ಕುಂದಾಪುರ ಮಿರರ್ ಸುದ್ದಿ…
ಕೋಟ: ಪಾಂಡೇಶ್ವರ ಶಾಲೆಯ ಶಿಕ್ಷಕ ಕೃಷ್ಣರ ಮನವಿ ಮೇರೆಗೆ ಪಾಂಡೇಶ್ವರ ಶಾಲೆಯ ಹಳೆ ವಿದ್ಯಾರ್ಥಿ ರವೀಶ್ ಶ್ರೀಯಾನ್ ನಿರ್ದೇಶನದ ಹಿನ್ನಲ್ಲೆಯಲ್ಲಿ ಕೋಟತಟ್ಟು ಬಾರಿಕೆರೆ ಉದ್ಯಮಿ ಶಬರಿ ಕನ್‍ಸ್ಟ್ರಕ್ಷನ್ ಮಾಲಿಕ ಸುರೇಶ ಕಾಂಚನ್ ಇವರಿಂದ ಸಾಸ್ತಾನ ಪಾಂಡೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ 72 ಬಡ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಣಾ ಭಾನುವಾರ ನಡೆಯಿತು.
ಮೊಗವೀರ ಗ್ರಾಮ ಸಭಾ ಮೂಡಹಡು ಇದರ ಉಪ ಗುರಿಕಾರ ಮತ್ತು ಪಾಂಡೇಶ್ವರ ಗ್ರಾಮ ಪಂಚಾಯತ್ ಸದಸ್ಯ ರವೀಶ್ ಶ್ರೀಯಾನ್ , ಕೋಟತಟ್ಟು ಬಾರಿಕೆರೆ ಉದ್ಯಮಿ ಶಬರಿ ಕನ್‍ಸ್ಟ್ರಕ್ಷನ್ ಮಾಲಿಕ ಸುರೇಶ ಕಾಂಚನ್,ಎಸ್‍ಡಿಎಮ್‍ಸಿ ಕಾರ್ಯದರ್ಶಿ ಸುರೇಶ ಪೂಜಾರಿ, ಶಾಲಾ ಅಧ್ಯಾಪಕ ಕೃಷ್ಣ ಪೂಜಾರಿ, ಶಾಲಾ ಹಳೆ ವಿದ್ಯಾರ್ಥಿ ಶೇಖರ್ ಪೂಜಾರಿ ಮೂಡಕಟ್ಟು, ಮತ್ತು ಮೊಗವೀರ ಗ್ರಾಮ ಸಭಾ ಮಾಜಿ ಕಾರ್ಯದರ್ಶಿ ಕೃಷ್ಣ ಬಂಗೇರ ಮತ್ತು ಮೊಗವೀರ ಗ್ರಾಮ ಸದಸ್ಯರಾದ ಸಚಿನ್ ಶ್ರೀಯಾನ್, ಅಭಿಜಿತ್ ಕಾಂಚನ್, ಶೇಖರ್ ಕಾಂಚನ್, ಕವಿತಾ ನಂದಿಮನೆ, ಉಪಸ್ಥಿತರಿದ್ದರು.