಮವನ್ನು ರಾಘವೇಂದ್ರ ದೇವಾಡಿಗ ನಿರೂಪಿಸಿದರು ವಂದಿಸಿದರು.