ಕುಂದಾಪುರ ಮಿರರ್ ಸುದ್ದಿ….
ಬೈಂದೂರು : ತಾಲೂಕು ಗುಜ್ಜಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಳಿಹಿತ್ಲು ವಿನ ಬುಡ್ಡು ದೇವಾಡಿಗರ ಮನೆ ಬಳಿ ಹಾಗೂ ದೊಡ್ಮನೆ ಮನೆಯವರ ಜಾಗದಲ್ಲಿ, ದೊಡ್ಮನೆ ಹಾಗೂ ನಾಗಜ್ಜಿಯ ಮನೆ ಬಳಿಯಲ್ಲಿ ಲಿಂಗ ಮುದ್ರಿಕೆ ಕಲ್ಲು ಕಂಡು ಬಂದಿದೆ.
ಸಾಮಾನ್ಯವಾಗಿ ಲಿಂಗ ಮುದ್ರಿಕೆ ಕಲ್ಲಿನಲ್ಲಿ ಸೂರ್ಯ, ಚಂದ್ರ, ಶಿವಲಿಂಗ ಕಂಡು ಬರುವಂತೆ ಈ ಕಲ್ಲಿನಲ್ಲಿ ಕಂಡು ಬಂದಿದೆ. ಸೂರ್ಯ ಚಂದ್ರ ಇರುವ ತನಕ ಅಜರಾಮರವಾಗಿರಲಿ ಎಂಬ ಸಂದೇಶ ನೀಡುವಂತಿದೆ.
ಹಿಂದೆ ಶೈವರು ಶಿವನ್ನು,ವೈಷ್ಣವರು ವಿಷ್ಣುವನ್ನು, ಜೈನರು ತೀಥ೯ಂಕರರನ್ನು ಆರಾಧಿಸುವುದು ಸಾಮಾನ್ಯ ವಾಗಿತ್ತು.ಹಾಗೇ ಅವರವರ ಗಡಿಗಳಿಗೆ ಗುಡಿ ಗುರುತುಗಳನ್ನು ಮಾಡಿಕೊಳ್ಳುತ್ತಿದ್ದರು. ಶೈವರು ಲಿಂಗ ಮುದ್ರಿಕೆ ಕಲ್ಲುಗಳನ್ನು ಹಾಕಿಕೊಂಡರೆ ವೈಷ್ಣವರು ವಾಮನ ಮುದ್ರಿಕೆ ಕಲ್ಲುಗಳನ್ನು ಹಾಕುತ್ತಿದ್ದರು ಹಾಗೇ ಜೈನರು ಮುಕ್ಕೊಡೆ ಕಲ್ಲುಗಳನ್ನು ಹಾಕಿಕೊಂಡು ತಮ್ಮ ತಮ್ಮ ಗಡಿಗಳನ್ನು ಸಾಮಾನ್ಯವಾಗಿ ಗುರುತಿಸುವಂತೆ ಮಾಡಿಕೊಳ್ಳುತ್ತಿದ್ದರು.
ಗುಜ್ಜಾಡಿಯ ಈ ಪರಿಸರದಲ್ಲಿ ಸಿಕ್ಕಿರುವ ಕಲ್ಲು ಲಿಂಗ ಮುದ್ರಿಕೆ ಕಲ್ಲಾಗಿದ್ದು, ಸಮೀಪದಲ್ಲಿ ಗುಹೇಶ್ವರ ದೇವಾಲಯ ಕೂಡಾ ಇರುವುದಾಗಿ ತಿಳಿದು ಬಂದಿದೆ.
ಲಿಂಗ ಮುದ್ರಿಕೆ ಕಲ್ಲುಗಳನ್ನು ಪರಿಚಯಿಸಲು ಪ್ರದೀಪ ಕುಮಾರ್ ಬಸ್ರೂರು, ಮಹೇಶ್ ಕಿಣಿ, ಇವರಿಗೆ ಸುನೀಲ್ ಕುಮಾರ್ ಗುಳ್ಳಾಡಿ, ಕಳಿಹಿತ್ಲು, ಬುಡ್ಡು ದೇವಾಡಿಗ, ರವಿ ಸಿ ಪೂಜಾರಿ ದೊಡ್ಮನೆ, ಜಯರಾಜ್ ಪೂಜಾರಿ ದೊಡ್ಮನೆ, ರವೀಶ್ ಗುಜ್ಜಾಡಿ, ಗಣೇಶ್ ದೇವಾಡಿಗ ಕಳಿಹಿತ್ಲು ಇವರು ಸಹಕರಿಸಿದ್ದಾರೆ