ಹೆಮ್ಮಾಡಿ :ರಾಷ್ಟ್ರೀಯ ಹೆದ್ದಾರಿಯಲ್ಲಿ ಪಲ್ಟಿಯಾದ ಕಾರು – ಪ್ರಯಾಣಿಕರು ಪಾರು

0
413

ಕುಂದಾಪುರ ಮಿರರ್ ಸುದ್ದಿ…

Click Here

Click Here

ಕುಂದಾಪುರ: ಇಲ್ಲಿನ ಜಾಲಾಡಿ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಇಂದು ಬೆಳಿಗ್ಗೆ ಸುರಿದ ಮೊದಲ ಮಳೆಯಲ್ಲಿ ಕಾರೊಂದು ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿ ಮತ್ತೊಂದು ಕಾರಿಗೆ ಡಿಕ್ಕಿಯಾಗಿದೆ. ಆದರೆ ಕಾರಿನಲ್ಲಿದ್ದವರು ಪವಾಡ ಸದೃಶ ಪಾರಾಗಿದ್ದಾರೆ. ಸಿಗಂಧೂರಿನಿಂದ ಬ್ರಹ್ಮಾವರಕ್ಕೆ ಪ್ರಯಾಣಿಸುತ್ತಿದ್ದ ಮಹಿಂದ್ರ ಕ್ವಾಂಟೋ ವಾಹನ ಜಾಲಾಡಿ ಎಂಬಲ್ಲಿ ಬರುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ರಾಷ್ಷಟ್ರೀಯ ಹೆದ್ದಾರಿಯ ಡಿವೈಡರ್ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಪಕ್ಕದ ರಸ್ತೆಗೆ ಮಗುಚಿ ಬಿದ್ದಿದೆ. ಇದೇ ಸಂದರ್ಭ ಪಕ್ಕದ ರಸ್ತೆಯಲ್ಲಿ ಬರುತ್ತಿದ್ದ ರೆಡಿಗೋ ಕಾರಿಗೆ ಡಿಕ್ಕಿಯಾಗಿದ್ದು, ಆ ಕಾರೂ ಭಾಗಶಃ ಹಾನಿಗೊಳಗಾಗಿದೆ. ಪಲ್ಟಿಯಾಗಿರುವ ಮಹೀಂದ್ರ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ. ಮಹೀಂದ್ರದಲ್ಲಿ ತಮದೆ ಹಾಗೂ ಮಗಳು ಪ್ರಯಾಣಿಸುತ್ತಿದ್ದು, ಬ್ರಹ್ಮಾವರ ಎಸ್.ಎಂ.ಎಸ್. ಸ್ಕೂಲಿಗೆ ಮಗಳನ್ನು ದಾಖಲಾತಿ ಮಾಡುವ ಉದ್ದೇಶದಿಂದ ಬರುತ್ತಿದ್ದರು ಎನ್ನಲಾಗಿದೆ. ಹೆದ್ದಾರಿ ಪಕ್ಕದಲ್ಲಿ ಆಳವಾದ ಕಂದಕವಿದ್ದು, ಅದೃಷ್ವಶಾತ್ ಕೆಳಕ್ಕುರುಳದ ಪರಿಣಾಮ ಸಂಭವಿಸಬುದಾಗಿದ್ದ ದುರಂತ ತಪ್ಪಿದೆ. ಕುಂದಾಪುರ ಸಂಚಾರಿ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Click Here

LEAVE A REPLY

Please enter your comment!
Please enter your name here