ಕೋಡಿ ಕನ್ಯಾಣ – ಶೀಘ್ರದಲ್ಲೇ ಹಕ್ಕುಪತ್ರ ವಿತರಣೆ: ಜಯಪ್ರಕಾಶ್ ಹೆಗ್ಡೆ ವಿಶ್ವಾಸ

0
340

ಕುಂದಾಪುರ ಮಿರರ್ ಸುದ್ದಿ…

ಕೋಟ: ಬ್ರಹ್ಮಾವರ ತಾಲೂಕಿನ ಕೋಡಿ ಕನ್ಯಾಣದ ಭಾಗದ ಜನರ ಹಕ್ಕುಪತ್ರದ ಸಮಸ್ಯೆ ಮುಕ್ತಿ ದೊರಕಲಿದ್ದು ಕೂಡಲೇ ಹಕ್ಕುಪತ್ರವನ್ನು ವಿತರಣೆ ಮಾಡುವ ವಿಶ್ವಾಸ ಹೊಂದಿದ್ದೇವೆ ಎಂದು ರಾಜ್ಯದ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದರು.

ಅವರು ಗುರುವಾರ ಕೋಡಿ ಕನ್ಯಾಣಕ್ಕೆ ಆಗಮಿಸಿ ಇಲ್ಲಿನ ಜನರ ಬಹುವರ್ಷದ ಬೇಡಿಕೆ ಹಕ್ಕುಪತ್ರ ಕುರಿತು ಸಾರ್ವಜನಿಕರೊಂದಿಗೆ ಮಾತನಾಡಿದರು.

Click Here

Click Here

ಬ್ರಹ್ಮಾವರ ವಿಧಾನಸಭಾ ಕ್ಷೇತ್ರ ಇರುವಾಗಲೇ ಈ ಸಮಸ್ಯೆ ಬಗೆಹರಿಸಲು ನಾನು ಮತ್ತು ನಾಡೋಜ ಡಾ. ಜಿ.ಶಂಕರ್ ಪ್ರಯತ್ನಿಸಿದ್ದೇವೆ. ಅದಾದ ನಂತರ ರಾಜಕೀಯ ವಿದ್ಯಾಮಾನದಿಂದ ನಿರಂತವಾಗಿ ಇಲ್ಲಿನ ಸಾರ್ವಜನಿಕರು ನಮ್ಮ ಸಂಪರ್ಕದಲ್ಲಿದ್ದು, ನಾವುಗಳು ಅವರ ಸಮಸ್ಯೆಗಳ ಬಗ್ಗೆ ಹೆಚ್ಚಿನ ಗಮನ ಹರಿಸಿದ್ದೇವೆ. ಈಗಿನ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಹಕಾರದಿಂದ ಜನರ ಸಮಸ್ಯೆ ಬಗೆಹರಿಯುವ ಹಂತದಲ್ಲಿದೆ. ಅನಾದಿನ 103ಪ್ರಕರಣಗಳು ಇತ್ಯರ್ಥಗೊಳ್ಳಲಿದ್ದು, 178 ಪರಂಬೋಕು, ಸಮುದ್ರ ಪ್ರದೇಶ 132 ಪ್ರಕರಣಗಳು ಶೀಘ್ರದಲ್ಲೇ ಸರಕಾರದ ಗಮನ ಸೆಳೆದು ಬಗೆಹರಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸೆಂಟ್ಸ್ ಒಂದಕ್ಕೆ ಐದು ಸಾವಿರ ರೂಪಾಯಿ ಮಾನದಂಡ ಕಡಿತಗೊಳಿಸಲು ಸರಕಾರದ ಗಮನ ಸೆಳೆಯಲು ಜಯಪ್ರಕಾಶ್ ಹೆಗ್ಡೆ ಅವರಲ್ಲಿ ಮನವಿ ಮಾಡಿದ ಗ್ರಾಮಸ್ಥರು, ನಗರ ವ್ಯಾಪ್ತಿಗೆ ಸೆಂಟ್ಸ್ 600 ರೂಪಾಯಿ ಇದ್ದು,ಗ್ರಾಮೀಣ ಭಾಗದಲ್ಲಿ 250 ರೂಪಾಯಿ ಇದ್ದು, ಅದೇ ಮಾನದಂಡದ ಕೋಡಿಗೂ ಅನ್ವಯಿಸಲಿ. ಜತೆಗೆ ಹಂಗಾರಕಟ್ಟೆ ಅಳಿವೆಯಿಂದ ಕೋಡಿ ಕನ್ಯಾಣ ಭಾಗದ 3ಕಿಮೀ ವ್ಯಾಪ್ತಿಯ ಜೆಟ್ಟಿ ಹೂಳೆತ್ತಿ ಅಭಿವೃದ್ಧಿ ಪಡಿಸುವ ಕುರಿತಂತೆ ಪ್ರಸ್ತುತ ಸರಕಾರದ ಗಮನ ಸೆಳೆಯಲು ಮೀನುಗಾರ ಮುಖಂಡರು ಜಯಪ್ರಕಾಶ್ ಹೆಗ್ಡೆ ಅವರಲ್ಲಿ ಮನವಿ ಮಾಡಿದರು. ಈ ಕುರಿತಂತೆ ಬಂದರು ಮತ್ತು ಮೀನುಗಾರಿಕೆ, ಸಣ್ಣ ನೀರಾವರಿ ಇಲಾಖೆ ಸಚಿವರ ಜತೆ ಚರ್ಚೆ ನಡೆಸುತ್ತೇನೆ ಎಂದು ಭರವಸೆ ನೀಡಿದರು.

ಕೋಡಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಲಕ್ಷ್ಮಣ್ ಸುವರ್ಣ, ಕೋಡಿ ಮೀನುಗಾರಿಕಾ ಸಹಕಾರಿ ಸಂಘದ ಅಧ್ಯಕ್ಷ ಅಶೋಕ್ ತಿಂಗಳಾಯ, ಕೋಡಿ ಗ್ರಾಮ ಪಂಚಾಯಿತಿ ಸದಸ್ಯ ಅಂತೋನಿ ಡಿ.ಸೋಜ, ಸ್ಥಳೀಯರಾದ ಚಂದ್ರ ಕಾಂಚನ್, ಕೃಷ್ಣಪ್ಪ ಬಂಗೇರ, ಕೃಷ್ಣ ಖಾರ್ವಿ, ಆಶಾ ಹಾಗೂ ಹೆಗ್ಡೆ ಅಭಿಮಾನಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here