ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ:ಇಲ್ಲಿನ ಡಾ.ಬಿ.ಬಿ. ಹೆಗ್ಡೆ ಕಾಲೇಜಿನ ಅರ್ಧ ವಾರ್ಷಿಕ ವಾರ್ತಾ ಸಂಚಿಕೆಯಾದ ಕ್ಯಾಂಪಸ್ ವಾಯ್ಸ್ ನ್ನು ಕುಂದಾಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಕಾಳಾವರದ ಉದಯ್ ಕುಮಾರ್ ಶೆಟ್ಟಿಯವರು ಬಿಡುಗಡೆಗೊಳಿಸಿದರು.
ಕಳೆದ ಎರಡು ವರ್ಷಗಳಿಂದ ಕೋವಿಡ್ ಕಾರಣಕ್ಕೆ ಶೈಕ್ಷಣಿಕ ವ್ಯವಸ್ಥೆಯಲ್ಲಿ ಸ್ಥಗಿತ ಉಂಟಾಗಿದೆ. ಆದರೆ ನಮಗೆ ಸಿಕ್ಕಿದ ದಿನಗಳನ್ನೆ ಬಳಸಿಕೊಂಡು, ವಿದ್ಯಾರ್ಥಿಗಳಿಗೆ ಕ್ರೀಡಾ ದಿನಾಚರಣೆ, ಎಥ್ನಿಕ್ ಡೇ ಆಯೋಜಿಸುವುದರ ಜೊತೆಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ನಮ್ಮ ಸಂಸ್ಥೆಯ ಕಾರ್ಯದಕ್ಷತೆ ಮತ್ತು ಗುಣಮಟ್ಟದ ಪ್ರತೀಕ. ಈ ಹಿನ್ನೆಲೆಯಲ್ಲಿ ನಮ್ಮ ಸಂಸ್ಥೆ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ವಿಶಿಷ್ಠ ಸಾಲಿನಲ್ಲಿ ಗುರುತಿಸಿಕೊಂಡಿದೆ ಎಂದು ಸಂಸ್ಥೆಯ ಪ್ರಾಂಶುಪಾಲರಾದ ಪ್ರೊ.ಕೆ. ಉಮೇಶ್ ಶೆಟ್ಟಿಯವರು ತಿಳಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಉಪಪ್ರಾಂಶುಪಾಲರಾದ ಚೇತನ್ ಶೆಟ್ಟಿ ಕೋವಾಡಿ, ವಿದ್ಯಾರ್ಥಿ ಕ್ಷೇಮಪಾಲ ಸಮಿತಿಯ ಸಂಯೋಜಕ ಶಿವರಾಜ್ ಅರೆಹೊಳೆ, ಕ್ಯಾಂಪಸ್ ವಾಯ್ಸ್ ವಾರ್ತಾ ಸಂಚಿಕೆಯ ನಿರ್ವಾಹಕ ಸಂಪಾದಕಿ ಅಮೃತಾ, ಮತ್ತು ಸಂಪಾದಕ ಮಂಡಳಿಯ ಸದಸ್ಯರಾದ ಪ್ರಥ್ವಿಶ್ರೀ ಶೆಟ್ಟಿ, ದೀಪಿಕಾ ರಾಘವೇಂದ್ರ, ಯೋಗಿಶ್ ಶಾನುಭೋಗ್ ಹಾಗೂ ತ್ರಿವರ್ಣ ಕಂಡ್ಲೂರು ಉಪಸ್ಥಿತರಿದ್ದರು.